Advertisement

ಅಫ್ಘಾನ್‌ ವ್ಯಾಪಾರ ವಹಿವಾಟು:ಭಾರತಕ್ಕೆ ಮಣಿದ ಪಾಕಿಸ್ಥಾನ

04:06 PM Mar 07, 2018 | udayavani editorial |

ಹೊಸದಿಲ್ಲಿ : ಭಾರತವನ್ನು ಹೊರಗಿಟ್ಟು ಅಫ್ಘಾನಿಸ್ಥಾನ ದೊಂದಿಗಿನ ವಾಣಿಜ್ಯ ವಹಿವಾಟಿನಲ್ಲಿ ತನ್ನ ಪ್ರಾಬಲ್ಯ ಮೆರೆಯಬೇಕೆಂಬ ಉದ್ದೇಶ ಹೊಂದಿರುವ ಪಾಕಿಸ್ಥಾನ ತನ್ನ ಈ ಗುರಿಯಲ್ಲಿ ಎಡವಿದೆ ಮಾತ್ರವಲ್ಲ  ಇದಕ್ಕೆ ವ್ಯತಿರಿಕ್ತವಾಗಿ ಕಳೆದ ಎರಡು ವರ್ಷಗಳಲ್ಲಿ  ಶೇ.50ರಷ್ಟು ಮಾರುಕಟ್ಟೆ ಪಾಲನ್ನು  ಭಾರತದೆದುರು ಕಳೆದುಕೊಂಡಿದೆ. 

Advertisement

ಡಾನ್‌ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಅಫ್ಘಾನಿಸ್ಥಾನದೊಂದಿಗಿನ ವ್ಯಾಪಾರ ವಹಿವಾಟಿನಲ್ಲಿ ಪಾಕಿಸ್ಥಾನ, ಚೀನ ಮತ್ತು ಭಾರತದ ಎದುರು ಅತ್ಯಂತ ವೇಗವಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. 

ಪಾಕಿಸ್ಥಾನ – ಅಫ್ಘಾನಿಸ್ಥಾನದ ಜಂಟಿ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಝುಬೇರ್‌ ಮೋತಿವಾಲಾ ಅವರ ಕೊಟ್ಟಿರುವ ಅಂಕಿ ಅಂಶಗಳನ್ನು ಉಲ್ಲೇಖೀಸಿ ಡಾನ್‌ ದೈನಿಕ, ಅಫ್ಘಾನಿಸ್ಥಾನದೊಂದಿಗಿನ ಪಾಕಿಸ್ಥಾನದ ವಾಣಿಜ್ಯ ಹಿತಾಸಕ್ತಿಗೆ ಹಾನಿಯಾಗಿರುವುದನ್ನು ವರದಿಮಾಡಿದೆ.  

Advertisement

Udayavani is now on Telegram. Click here to join our channel and stay updated with the latest news.

Next