Advertisement

ಪಕ್ಕದಲ್ಲಿ ಅಸಹ್ಯ ಬಿದ್ದಿದೆ ಎನ್ನುತ್ತಾರೆ ರಾಮ್‌ಜಿ!

04:19 PM Aug 27, 2021 | Team Udayavani |

ಬೆಂಗಳೂರು: “ನಿಮ್ಮ ಪಕ್ಕ “ಅಸಹ್ಯ’ ಬಿದ್ದಿದೆ ಎಂದು ಯಾಮಾರಬೇಡಿ’! ಅದೇ ನೆಪದಲ್ಲಿ ಕಳ್ಳರ ಗ್ಯಾಂಗ್‌ವೊಂದು ನಿಮ್ಮ ಲಕ್ಷಾಂತರ ರೂ. ಎಗರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುತ್ತೆ!

Advertisement

ತಮಿಳುನಾಡು ಮೂಲದ “ರಾಮ್‌ಜೀ’ನಗರದ ಶೇ.90ರಷ್ಟು ಮಂದಿ ಇದೇ ರೀತಿಯ ಅಪರಾಧ ಕೃತ್ಯದಲ್ಲಿ ತೊಡಗಿದ್ದಾರೆ.ಈ ಗ್ಯಾಂಗ್‌ 10-15 ಮಂದಿಯ ತಂಡಗಳನ್ನಾಗಿ ಕಟ್ಟಿಕೊಂಡು ದೇಶದ ಕ್ಯಾಪಿಟಲ್‌ ಸಿಟಿಗಳಾದ ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್‌ ಹಾಗೂ ಇತರೆ ರಾಜ್ಯ
ಗಳ ರಾಜಧಾನಿಗಳನ್ನು ಆಯ್ದುಕೊಂಡು ಕೃತ್ಯ ಎಸಗಿ ಅದೇ ದಿನ ಪರಾರಿಯಾಗುತ್ತಾರೆ. ಈ ಗ್ಯಾಂಗ್‌ನ ಸದಸ್ಯರು ಸಂಕ್ರಾಂತಿ, ಪೊಂಗಲ್‌,
ಓಣಂ, ದೀಪಾವಳಿ ಸಂದರ್ಭದಲ್ಲಿಯೇ ಅಲೆದಾಡಿ ಕೃತ್ಯ ಎಸಗುತ್ತಾರೆ.

ಡೆಲ್ಲಿ ಮೂಲದವರ ಸೂಚನೆ!: ರಾಮ್‌ಜೀ ಗ್ಯಾಂಗ್‌ ಅನ್ನು ಡೆಲ್ಲಿ ಮೂಲದ ನಿರ್ದಿಷ್ಟ ವ್ಯಕ್ತಿಗಳು ನಿಯಂತ್ರಿಸುತ್ತಾರೆ. ಯಾವ ರಾಜ್ಯದಲ್ಲಿ ಅಪರಾಧ ಕೃತ್ಯ ಎಸಗಬೇಕು ಎಂದು ಅವರು ನಿಗದಿಪಡಿಸುತ್ತಾರೆ. ಬಳಿಕ ಗ್ಯಾಂಗ್‌ನ ಸದಸ್ಯರನ್ನು 10-15 ಮಂದಿಯ ತಂಡಗಳನ್ನಾಗಿ ವಿಂಗಡಿಸಿ ಆತ ಬೆಂಗಳೂರು ಹಾಗೂ ಇತರೆ ರಾಜ್ಯಗಳ ನಗರಗಳಿಗೆ ಬಸ್‌, ರೈಲು ಹಾಗೂ ಇತರೆ ಸಾರ್ವಜನಿಕ ಸಾರಿಗೆಗಳ ಮೂಲಕ ಕರೆದೊಯ್ಯುತ್ತಾನೆ. ನಂತರ ಸ್ಥಳೀಯ ಕಳ್ಳರ ನೆರವಿನಿಂದ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ‌ ಬಾಡಿಗೆ ಮನೆಗಳಲ್ಲಿ ಇರಿಸಿ, ಕಳವು ಮಾಡಿದ ಬೈಕ್‌ ಮೂಲಕ ಬ್ಯಾಂಕ್‌ ಹಾಗೂ ಇತರೆಡೆ ಹಣ ಕೊಂಡೊಯ್ಯುತ್ತಿದ್ದವರನ್ನು ಟಾರ್ಗೆಟ್‌ ಮಾಡಿ ಅವರ ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾ ಗುತ್ತಾರೆ. ಬಳಿಕ ಆರೋಪಿಗಳನ್ನು ಡೆಲ್ಲಿಗೆ ಕರೆದೊಯ್ದು ತಲಾ ಇಂತಿಷ್ಟು ಹಣ ಕೊಟ್ಟುಕಳುಹಿಸುತ್ತಾನೆ.

ಬಿಸ್ಕೆಟ್‌ನಿಂದ “ಅಸಹ್ಯ’: ಈ ಗ್ಯಾಂಗ್‌ ಸದಸ್ಯರ ಕೃತ್ಯದ ಮಾದರಿಯೇ ವಿಭಿನ್ನ. ಬ್ಯಾಂಕ್‌ ಹಾಗೂ ಇತರೆ ವಾಣಿಜ್ಯ ಕಟ್ಟಡಗಳ ಸಮೀಪದ ಬ್ಯಾಂಕ್‌ನಿಂದ ಗ್ರಾಹಕರ ಮೇಲೆ ನಿಗಾವಹಿಸುತ್ತಾರೆ. ಹಣ ಡ್ರಾ ಮಾಡಿಕೊಂಡು ಹೊರಗಡೆ ಬರುತ್ತಿದ್ದಂತೆ ಬಿಸ್ಕೆಟ್‌ ಅನ್ನು ಚೆನ್ನಾಗಿ ಜಗಿದು, ಆ ಗ್ರಾಹಕನ ಪಕ್ಕದಲ್ಲೇ ಉಗಿ ಯುತ್ತಾರೆ. ಬಳಿಕ ಆ ಗ್ರಾಹಕನಿಗೆ ನಿಮ್ಮ ಸಮೀಪ ಅಸಹ್ಯ ಬಿದ್ದಿದ್ದೆ ಎಂದು ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗುತ್ತಾರೆ. ಒಂದು ವೇಳೆ ಬ್ಯಾಂಕ್‌ ಸಮೀಪದಲ್ಲಿ ಸಾಧ್ಯವಾಗದಿದ್ದರೆ ಅವರನ್ನು ಕಿ.ಮೀಟರ್‌ಗಟ್ಟಲೇ ಹಿಂಬಾಲಿಸುತ್ತಾರೆ. ಕಾರಿನಲ್ಲಿ ಹೋಗುತ್ತಿದ್ದರೆ, ಕಾರಿನ ಹಿಂಭಾಗ ಏನಾದರೂ ಅಸಹ್ಯ ಎಸೆದು ಕಾರು ನಿಲ್ಲಿಸುವಂತೆ ಮಾಡುತ್ತಾರೆ. ಒಬ್ಬ ಕಾರು ಚಾಲಕ, ಹಿಂಬದಿ ಕುಳಿತವನ ಜತೆ ಮಾತನಾಡುತ್ತಿದ್ದರೆ, ಕಾರಿನ ಮತ್ತೊಂದು ಡೋರ್‌ ಬಳಿ ಬೈಕ್‌ನಲ್ಲಿ ಬಂದ ಆರೋಪಿಗಳು ಹಣದ ಬ್ಯಾಗ್‌ ಕೊಂಡೊಯ್ಯುತಾರೆ.

ಬೈಕ್‌ನಲ್ಲಿ ಹೋಗುವ ಗ್ರಾಹಕರ ಬೆನ್ನು ಅಥವಾ ವಾಹನದ ಮೇಲೆ ಮಸಿ ಅಥವಾ ಇಂಕು ಎಸೆದು ನಿಲ್ಲಿಸಿ ಅವರ ಗಮನ ಬೇರೆಡೆ ಸೆಳೆದು ಕೃತ್ಯ ಎಸಗುತ್ತಾರೆ. ಈ ರೀತಿ ಯಾರಾದರೂ ತಮ್ಮನ್ನು ಮಾತನಾಡಿಸಲು, ಗಮನ ಬೇರೆಡೆ ಸೆಳೆಯಲು ಯತ್ನಿಸಿದರೆ ಅಂತಹ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

Advertisement

ಮಧ್ಯಮ ವರ್ಗದ ಜೀವನ ನಡೆಸುತ್ತಿರುವ ರಾಮ್‌ಜಿ ತಂಡ ತಮಿಳುನಾಡಿನ ರಾಮ್‌ಜೀ ನಗರದ ಈ ತಂಡ,ಎಂದಿಗೂ ಸುಮ್ಮನೆ ಕೂರುವುದಿಲ್ಲ. ನಿರಂತರವಾಗಿ ದೇಶಾದ್ಯಂತ ಸುತ್ತಾಡುತ್ತದೆ. ಅಪರಾಧಕೃತ್ಯ ಎಸಗಿ ಬಂದ ಹಣದಲ್ಲಿ ಉತ್ತಮ ಮನೆ, ಎಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ಇತರೆ ಎಲ್ಲ ರೀತಿಯ ಸೌಲಭ್ಯಗಳನ್ನು ಖರೀದಿಸಿ ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದಾರೆ.

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next