Advertisement

ಮಹಿಳಾ ಉದ್ದೇಶಿತ ಬಜೆಟ್‌ ಪರಿಶೀಲನೆಯಲ್ಲಿ-ಉಮಾಶ್ರೀ

03:45 AM Jan 21, 2017 | Team Udayavani |

ಬೆಂಗಳೂರು: ಮಹಿಳಾ ಉದ್ದೇಶಿತ ಬಜೆಟ್‌ನ ಖರ್ಚು-ವೆಚ್ಚಗಳಿಗೆ ಪ್ರತ್ಯೇಕ ಲೆಕ್ಕ-ಶೀರ್ಷಿಕೆ ಒದಗಿಸಲು ವಿಧೇಯಕ ರೂಪಿಸಲಾಗಿದ್ದು, ಸದ್ಯ ಅದು ಕಾನೂನು ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದ್ದಾರೆ. 

Advertisement

ರಾಜ್ಯ ಸರ್ಕಾರದ 29 ಇಲಾಖೆಗಳಲ್ಲಿ ಮಹಿಳಾ ಉದ್ದೇಶಿತ ಬಜೆಟ್‌ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಿಳಾ ಬಜೆಟ್‌ನ ಖರ್ಚು-ವೆಚ್ಚಗಳಿಗೆ ಪ್ರತ್ಯೇಕ ಲೆಕ್ಕ ಶೀರ್ಷಿಕೆ ಇಲ್ಲದಿರುವುದರಿಂದ ಮಹಿಳಾ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾಗುವ ಅನುದಾನದ ಲೆಕ್ಕಸಿಗುವುದಿಲ್ಲ. ಈ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಹಿಳಾ ಬಜೆಟ್‌ಗೆ ಪ್ರತ್ಯೇಕ ಲೆಕ್ಕಶೀರ್ಷಿಕೆ ಒದಗಿಸಬೇಕಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next