Advertisement
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿನಿಧಿ ಸುತ್ತಿದ್ದ ಕ್ಷೇತ್ರದ ವಾರಸುದಾರನಾಗಿ ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಭಾರೀ ಬಹುಮತಗಳೊಂದಿಗೆ ಆಯ್ಕೆಯಾಗುವುದರೊಂದಿಗೆ ರಾಷ್ಟ್ರದಲ್ಲಿ ಮೋದಿ ಅಲೆಯ ಸುನಾಮಿಯ ನಡುವೆಯೂ ಹಾಸನ ಜೆಡಿಎಸ್ ಭದ್ರಕೋಟೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.
Related Articles
Advertisement
ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ: ರಾಜ್ಯದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಲೋಕ ಸಭಾ ಚುನಾವಣೆ ಎದುರಿಸುವ ಸಂದರ್ಭದಲ್ಲಿ ಕೆಲವು ಕ್ಷೇತ್ರಗಳಲ್ಲಿ 2 ಪಕ್ಷಗಳ ನಡುವೆ ಹೊಂದಾಣಿಕೆಯ ಕೊರತೆ ಕಾಣಿಸಿಕೊಂಡಿತ್ತು. ಆದರೆ ಕ್ಷೇತ್ರದಲ್ಲಿ ಮಾತ್ರ ಎರಡೂ ಪಕ್ಷಗಳೂ ಸಂಘಟಿತ ಹೋರಾಟ ನಡೆಸಿದವು. ಲೋಕೋ ಪಯೋಗಿ ಸಚಿವರೂ ಆದ ಎಚ್.ಡಿ.ರೇವಣ್ಣ, ಜಿಪಂ ಸದಸ್ಯೆ ಪ್ರಜ್ವಲ್ ತಮ್ಮ ಪುತ್ರನ ಗೆಲುವಿಗಾಗಿ ಕಾಂಗ್ರೆಸ್ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿದರು.
ಅದರ ಪರಿಣಾಮ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಜೆಡಿಎಸ್ ಅಭ್ಯರ್ಥಿ ಬಹುಮತ ಸಾಧಿಸಲು ಸಾಧ್ಯವಾಯಿತು. ಇನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳೂ ಪ್ರಜ್ವಲ್ ರೇವಣ್ಣ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ.
ಮೌನಕ್ಕೆ ಶರಣಾದ ಸಚಿವ ಎಚ್.ಡಿ.ರೇವಣ್ಣ: ಚುನಾವಣೆಯ ಸಂದರ್ಭದಲ್ಲೂ ಚುನಾವಣೆ ಮುಗಿದ ನಂತರ, ಫಲಿತಾಂಶ ಪ್ರಕಟವಾದ ನಂತರ ಎಚ್.ಡಿ.ರೇವಣ್ಣ ಅವರು ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾಗಿ ಜನತೆಗೆ ಕೃತಜ್ಞತೆ ಹೇಳುತ್ತಿದ್ದರು. ಆದರೆ ಈ ಬಾರಿ ಜೆಡಿಎಸ್ ವರಿಷ್ಠರ ಸೋಲಿನೊಂದಿಗೆ ನಿಖೀಲ್ ಹೀನಾಯವಾಗಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಸಚಿವ ರೇವಣ್ಣ ಅವರು ಮೌನಕ್ಕೆ ಶರಣಾಗಿದ್ದರು.
ಮತ ಎಣಿಕೆ ಕೇಂದ್ರದತ್ತಲೂ ರೇವಣ್ಣ ಅವರು ಸುಳಿಯಲಿಲ್ಲ. ಭವಾನಿ ರೇವಣ್ಣ ಅವರು ಮಾತ್ರ ಪುತ್ರ ಪ್ರಜ್ವಲ್, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರೊಂದಿಗೆ ಎಣಿಕೆ ಕೇಂದ್ರಕ್ಕೆ ಬಂದು ಫಲಿತಾಂಶ ಘೋಷಣೆಗಾಗಿ ಕಾಯುತ್ತಾ ಕುಳಿತಿದ್ದರು. ಪ್ರಮಾಣ ಪತ್ರ ವಿತರಣೆ ನಂತರ ಎಣಿಕೆ ಕೇಂದ್ರದಿಂದ ಪ್ರಜ್ವಲ್ ಮತ್ತು ಪಕ್ಷದ ಮುಖಂಡರೊಂದಿಗೆ ಹೊರಟರು.
ಎಲ್ಲಾ ಕ್ಷೇತ್ರದಲ್ಲೂ ಪ್ರಜ್ವಲ್‌ಗೆ ಲೀಡ್: ಹಾಸನ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಮಾತ್ರ ಪ್ರಜ್ವಲ್‌ಗೆ 12,019 ಮತಗಳ ಹಿನ್ನಡೆಯಾಗಿದ್ದರೆ, ಜಿಲ್ಲೆಯ ವ್ಯಾಪ್ತಿಯ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಜ್ವಲ್ ಮುನ್ನಡೆ ಸಾಧಿಸಿದ್ದಾರೆ. ಸಚಿವ ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ವೊಂದ ರಲ್ಲೇ ಪ್ರಜ್ವಲ್ ಪ್ರತಿಸ್ಪರ್ಧಿಗಿಂತ 74,665 ಮತಗಳ ಮುನ್ನಡೆ ಪಡೆದಿದ್ದರೆ,
-ಶ್ರವಣಬೆಳಗೊಳ ಕ್ಷೇತ್ರದಲ್ಲಿ 39,115 ಮತಗಳ ಮುನ್ನಡೆ ಪಡೆದಿದ್ದಾರೆ. ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಪ್ರತಿನಿಧಿಸುವ ಹಾಸನ ವಿಧಾನಸಭಾ ಕ್ಷೇತ್ರದಲ್ಲೂ ಪ್ರಜ್ವ ಲ್‌ಗೆ 14,965 ಮತ ಮುನ್ನಡೆ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಮಂಜು ತವರು ಕ್ಷೇತ್ರ ಅರಕಲಗೂಡಿನಲ್ಲೂ 4443 ಮತಗಳ ಮುನ್ನಡೆ ಪಡೆದಿರುವ ಪ್ರಜ್ವಲ್ ಇನ್ನುಳಿದಂತೆ ಸಕಲೇಶಪುರ, ಬೇಲೂರು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿದ್ದಾರೆ.
ಗೆದ್ದರೂ ನಡೆಯದ ವಿಜಯೋತ್ಸವ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು 1.43 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿದರೂ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಅಚರಿಸಲಿಲ್ಲ. ಮತ ಎಣಿಕೆ ಕೇಂದ್ರ ದತ್ತ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಸುಳಿಯಲೂ ಇಲ್ಲ. ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದರೂ ಹಾಸನ ನಗರದಲ್ಲಿಯೂ ವಿಜಯೋತ್ಸವ ಆಚರಿಸಲು ಹೋಗಲಿಲ್ಲ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಪುತ್ರ ನಿಖೀಲ್ ಕುಮಾರ್ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ವಿಜಯೋತ್ಸವ ಆಚರಿಸಲಿಲ್ಲ.
ಗೆಲುವಿನ ಮೇಲೂ ಸೂತಕದ ಛಾಯೆ: ಪ್ರತಿಷ್ಠಿತ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 1.42 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೂ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವನ್ನು ಸಂಭ್ರಮಿಸಲಿಲ್ಲ. ಪ್ರತಿಷ್ಠಿತ ಕ್ಷೇತ್ರದ ಗೆಲುವಿನ ಮೇಲೂ ಸೂತಕದ ಛಾಯೆ ಆವರಿಸಿದಂತಿತ್ತು.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತುಮಕೂರು ಕ್ಷೇತ್ರದಲ್ಲಿ ಸತತ ಹಿನ್ನಡೆಯೊಂದಿಗೆ ಸೋಲು ಅನುಭವಿಸಿದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡದ್ದು ಹಾಸನ ಲೋಕಸಭಾ ಕ್ಷೇತ್ರದ ಗೆಲುವಿನ ಮೇಲೆ ಮಂಕು ಆವರಿಸಿತ್ತು.
ಜೆಡಿಎಸ್ ಪಾಳೆಯದಲ್ಲಷ್ಟೆ ಅಲ್ಲ. ಕಾಂಗ್ರೆಸ್ ಕಾರ್ಯಕರ್ತರಲ್ಲೂ ವಿಷಾದದ ಛಾಯೆ ಆವರಿಸಿತ್ತು. ಪಕ್ಷದ ಹಿರಿಯ ಮುಖಂಡರೆಲ್ಲಾ ಸೋಲಿನ ಹಾದಿಯತ್ತ ಸಾಗಿದ್ದರಿಂದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ. ಹಾಸನ ನಗರದ ಪ್ರಮುಖ ಸ್ಥಳಗಳಲ್ಲೂ ಕಾಣಿಸಿಕೊಳ್ಳದೆ ಪಕ್ಷದ ನಾಯಕರ ಸೋಲಿನ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಕುಳಿತರು.
ಜೆಡಿಎಸ್‌ನ ಆಧಾರ ಸ್ತಂಭ, ಹಿರಿಯ ರಾಜಕೀಯ ಮುತ್ಸದ್ಧಿ ದೇವೇಗೌಡರೇ ಸೋತಿರುವುದರಿಂದ ಮುಂದೆ ರಾಜ್ಯದಲ್ಲಿ ಪಕ್ಷದ ಗತಿ ಏನು ? ರಾಜ್ಯದ ಸಮ್ಮಿಶ್ರ ಸರ್ಕಾರದ ಮೇಲೂ ಸೋಲು ದುಷ್ಪರಿಣಾಮ ಬೀರಿ ಸರ್ಕಾರ ಅಭದ್ರವಾಗಬಹುದೆಂಬ ಆತಂಕದಲ್ಲಿದ್ದ ಜೆಡಿಎಸ್ ಮುಖಂಡರು ಹಾಸನ ಕ್ಷೇತ್ರದ ಗೆಲುವಿನ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಇಲ್ಲಿ ಗೆದ್ದರೂ, ಗೌಡರು ಸೋತ ಮೇಲೆ ನಮಗೆಲ್ಲಿ ಸಂತೋಷ ಎಂದು ಹತಾಶೆಯಿಂದ ನುಡಿದರು.
ಮೌನಕ್ಕೆ ಶರಣಾದ ಸಚಿವ ಎಚ್.ಡಿ.ರೇವಣ್ಣ: ಚುನಾವಣೆಯ ಸಂದರ್ಭದಲ್ಲೂ ಚುನಾವಣೆ ಮುಗಿದ ನಂತರ, ಫಲಿತಾಂಶ ಪ್ರಕಟವಾದ ನಂತರ ಎಚ್.ಡಿ.ರೇವಣ್ಣ ಅವರು ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾಗಿ ಜನತೆಗೆ ಕೃತಜ್ಞತೆ ಹೇಳುತ್ತಿದ್ದರು. ಆದರೆ ಈ ಬಾರಿ ಜೆಡಿಎಸ್ ವರಿಷ್ಠರ ಸೋಲಿನೊಂದಿಗೆ ನಿಖೀಲ್ ಹೀನಾಯವಾಗಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಸಚಿವ ರೇವಣ್ಣ ಅವರು ಮೌನಕ್ಕೆ ಶರಣಾಗಿದ್ದರು. ಮತ ಎಣಿಕೆ ಕೇಂದ್ರದತ್ತಲೂ ರೇವಣ್ಣ ಅವರು ಸುಳಿಯಲಿಲ್ಲ.
ಭವಾನಿ ರೇವಣ್ಣ ಅವರು ಮಾತ್ರ ಪುತ್ರ ಪ್ರಜ್ವಲ್, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರೊಂದಿಗೆ ಎಣಿಕೆ ಕೇಂದ್ರಕ್ಕೆ ಬಂದು ಫಲಿತಾಂಶ ಘೋಷಣೆಗಾಗಿ ಕಾಯುತ್ತಾ ಕುಳಿತಿದ್ದರು. ಪ್ರಮಾಣ ಪತ್ರ ವಿತರಣೆ ನಂತರ ಎಣಿಕೆ ಕೇಂದ್ರದಿಂದ ಪ್ರಜ್ವಲ್ ಮತ್ತು ಪಕ್ಷದ ಮುಖಂಡರೊಂದಿಗೆ ಹೊರಟರು.
ನನ್ನ ತಂದೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲೆಯ ಜನರು ಮನ್ನಣೆ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಅದಕ್ಕೆ ನಾನು ಋಣಿ. ಕೇಂದ್ರದಿಂದ ಮತ್ತಷ್ಟು ಅನುದಾನ ತಂದು ಕ್ಷೇತ್ರದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುವೆ.-ಪ್ರಜ್ವಲ್ ರೇವಣ್ಣ, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿನ ಲೋಪ ಪ್ರಶ್ನಿಸಿ ಕೋರ್ಟಿಗೆ ಹೋಗುವೆ. ಇನ್ನು ನಾಲ್ಕು ತಿಂಗಳಲ್ಲಿ ಅವರು ಅನರ್ಹರಾಗುವರು. ನಾನು ಸಂಸತ್‌ಗೆ ಹೋಗುವೆ. ನಾನು ಸೋತಿದ್ದಕ್ಕೆ ಬೇಸರವಿಲ್ಲ. ದೇವೇಗೌಡರು ಕೊನೆಗಾಲದಲ್ಲಿ ಸೋತಿದ್ದಕ್ಕೆ ಹಾಸನ ಜಿಲ್ಲೆಯವನಾಗಿ ನನಗೆ ಬೇಸರವಿದೆ.
-ಎ.ಮಂಜು, ಬಿಜೆಪಿ ಅಭ್ಯರ್ಥಿ ಹಾಸನ (ಜೆಡಿಎಸ್)
-ವಿಜೇತರು ಪ್ರಜ್ವಲ್ ರೇವಣ್ಣ
-ಪಡೆದ ಮತ 6,76,606
-ಎದುರಾಳಿ ಎ.ಮಂಜು (ಬಿಜೆಪಿ)
-ಪಡೆದ ಮತ 5,35,282
-ಗೆಲುವಿನ ಅಂತರ 1,41,324 ಕಳೆದ ಬಾರಿ ಗೆದ್ದವರು: ಎಚ್.ಡಿ.ದೇವೇಗೌಡ (ಜೆಡಿಎಸ್) ಗೆಲುವಿಗೆ 3 ಕಾರಣ
-ಜೆಡಿಎಸ್‌ನ ತಳಮಟ್ಟದ ಸಂಘಟನೆಯೇ ಪ್ರಮುಖ ಕಾರಣ
-ಜಿಲ್ಲೆಯಲ್ಲಿ ಪ್ರಜ್ವಲ್ ಪರ ನಿಂತ ಕಾಂಗ್ರೆಸ್ ನಾಯಕರು
-ಲೋಕೋಪಯೋಗಿ ಸಚಿವ ರೇವಣ್ಣ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಪ್ರಜ್ವಲ್ ಗೆಲುವಿಗೆ ಸಹಕಾರಿ ಸೋಲಿಗೆ 3 ಕಾರಣ
-ಹಾಸನ ನಗರದಲ್ಲಿ ಬಿಟ್ಟರೇ
-ಕ್ಷೇತ್ರದ ಯಾವ ಕಡೆಯೂ ಬಿಜೆಪಿಯ ಭದ್ರ ನೆಲೆ ಇಲ್ಲದ್ದು.
-ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ತೊರೆದು ದಿಢೀರನೆ ಬಿಜೆಪಿ ಸೇರಿದ್ದು.
ನಾಯಕರ ಸಂಘಟಿತ ಹೋರಾಟದ ಕೊರತೆ.