Advertisement
ಉಡುಪಿ ಜಿಲ್ಲಾ ಪೊಲೀಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರಸ್ ಕ್ಲಬ್ ಸಹಯೋಗದಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗಿರುವ ಮಾದಕ ವ್ಯಸನ ವಿರೋಧಿ ಮಾಸಾಚರಣೆಯನ್ನು ಆ.11ರಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಮನೋ ರೋಗ ತಜ್ಞ ಡಾ| ಪಿ.ವಿ.ಭಂಡಾರಿ ಅವರು ಮಾತನಾಡಿ, ಗಾಂಜಾದಂತಹ ಮಾದಕ ವಸ್ತುಗಳು, ಇತರ ಕೆಲವು ಮಾತ್ರೆಗಳು ದೊರೆಯದಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷೆಯ ಭಯ ಹುಟ್ಟಿಸುವ ಜತೆಗೆ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
Related Articles
ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ. ನಿಂಬರಗಿ ಅವರು ಮಾತನಾಡಿ, ಸಾಮಾನ್ಯವಾಗಿ ಮಾದಕ ವ್ಯಸನವು ಶ್ರೀಮಂತ ಮತ್ತು ಅತೀ ಕಡುಬಡ ಕುಟುಂಬದ ಯುವಜನರಲ್ಲಿ ಹೆಚ್ಚು ಕಂಡುಬರುತ್ತದೆ. ಹಣದ ಅಹಂಕಾರ, ಶಿಕ್ಷಣದ ಕೊರತೆಯೂ ಮಾದಕ ವ್ಯಸನಕ್ಕೆ ಕಾರಣ. ಆರಂಭದಲ್ಲಿ ಉಂಟಾಗುವ ಕುತೂಹಲ, ಅನಂತರ ವ್ಯಸನವಾಗುತ್ತದೆ. ನಮ್ಮ ದೇಶದಲ್ಲಿ ಡ್ರಗ್ಸ್‌ಗಳನ್ನು ಔಷಧವಾಗಿ ಬಳಸಲು ಮಾತ್ರ ಅನುಮತಿ ಇದೆ. ಯುವಜನತೆ ದುಶ್ಚಟ ಮುಕ್ತವಾಗ ಬೇಕಾದರೆ ಸ್ವಯಂನಿಯಂತ್ರಣ ಕೂಡ ಅಗತ್ಯ ಎಂದು ಹೇಳಿದರು.
Advertisement
ಅಪರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಉಪಸ್ಥಿತರಿದ್ದರು. ಡಾ| ಪಿ.ವಿ.ಭಂಡಾರಿ ಅವರೊಂದಿಗೆ ಸಂವಾದ ಜರಗಿತು. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಫೇಸ್‌ಬುಕ್ ಪೇಜ್‌ಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಅಲ್ಲದೆ ಮಾದಕ ವ್ಯಸನದ ದುಷ್ಪರಿಣಾಮ ಮತ್ತು ಕುಟುಂಬದವರು ಅನುಭವಿಸುವ ನೋವಿನ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಚಿತ್ರ ಪ್ರದರ್ಶನಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಿರುಚಿತ್ರ ರಚನೆ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಡಿವೈಎಸ್‌ಪಿ ಕುಮಾರಸ್ವಾಮಿ ಸ್ವಾಗತಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು. ಪ್ರಸ್‌ಕ್ಲಬ್ ಸಂಚಾಲಕ ನಾಗರಾಜ ರಾವ್ ವರ್ಕಾಡಿ ವಂದಿಸಿದರು.
ಡ್ರಗ್ಸ್‌ನಿಂದ ಸಾವುಡ್ರಗ್ಸ್ನಿಂದ ಸಾವು ಕೂಡ ಸಂಭವಿಸುತ್ತದೆ. ಡ್ರಗ್ಸ್ ಡೋಸೇಜ್ ಜಾಸ್ತಿಯಾದಾಗ, ಒಂದೇ ಇಂಜೆಕ್ಷನ್‌ನ್ನು ಹಲವರು ಬಳಕೆಯಾಗಿ ಹೆಪಟೈಟಸ್ ಸಿ, ಎಚ್‌ಐವಿಯಂತಹ ಕಾಯಿಲೆಗಳು ಹರಡುವುದರಿಂದ ಸಾವನ್ನಪ್ಪುವ ಅಪಾಯ ಇದೆ. ಒಮ್ಮೆ ವ್ಯಸನಿಗಳಾದರೆ ಅದರಿಂದ ಮುಕ್ತರಾಗುವ ಸಾಧ್ಯತೆಗಳು ಶೇ.20ರಿಂದ 30ರಷ್ಟು ಮಾತ್ರ. ಶಿಕ್ಷಕರು ಮತ್ತು ಹೆತ್ತವರು ತಮ್ಮ ವಿದ್ಯಾರ್ಥಿಗಳು/ ಮಕ್ಕಳ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಗೆಳೆಯರ ಒತ್ತಾಯ, ಮೋಜು ಮತ್ತು ಹೊಸ ಅನುಭವ ಪಡೆಯುವ ಕುತೂಹಲ ಮೊದಲಾದವು ಮಾದಕ ದ್ರವ್ಯಗಳ ಸೇವನೆ ಆರಂಭಿಸಲು ಕಾರಣವಾಗುತ್ತವೆ. ಪೊಲೀಸ್ ಇಲಾಖೆ, ಮಾದಕ ವಸ್ತು ನಿಯಂತ್ರಣ ಇಲಾಖೆ ಮೊದಲಾದ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ.
– ಡಾ| ಪಿ.ವಿ.ಭಂಡಾರಿ, ಮನೋವೈದ್ಯರು ಮಾದಕವ್ಯಸನ ವಿರೋಧಿ ಮಾಸಾಚರಣೆಯ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.