Advertisement

ಮಳೆ ನಡುವೆಯೇ ಕಟ್ಟೆಮಳವಾಡಿ ಸಿಡಿಜಾತ್ರೆ ಸಂಪನ್ನ

12:54 PM Mar 31, 2018 | Team Udayavani |

ಹುಣಸೂರು: ತಾಲೂಕಿನ ಕಟ್ಟೆಮಳವಾಡಿಯಲ್ಲಿ ಶುಕ್ರವಾರ ಸಂಜೆ ಮಳೆಯ ನಡುವೆಯೇ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮದೇವತೆ ಸಿಡಿ ಜಾತ್ರೆ ವಿಜೃಂ¸‌ಣೆಯಿಂದ ನಡೆಯಿತು.

Advertisement

ಹುಣಸೂರು-ಕೆ.ಆರ್‌.ನಗರ ಮುಖ್ಯರಸ್ತೆ ಬಳಿಯ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಕಟ್ಟೆಮಳಲವಾಡಿಯ ಸಿಡಿಯಮ್ಮ, ದಾಸವಾಳದಮ್ಮ, ಕೊಪ್ಪಲಿನ  ಬೆಟ್ಟದಚಿಕ್ಕಮ್ಮ, ಕಲ್ಕುಣಿಕೆಯ ದರಸಾಳಮ್ಮ, ದೇವರ ಅವಾಹನೆಗೆ ಒಳಗಾದ ನಾಲ್ಕುಮಂದಿ ಸಿಡಿಯಾಡಿದರು. ಸಿಡಿಯಾಡುವುದಕ್ಕೂ ಮುನ್ನ ಕಲ್ಕುಣಿಕೆ, ಮರೂರುಕೊಪ್ಪಲು, ಕಟ್ಟೆಮಳಲವಾಡಿಗಳಲ್ಲಿ ಅಲ್ಲಿನ ದೇವರ ಗುಡಿಯಲ್ಲಿ ಪೂಜೆ ಸಲ್ಲಿಸಿದರು.

ನಂತರ ಮೆರವಣಿಗೆಯಲ್ಲಿ ಆಗಮಿಸಿ, ಕಟ್ಟೆಮಳಲವಾಡಿ ಬಳಿಯ ಲಕ್ಷ್ಮಣತೀರ್ಥ ನದಿಯಲ್ಲಿ ಮಿಂದು, ಪೂಜೆ ಸಲ್ಲಿಸಿದ ನಂತರ ಕೊಂಬು, ಕಹಳೆ, ತಮಟೆ, ವಾದ್ಯದೊಂದಿಗೆ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಭವ್ಯ ಮೆರವಣಿಗೆಯಲ್ಲಿ ಸಿಡಿಯಾಡುವ ಸ್ಥಳಕ್ಕಾಗಮಿಸಿದರು.

ಸಿಡಿರಥಕ್ಕೆ ಜೀವಂತ ಕೋಳಿ ಅರ್ಪಿಸಿದರು: ಮೆರವಣಿಗೆ ಬರುವ ಮುನ್ನಾ ಗ್ರಾಮದ ಕೃಷ್ಣಶೆಟ್ಟಿ ದಂಪತಿ ಸಿಡಿ ತೇರಿಗೆ ಪೂಜೆ ಸಲ್ಲಿಸಿದ ನಂತರ ರಥವನ್ನು ಶಾಲಾ ಆವರಣದ ಮಧ್ಯಕ್ಕೆ ಎಳೆದು ತರಲಾಯಿತು. ಭಕ್ತರ ಉದ್ಘೋಷದ ನಡುವೆ, ಸಿಡಿಯಾಡುವ ವೇಳೆ ಹರಕೆ ಹೊತ್ತ ಮಂದಿ ರಥಕ್ಕೆ ಹಣ್ಣು, ಜವನದ ಜತೆಗೆ ಜೀವಂತ ಕೋಳಿಯನ್ನು ಸಿಡಿ ರಥದ ಮೆಲೆಸೆದು ಭಕ್ತಿ ಮೆರೆದರು.

ಹರಕೆ ಸಲ್ಲಿಕೆ: ಸಿಡಿಯಾಡಿದ ನಂತರ ಹರಕೆ ಹೊತ್ತವರು ಪೂಜೆ ಸಲ್ಲಿಸಿ,ಹರಕೆ ತೀರಿಸಿದರು. ಈ ಸಂದರ್ಭದಲ್ಲಿ ಶಾಸಕ ಮಂಜುನಾಥ್‌,ಮಾಜಿ ಸಚಿವ ಎಚ್‌.ವಿಶ್ವನಾಥ್‌,  ಜಿ.ಪಂ.ಸದಸ್ಯರಾದ ಸಾವಿತ್ರಿ ಮಂಜು, ಅಮಿತ್‌ ದೇವರಹಟ್ಟಿ, ತಾ.ಪಂ ಸದಸ್ಯೆ ಪದ್ಮಮ್ಮ, ಗ್ರಾ.ಪಂ.ಅಧ್ಯಕ್ಷೆ ಚೆಲುವಮ್ಮ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಸೇರಿದಂತೆ ಎಲ್ಲ ಕೋಮಿನ ಯಜಮಾನರು,  ಅನೇಕ ಜನಪ್ರತಿನಿಗಳು, ಮುಖಂಡರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

ಮಳೆ ತಂದ ಆತಂಕ: ಸಿಡಿಯಾಡಲು ವಿವಿಧೆಡೆಗಳಿಂದ ಭಕ್ತರು ಆಗಮಿಸುತ್ತಿದ್ದ ವೇಳೆ ದಿಢೀರನೆ ಮಳೆ ಬಂದು ನೆರೆದಿದ್ದ ಸಾವಿರಾರು ಮಂದಿ ಪ್ರೌಢಶಾಲಾ ಆವರಣ, ಕಾರಿಡಾರ್‌ ಹಾಗೂ ಅಂಗಡಿಗಳ ಟಾರ್ಪಾಲ್‌ನ್ನೇ ಆಶ್ರಯಿಸಿಕೊಂಡರು. ಆ ವೇಳೆಗೆ ಮಳೆ ನಿಂತು ಹೋಗಿದ್ದರಿಂದ ಸಿಡಿಯಾಡಲು ತೊಂದರೆಯಾಗಲಿಲ್ಲ.

ಭಾನುವಾರ ರಥೋತ್ಸವ: ಭಾನುವಾರದಂದು ಸಿಡಿಯಮ್ಮ ದೇವಿಯ ರಥೋತ್ಸವ ಹಾಗೂ ಏ.3 ಮಂಗಳವಾರ ತೆಪೋ›ತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next