Advertisement

ರಜೆಯಲ್ಲಿ ನಾವು ಬಹಳ ಹಿಂದೆ

09:30 AM Mar 03, 2018 | Team Udayavani |

ಹೊಸದಿಲ್ಲಿ: ಭಾರತದ ಬಹುತೇಕ ಉದ್ಯೋಗಿಗಳು ಸಂಸ್ಥೆ ತಮಗೆ ನೀಡಿರುವ ರಜೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದೇ ಇಲ್ಲವೆಂದು ಅಧ್ಯಯನವೊಂದು ಹೇಳಿದೆ. ಕೆಲಸದ ಒತ್ತಡ ಮತ್ತು ಬದಲಾಗುವ ಆದ್ಯತೆಗಳ ಕಾರಣ ಭಾರತೀಯ ಉದ್ಯೋಗಸ್ಥ ಸಮುದಾಯ ರಜೆಯನ್ನು ಬಳಸಿಕೊಳ್ಳುವುದಿಲ್ಲ ಎಂದು ಬ್ರಿಟನ್‌ ಏರ್‌ವೆಸ್‌ ತಿಳಿಸಿದೆ.

Advertisement

ಉದ್ಯೋಗಿಗಳು ವರ್ಷಕ್ಕೆ ಸರಾಸರಿ 17 ದಿನಗಳು ರಜೆ ಪಾವತಿ ಪಡೆಯುತ್ತಾರೆ. ಅದಲ್ಲದೇ, ಶೇ.42ರಷ್ಟು ಉದ್ಯೋಗಿಗಳು ಕೆಲಸದ ಒತ್ತಡದ ಕಾರಣ ರಜೆ ಬಳಸಿಕೊಳ್ಳುವುದಿಲ್ಲ. ಶೇ.26ರಷ್ಟು ಮಂದಿ ಕಚೇರಿ ಜವಾಬ್ದಾರಿಗಳಿಂದ ಹೊರತಾಗಿ ಸಮಯ ಹೊಂದಿಸಿಕೊಳ್ಳಲು ಹೆಣಗುತ್ತಾರೆ. ಇನ್ನೂ ಶೇ.30ರಷ್ಟು ಉದ್ಯೋಗಿಗಳು ರಜೆ ಕೇಳುವುದಕ್ಕೇ ಹೆದರುತ್ತಾರೆ. ರಜೆ ಕೇಳಿದರೆ ತಮ್ಮ ಮೇಲಿನವರು ಹುಬ್ಬು ಗಂಟಿಕ್ಕುತ್ತಾರೆ ಮತ್ತು ವಾರದ ರಜೆ ನೀಡುವುದೇ ತಮಗೆ ಸಂಸ್ಥೆ ತೋರುವ ದೊಡ್ಡ ಅನುಕಂಪ ಎಂದು ಹಲವರು ಭಾವಿಸುತ್ತಾರೆ ಎಂದು ಅಧ್ಯಯನ ಹೇಳಿದೆ.

ಈ ಅಧ್ಯಯನವನ್ನು ಕಳೆದ ವರ್ಷ ಡಿ.20ರಿಂದ 2018ರ ಜ.4ರ ವರೆಗೆ ನಡೆಸಲಾಗಿದೆ. ಸುಮಾರು 2,000 ಉದ್ಯೋಗಿಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಅವರಲ್ಲಿ ಶೇ.60ರಷ್ಟು ಜನರು ರಜೆಯನ್ನು ಸಂಪೂರ್ಣವಾಗಿ ಅನುಭವಿಸಲು ಆಗದ ಕಾರಣ ಬೇಸರ ವ್ಯಕ್ತಪಡಿಸಿದ್ದಾರೆ. ಶೇ.97ರಷ್ಟು ಜನ ತಮ್ಮ ರಜೆ ಯೋಜನೆಯನ್ನು ಕೈಬಿಟ್ಟಿರುವುದಾಗಿ ಹೇಳಿದ್ದಾರೆ. “ಹೆಚ್ಚು ಸಮಯ ಕೆಲಸ ಮಾಡಿದರೆ ಸಂಸ್ಥೆಗೆ ಹೆಚ್ಚು ಕೊಡುಗೆ ನೀಡಿದಂತೆ ಎಂಬ ಮನಃಸ್ಥಿತಿ ಭಾರತೀಯರಲ್ಲಿ ಇರುವುದೂ ಇದಕ್ಕೆ ಕಾರಣ’ ಎಂದು ವಿಮರ್ಶಕರೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next