ಸಿಧು ಅವರನ್ನು ದೋಷಿ ಎಂದು ಸುಪ್ರೀಂಕೋರ್ಟ್ ಘೋಷಿಸಿದೆ.
Advertisement
ಅವರಿಗೆ 1 ಸಾವಿರ ರೂ. ದಂಡ ವಿಧಿಸಿದೆ. ನ್ಯಾ.ಜೆ.ಚಲಮೇಶ್ವರ್ ಮತ್ತು ನ್ಯಾ.ಸಂಜಯ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠ ಇದೇ ಪ್ರಕರಣದಲ್ಲಿ ಸಿಧು ಅವರಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನ್ಯಾಯಪೀಠ ನೀಡಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ರದ್ದು ಮಾಡಿದೆ. ಇದರ ಜತೆಗೆ 1988ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧು ಅವರ ನಿಕಟವರ್ತಿ ರೂಪಿಂದರ್ ಸಿಂಗ್ ಸಂಧು ಎಂಬುವರನ್ನು ದೋಷಮುಕ್ತಿಗೊಳಿಸಿದೆ.