Advertisement

ನಗರದಲ್ಲಿ 11ರಿಂದ ನಾಲ್ಕು ದಿನ ನಾಟಕೋತ್ಸವ

12:15 PM Dec 11, 2017 | Team Udayavani |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ, ಡಿ.11ರಿಂದ 15ರ ವರೆಗೆ ನಾಲ್ಕು ದಿನಗಳ ನಾಟಕೋತ್ಸವ ಹಮ್ಮಿಕೊಂಡಿದೆ. ಪ್ರತಿ ದಿನ ಮಧ್ಯಾಹ್ನ 2.30ಕ್ಕೆ ಬೆಂಗಳೂರು ವಿವಿಯ ಡಾ.ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ನಾಟಕೋತ್ಸವ ನಡೆಯಲಿದೆ.

Advertisement

ಸೋಮವಾರ ಡಾ.ಮನು ಬಳಿಗಾರ್‌ ರಚನೆಯ “ಮೈಲಾರ ಮಹಾದೇವ’, ಮಂಗಳವಾರ ಡಾ.ರಾಜಪ್ಪ ದಳವಾಯಿ ರಚನೆಯ “ದಾರಾಶಿಕೋ’, ಬುಧವಾರ ಮಂಜುನಾಥ್‌ ಬೆಳಕರೆ ರಚನೆಯ “ಶರೀಫ‌’ ಮತ್ತು ಗುರುವಾರ ಡಾ.ಎಚ್‌.ಎಸ್‌.ಶಿವಪ್ರಕಾಶ್‌ ರಚನೆಯ “ಮಂಟೇಸ್ವಾಮಿ ಕಥಾ ಪ್ರಸಂಗ’ ನಾಟಕ ಪ್ರದರ್ಶನಗೊಳ್ಳಲಿದೆ.

ಇದೇ ವೇಳೆ ನಾಟಕ ರಚನಾ ಕಮ್ಮಟ ಕೂಡ ನಡೆಯಲಿದ್ದು, ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಕಾರ್ಯಕ್ರಮ ಉದ್ಘಾಟಿಸುವರು. ಬೆಂಗಳೂರು ವಿವಿ ಕುಲಪತಿ ಡಾ.ಎಚ್‌.ಎನ್‌.ರಮೇಶ್‌ ಅಧ್ಯಕ್ಷತೆಯನ್ನು ವಹಿಸಲಿದ್ದು, ಕುಲಸಚಿವ ಡಾ.ಬಿ.ಕೆ.ರವಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next