Advertisement
ಹೆದ್ದಾರಿಯಿಂದ ಕುಂದಾಪುರ ನಗರಕ್ಕೆ ಪ್ರವೇಶ, ಫ್ಲೈಓವರ್ ಮೇಲಿನಿಂದ ಸರ್ವೀಸ್ ರಸ್ತೆಗೆ ನೀರು ಬೀಳುವುದು, ಹೆದ್ದಾರಿ ಬದಿ ಪೊದೆ, ಗಿಡಗಳ ತೆರವು ಮಾಡದಿರುವ ಕುರಿತು “ಉದಯವಾಣಿ’ “ಸುದಿನ’ ಸಕಾಲಿಕ ವರದಿಗಳನ್ನು ಪ್ರಕಟಿಸಿತ್ತು. ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ವಿ.ಪ. ಸದಸ್ಯರು ಕೇಳಿದ್ದು ಪ್ರಾಧಿಕಾರ ಇವುಗಳ ಪೈಕಿ ಕೆಲವಕ್ಕೆ ಅಸಮರ್ಪಕ ಉತ್ತರ ನೀಡಿದ್ದಾರೆ.
Related Articles
Advertisement
ಶಾಸ್ತ್ರಿ ಸರ್ಕಲ್ ಫ್ಲೈಓವರ್‌ನಿಂದ ಸರ್ವಿಸ್ ರಸ್ತೆಗೆ ಮಳೆಗಾಲದಲ್ಲಿ ನೀರು ಬೀಳುತ್ತವೆ. ವಾಹನ ಸವಾರರಿಗೆ, ಪಾದಚಾರಿಗಳಿಗೆ ಅಪಘಾತ ಸಂಭವ ಜಾಸ್ತಿ ಇರುವ ಕುರಿತು ಸದಸ್ಯರ ಪ್ರಶ್ನೆಗೆ ಪ್ರಾಧಿಕಾರವು, ಗುತ್ತಿಗೆ ಕರಾರಿನಂತೆ ಒಳಚರಂಡಿ ನಿರ್ಮಿಸುವ ಕಾರ್ಯ ಕೈಗೊಂಡಿದ್ದು ಈ ಒಳಚರಂಡಿಯನ್ನು ಮಳೆ ನೀರನ್ನು ರಸ್ತೆ ಮೇಲ್ಭಾಗದಿಂದ ಹೊರಹಾಕಲು ನಿರ್ಮಿಸಲಾಗಿದೆ ಎಂದು ಉತ್ತರಿಸಿದೆ. ಆದರೆ ಒಳಚರಂಡಿ ಕಾಮಗಾರಿ ನಡೆದೇ ಇಲ್ಲ, ಮೇಲ್ಸೇತುವೆಯಿಂದ ನೀರು ಬೀಳುವುದು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಸುಳ್ಳು ಉತ್ತರ ನೀಡುವ ಮೂಲಕ ಪ್ರಾಧಿಕಾರ ಸದನದಲ್ಲಿ ಹಾದಿ ತಪ್ಪಿಸಿದೆ.
ಮಳೆಗಾಲದ ಬಳಿಕ ಕೆಲಸ:
ಫ್ಲೈಓವರ್ ಕೆಳಗೆ ರಾಶಿ ಹಾಕಿದ ಗುಜುರಿ ವಸ್ತುಗಳ ತೆರವು ಯಾವಾಗ ಎಂದು ಕೇಳಿದ ಪ್ರಶ್ನೆಗೆ, ಮಳೆಗಾಲದ ಬಳಿಕ ಎಂದು ಉತ್ತರಿಸಿದೆ. ರಸ್ತೆ ಬದಿ ಬೆಳೆದ ಕುರುಚಲು ಗಿಡಗಳನ್ನು ಪ್ರಾಧಿಕಾರದ ಗುತ್ತಿಗೆ ಕರಾರಿನನ್ವಯ ಆಗಾಗ ತೆರವು ಮಾಡಲಾಗುತ್ತಿದೆ ಎಂದು ಉತ್ತರಿಸಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಗ್ಯಾಂಗ್‌ಮೆನ್ ಹುದ್ದೆಯಲ್ಲಿದ್ದವರು ನಿವೃತ್ತರಾದ ಬಳಿಕ ಹೊಸನೇಮಕಾತಿ ಇಲ್ಲ. ಅನುದಾನ ಲಭ್ಯ ಇದ್ದು ಗುತ್ತಿಗೆ ಮೂಲಕ ಇಂತಹ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಸುದಿನ ವರದಿ:
ಹೆದ್ದಾರಿಯಿಂದ ಕುಂದಾಪುರ ನಗರ ವ್ಯಾಪ್ತಿಯಲ್ಲಿ ಪ್ರವೇಶ ಅವಕಾಶ ನೀಡಿಲ್ಲ. ಹಂಗಳೂರು ಪಂಚಾಯತ್ ವ್ಯಾಪ್ತಿಯಲ್ಲಷ್ಟೇ ನೀಡಲಾಗಿದೆ. ಇದರಿಂದ ನಗರದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂದು “ಉದಯವಾಣಿ’ “ಸುದಿನ’ ಸತತ ವರದಿ ಮಾಡಿದೆ. ವರ್ತಕರು ಮನವಿ ನೀಡಿದ್ದಾರೆ. ಬೊಬ್ಬರ್ಯನಕಟ್ಟೆ ಪ್ರದೇಶದ 15ಕ್ಕೂ ಅಧಿಕ ಸರಕಾರಿ ಕಚೇರಿಗಳಿಗೆ ತೊಂದರೆಯಾಗುತ್ತದೆ ಎಂದು ಮನವಿ ನೀಡಲಾಗಿದೆ. ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ಮನವಿ ಮಾಡಲಾಗಿದೆ. ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ನೀರು ಬೀಳುವ ಕುರಿತು ಆ.2ರಂದು “ಸುದಿನ’ ವರದಿ ಮಾಡಿತ್ತು. ಪೊದೆ ಗಿಡಗಳಿಂದ ಪಾದಚಾರಿಗಳಿಗೆ ತೊಂದರೆಯಾಗುವ ಕುರಿತು ಜು.3ರಂದು “ಸುದಿನ’ ವರದಿ ಪ್ರಕಟಿಸಿತ್ತು. ಈ ವಿಚಾರಗಳ ಕುರಿತು ಸದನದಲ್ಲಿ ಗಮನ ಸೆಳೆದು ಪ್ರಶ್ನೆ ಕೇಳಿದ್ದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.