Advertisement
ಎರಡೂ ತಂಡಗಳು ಪ್ರಮುಖ ಆಟಗಾರರ ಗೈರಿನೊಂದಿಗೆ ಆಡಬೇಕಿದೆ. ದಕ್ಷಿಣ ಆಫ್ರಿಕಾ ಆ್ಯನ್ರಿಚ್ ನೋರ್ಜೆ ಮತ್ತು ಸಿಸಾಂಡ ಮಗಾಲ ಅವರ ಸೇವೆಯಿಂದ ವಂಚಿತವಾಗಿದೆ. ಆದರೆ ಈ ಸ್ಥಾನವನ್ನು ತುಂಬಬಲ್ಲ ಸಮರ್ಥ ಬೌಲರ್ ಹರಿಣಗಳ ಪಡೆಯಲ್ಲಿದ್ದಾರೆ. ಇವರೆಂದರೆ ಅನುಭವಿ ಕಾಗಿಸೊ ರಬಾಡ ಮತ್ತು 23 ವರ್ಷದ ಪ್ರತಿಭಾನ್ವಿತ ವೇಗಿ ಗೆರಾಲ್ಡ್ ಕೋಟ್ಝೀ
ಕಾಗದದಲ್ಲಿ ದಕ್ಷಿಣ ಆಫ್ರಿಕಾ ಲಂಕೆಗಿಂತಲೂ ಬಲಿಷ್ಠವಾದ ತಂಡ. ಟೆಂಬ ಬವುಮ ನೇತೃತ್ವದಲ್ಲಿ ಮೊದಲ ಸಲ ವಿಶ್ವಕಪ್ ಆಡುತ್ತಿದೆ. ಆರಂಭಿಕನಾಗಿ ಇಳಿಯುವ ಬವುಮ, ಕೀಪರ್ ಕ್ವಿಂಟನ್ ಡಿ ಕಾಕ್, ಬಿಗ್ ಹಿಟ್ಟರ್ ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್ ಅವರನ್ನೊಳಗೊಂಡ ಬ್ಯಾಟಿಂಗ್ ಲೈನ್‌ಅಪ್ ಅತ್ಯಂತ ಅಪಾಯಕಾರಿ. ಲಂಕಾ ಬೌಲಿಂಗ್ ಪಡೆ ಇವರನ್ನು ನಿಯಂತ್ರಿಸಿದರಷ್ಟೇ ಯಶಸ್ಸು ಸಾಧ್ಯ.
ಎಡಗೈ ಸ್ಪಿನ್ನರ್ ದುನಿತ್ ವೆಲ್ಲಲಗೆ, ಲಹಿರು ಕುಮಾರ, ದಿಲ್ಶನ್ ಮದುಶಂಕ, ಮತೀಶ ಪತಿರಣ, ಕಸುನ್ ರಜಿತ ಲಂಕೆಯ ಪೇಸ್ ವಿಭಾಗದ ಪ್ರಮುಖರಾಗಿದ್ದು, ಹರಿಣಗಳನ್ನು ತಡೆಯುವ ಅಸಾಮಾನ್ಯ ಸವಾಲೊಂದು ಇವರ ಮುಂದಿದೆ.
Related Articles
ಶ್ರೀಲಂಕಾದ ಬ್ಯಾಟಿಂಗ್ ಸರದಿ ಪರ್ವಾಗಿಲ್ಲ ಎಂಬ ಮಟ್ಟದ್ದು. ನಾಯಕ ದಿಮುತ್ ಕರುಣಾರತ್ನೆ, ಪಥುಮ್ ನಿಸ್ಸಂಕ, ಕುಸಲ್ ಪೆರೆರ, ಸದೀರ ಸಮರ ವಿಕ್ರಮ, ಚರಿತ ಅಸಲಂಕ ಅವರಿಂದ ಎವರೇಜ್ ಬ್ಯಾಟಿಂಗ್ ನಿರೀಕ್ಷಿಸಲಡ್ಡಿಯಿಲ್ಲ. ಆದರೆ ವಿಶ್ವಕಪ್‌ನಂಥ ಬಿಗ್ ಟೂರ್ನಿಗೆ ಈ ಬ್ಯಾಟಿಂಗ್ ಬಲ ಖಂಡಿತ ಸಾಲದು.
Advertisement
ತವರಲ್ಲೇ ನಡೆದ ಕಳೆದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ಫೈನಲ್ ಪ್ರವೇಶಿಸಿತಾದರೂ ಭಾರತದೆದುರು ಶೋಚನೀಯ ಬ್ಯಾಟಿಂಗ್ ನಡೆಸಿ ಶರಣಾಗಿತ್ತು. ವಿಶ್ವಕಪ್ ಹೊತ್ತಿನಲ್ಲಿ ಲಂಕೆಗೆ ಎದುರಾದ ಮರ್ಮಾಘಾತ ಇದು. ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ರೀತಿಯಲ್ಲಿ ಲಂಕಾ ಪಡೆ ಹೋರಾಟ ಆರಂಭಿಸಬೇಕಿದೆ.