Advertisement

ನಾಪತ್ತೆ ಪ್ರಕರಣಕ್ಕೆ: ಪಾಕ್‌ ಗುಪ್ತಚರ ಇಲಾಖೆ ವಶದಲ್ಲಿ ಮೌಲ್ವಿಗಳು?

03:50 AM Mar 19, 2017 | |

ಹೊಸದಿಲ್ಲಿ: ದಿಲ್ಲಿಯ ಹಜ್ರತ್‌ ನಿಜಾಮುದ್ದೀನ್‌ ದರ್ಗಾದ ಇಬ್ಬರು ಮೌಲ್ವಿಗಳ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಅವರನ್ನು ಪಾಕಿಸ್ಥಾನದ ಗುಪ್ತಚರ ಇಲಾಖೆ ವಶಕ್ಕೆ ತೆಗೆದುಕೊಂಡಿರುವ ವಿಚಾರ ಈಗ ಗೊತ್ತಾಗಿದೆ.

Advertisement

ಮುತ್ತಹಿದಾ ಖ್ವಾಮಿ ಮೂವ್‌ಮೆಂಟ್‌ (ಎಂಕ್ಯುಎಂ) ಜತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಪಾಕ್‌ ಗುಪ್ತಚರ ಇಲಾಖೆ 
ಇವರನ್ನು ವಶಕ್ಕೆ ಪಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮೌಲ್ವಿಗಳಾಗಿರುವ ಸಯೀದ್‌ ಆಸಿಫ್ ನಿಜಾಮ್‌ ಮತ್ತು ಆತನ ಸೋದರಳಿಯ ನಜೀಮ್‌ ನಿಜಾಮ್‌ ಮಾ. 14ರಂದು ಲಾಹೋರ್‌ನ ಅಲ್ಲಾಮಾ ಇಕ್ಬಾಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಣೆ ಯಾಗಿದ್ದರು. ವಿಮಾನ ನಿಲ್ದಾಣದಲ್ಲೇ ಈ ಇಬ್ಬರನ್ನೂ ವಶಕ್ಕೆ ಪಡೆದ ಗುಪ್ತಚರ ಇಲಾಖೆಯ ಅಧಿಕಾರಿಗಳು ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರೂ ಎಂಕ್ಯುಎಂನ ಅಲ್ತಾಫ್ ಹುಸೈನ್‌ನ ಸಹಚರನ ಜತೆ ನಂಟು ಹೊಂದಿರುವ ಶಂಕೆಯಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಇವರ ಮೇಲಿನ ಆರೋಪ ಸಾಬೀತಾಗದಿದ್ದರೆ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next