Advertisement

ಕೃಷ್ಣ ರಾಜೀನಾಮೆ ವಿಚಾರದಲ್ಲಿ  ಮಧ್ಯೆ ಪ್ರವೇಶಿಸಲ್ಲ: ಖರ್ಗೆ

03:45 AM Feb 06, 2017 | |

ಬೆಂಗಳೂರು: “ಎಸ್‌.ಎಂ. ಕೃಷ್ಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ವಿಚಾರ ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ನಾನು ಇದುವರೆಗೆ ನೇರವಾಗಿ ಕೃಷ್ಣ ಅವರೊಂದಿಗೆ ಈ ಬಗ್ಗೆ ಮಾತನಾಡಿಲ್ಲ’ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

Advertisement

ದೆಹಲಿಗೆ ತೆರಳುವ ಮುನ್ನ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಅವರು ಯಾಕೆ ರಾಜೀನಾಮೆ ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಅವರೊಂದಿಗೆ ಹೈಕಮಾಂಡ್‌ ಮಾತುಕತೆ ನಡೆಸಿದೆ. ಹಾಗಾಗಿ, ನಾನು ಮಧ್ಯಪ್ರವೇಶಿಸುವುದು ಸರಿ ಅಲ್ಲ’ ಎಂದರು. 

ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹೊರಟುನಿಂತಿದ್ದರು. ಈ ಸಂದರ್ಭದಲ್ಲಿ ಅವರ ಮೊಮ್ಮಗ “ಬಾಯ… ತಾತ’ ಎಂದು ವಿದಾಯ ಹೇಳಿದ. ಆಗ ಪ್ರೀತಿಯಿಂದಲೇ ಗದರಿದ ಖರ್ಗೆ ಅವರು, “ಕನ್ನಡದಲ್ಲಿ ಮಾತನಾಡಬೇಕು. ಇಲ್ಲದಿದ್ದರೆ ಹೊರಗೆ ಹಾಕ್ತೀನಿ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next