Advertisement

ತಿಪಟೂರಲ್ಲಿ ಅಸಮರ್ಪಕ ಸಾರಿಗೆ ವ್ಯವಸ್ಥೆ

12:27 PM Jun 24, 2019 | Suhan S |

ತಿಪಟೂರು: ತಾಲೂಕಿನಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದರಿಂದ ಜನರ ಪಡಿಪಾಟಲು ಹೇಳತೀರದಾಗಿದೆ.

Advertisement

ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಾಗೂ ಕೆಲಸ ಕಾರ್ಯಗಳಿಗೆ ಬಂದು ಹೋಗುವ ರೈತರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಜನ ಪ್ರತಿನಿಧಿಗಳು ಮತ್ತು ತಾಲೂಕು ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಸಲ್ಲಿಸಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ವಿದ್ಯಾರ್ಥಿಗಳಿಗೆ ತೊಂದರೆ: ತಾಲೂಕಿನ ಪ್ರಮುಖ ಮಾರ್ಗಗಳಾದ ತಾಲೂಕಿನ ಹೊನ್ನವಳ್ಳಿ, ನೊಣವಿನ ಕೆರೆ, ಕಿಬ್ಬನಹಳ್ಳಿ, ಕಸಬಾ ಹೋಬಳಿಗಳಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ನಗರಿ ತಿಪಟೂರಿನ ವಿವಿಧ ಶಾಲಾ-ಕಾಲೇಜುಗಳಿಗೆ ಹೋಗು ತ್ತಾರೆ. ಆದರೆ ಶಾಲಾ-ಕಾಲೇಜುಗಳ ಸಮಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಇಲ್ಲದೆ ಸಮಯಕ್ಕೆ ಸರಿಯಾಗಿ ತಲುಪಲಾಗುತ್ತಿಲ್ಲ. ಇದರಿಂದ ಹಾಜರಾತಿ ಕೊರತೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತೊಂದರೆಯಾಗುತ್ತಿದೆ. ಬೈಕ್‌, ಆಟೋ, ಲಾರಿಗಳ ಮೂಲಕ ಶಾಲಾ-ಕಾಲೇಜುಗಳಿಗೆ ಹೋಗಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಹಾಲ್ಕುರಿಕೆ, ಹೊನ್ನವಳ್ಳಿ, ಕೊನೇಹಳ್ಳಿ, ಬಿದರೆಗುಡಿ, ತಡಸೂರು, ಕೆರೆಗೋಡಿ-ರಂಗಾಪುರ, ದಸರೀಘಟ್ಟ, ಆಲದಳ್ಳಿ, ಕೆ.ಬಿ.ಕ್ರಾಸ್‌, ನೊಣವಿನಕೆರೆ ಸೇರಿ ವಿವಿಧ ಭಾಗಗಳಲ್ಲಿ ಸಾರಿಗೆ ವ್ಯವಸ್ಥೆ ಅಧ್ವಾನವಾಗಿದೆ.

ಮನೆ ಸೇರಲು ಪರದಾಟ: ತಿಪಟೂರಿನಲ್ಲೆ ಕೆಎಸ್‌ಆರ್‌ಟಿಸಿ ಡಿಪೋ ಇದ್ದರೂ ತಾಲೂಕಿನಾದ್ಯಂತ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಂಚರಿಸುತ್ತಿಲ್ಲ. ಬೆಳಗ್ಗೆ 7ರಿಂದ 10ಗಂಟೆಯವರೆಗೆ ಬಸ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಸಂಜೆ 4ರಿಂದ 7ಗಂಟೆಯವರೆಗೂ ತಿಪಟೂರಿನಿಂದ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಮನೆ ಸೇರಲು ಪರದಾಡಬೇಕು. ಸಮಸ್ಯೆ ಅರಿತು ಸಾರಿಗೆ ಅಧಿಕಾರಿಗಳು ಬಸ್‌ಗಳ ವೇಳಾಪಟ್ಟಿ ಪರಿಷ್ಕರಿಸುವ ಗೋಜಿಗೆ ಹೋಗುತ್ತಿಲ್ಲ. ಕೆಲ ಎಕ್ಸ್‌ಪ್ರೆಸ್‌ ಬಸ್‌ಗಳು ಬಿದರೆಗುಡಿ, ಕಿಬ್ಬನಹಳ್ಳಿ ಕ್ರಾಸ್‌, ನೊಣವಿನಕೆರೆ ಸೇರಿದಂತೆ ವಿವಿಧ ಮಾರ್ಗಗಳ ನಿಲ್ದಾಣದಲ್ಲಿ ನಿಲುಗಡೆ ಇದ್ದರೂ ವಿದ್ಯಾರ್ಥಿಗಳಿರು ವುದನ್ನು ಗಮನಿಸಿ ನಿಲ್ಲಿಸದೇ ಓಡಿಸುತ್ತಾರೆ.

 

Advertisement

● ಬಿ. ರಂಗಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next