Advertisement
ಮಂಗಳವಾರ ಸಂಜೆಯಿಂದಲೇ ಮೋಡ ಮುಸುಕಿದ ವಾತಾವರಣ ಉಂಟಾಗಿ ನಂತರ 4 ಗಂಟೆಯ ವೇಳೆಗೆ ಮಿಂಚು ಗುಡಿಗಿನಿಂದ ತುಂತುರು ಮಳೆಯೊಂದಿಗೆ ಆರಂಭವಾಯಿತು. ನಂತರ ಮಳೆಯ ಆರ್ಭಟ ತೀವ್ರಗೊಂಡು ಬಿರುಗಾಳಿ, ಗುಡುಗು, ಸಿಡಿಲು ಹಾಗೂ ಬಾರಿ ಗಾಳಿಗೆ ಜಿಲ್ಲೆಯ ಹಲವು ಕಡೆ ಮರಗಳು, ವಿದ್ಯುತ್ ಕಂಬಗಳು ಧರೆ ಗುರುಳಿದವು. ಸುಮಾರು 8 ಗಂಟೆಗೂ ಹೆಚ್ಚುಕಾಲ ಸುರಿದ ಈ ಧಾರಾಕಾರ ಮಳೆಯಿಂದ ನಗರದ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗ ಲಾರದೇ, ರಸ್ತೆಯ ತುಂಬ ಮಳೆಯ ನೀರು ಹರಿದ ಪರಿಣಾಮ ಪಾದಚಾರಿಗಳು ವಾಹನ ಸವಾರರು ಕೆಲಹೊತ್ತು ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟಕರವಾಗಿ ಹೋಗಿತ್ತು.
Related Articles
Advertisement
ವಿದ್ಯುತ್ ಸಂಪರ್ಕ ಕಡಿತ: ಜಿಲ್ಲೆಯಾಂದ್ಯತ ಸುರಿದ ಬಾರೀ ಬಿರುಗಾಳಿ ಮಳೆಯ ಹಿನ್ನೆಲೆಯಲ್ಲಿ ವಿವಿಧ ಕಡೆಗಳಲ್ಲಿ ಮರಗಳು, ಕಂಬಗಳು ನೆಲಕ್ಕೆ ಉರುಳಿದ ಪರಿಣಾಮ ನಗರವೂ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯುತ್ ಕಡಿತ ಉಂಟಾಗಿತ್ತು.
ಧರೆಗುರುಳಿದ ಮರ, ಕಂಬಗಳು: ಜಿಲ್ಲೆಯಲ್ಲಿ ಸುರಿದ ಬಿರುಗಾಳಿ ಮಳೆಗೆ ಬರಗಾಲದಲ್ಲಿಯೂ ಕಷ್ಟ ಪಟ್ಟು ಬೆಳೆದ ಬಾಳೆ, ಅಡಕೆ, ತೆಂಗಿನ ಮರಗಳು ನೆಲಕ್ಕೆ ಉರುಳಿವೆ. ಜಿಲ್ಲೆಯ ತಿಪಟೂರು ತಾಲೂಕಿನ ಗೊರ ಗುಂಡನಹಳ್ಳಿಯ ರೈತ ಶಿವಕುಮಾರ್ ಎಂಬುವವರು ಬೆಳೆದಿದ್ದ, ಬಾಳೆ ತೋಟ ಬಿರುಗಾಳಿಗೆ ನೆಲ ಸಮವಾಗಿದೆ.
ಸುಮಾರು 2 ಎಕರೆ ವಿಸ್ತೀರ್ಣದ ಬಾಳೆ ತೋಟದಲ್ಲಿ ಕೊಯ್ಲಿನ ಹಂತಕ್ಕೆ ಬಾಳೆ ಬಂದಿದ್ದ ವೇಳೆಗೆ ನೆಲಸಮ ವಾಗಿದ್ದು, ರೈತನಿಗೆ ಭಾರೀ ನಷ್ಟ ಉಂಟಾಗಿದೆ. ಅದೇ ರೀತಿಯಲ್ಲಿ ಹೊಳವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದುಗ್ಗೇನಹಳ್ಳಿಗೆ ಗಾಳಿ ಮಳೆಗೆ ತೋಟದ ಮನೆಯ ಶೀಟುಗಳು ಹಾರಿ ಹೋಗಿ ಅಲ್ಲಿಯೂ ಬಾಳೆ ತೋಟ ನಾಶವಾಗಿದೆ.
ತುಮಕೂರು ತಾಲೂಕು ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಇದೇ ರೀತಿ ಬಿರುಗಾಳಿ ಸಹಿತ ಧಾರಕಾರ ಮಳೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಭೀಕರ ಬರಗಾಲದಲ್ಲಿಯೂ ಲಕ್ಷಾಂತರ ರೂ. ಖರ್ಚು ಮಾಡಿ ಕೊಳವೆಬಾವಿ ಕೊರಸಿ ಈ ಬೋರ್‌ವೆಲ್ಗಳ ಆಶ್ರಯದಲ್ಲಿ ತಮ್ಮ ತೋಟಗಳನ್ನು ಉಳಿಸಿಕೊಂಡದ್ದ, ರೈತರಿಗೆ ಈ ಬಿರುಗಾಳಿ ಮಳೆ ನಷ್ಟ ಉಂಟುಮಾಡಿದೆ. ಜಿಲ್ಲೆಯಲ್ಲಿ ಈ ಮಳೆಯಿಂದ ರೈತರಿಗೆ ಉಂಟಾಗಿರುವ ನಷ್ಟವನ್ನು ಅಂದಾಜಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವತ್ತಾ, ಜಿಲ್ಲಾಡಳಿತ ಮುಂದಾಗ ಬೇಕಾಗಿದೆ.