Advertisement
ಕುರ್ತಾ ಶರ್ಟ್ಗಳುತುಂಬು ತೋಳು, ಗಿಡ್ಡ ತೋಳಿನ ಶರ್ಟ್, ಟೀ ಶರ್ಟ್‌ಗಳು, ಪೈಜಾಮಾದಂತಹ ಕೆಲವೇ ಆಯ್ಕೆಗಳಿಗೆ ಸೀಮಿತವಾಗಿದ್ದ ಹುಡುಗರ ವಸ್ತ್ರ ಲೋಕಕ್ಕೆ ಈಗ ನಾನಾ ಶೈಲಿಯ ಕುರ್ತಾಗಳು ಎಂಟ್ರಿಯಾಗಿವೆ. ಮಾರುಕಟ್ಟೆಯಲ್ಲಿ ಇಂದು ಸಖತ್ ಟ್ರೆಂಡ್ ಆಗುತ್ತಿರುವ ಈ ಮಾದರಿಯ ಉಡುಗೆ ಇಂದಿನ ಯುವಕರ ಮೆಚ್ಚಿನ ಧಿರಿಸಾಗಿ ಗುರುತಿಸಿಕೊಳ್ಳುತ್ತಿದೆ. ಫಾರ್ಮಲ್ ಫಂಕ್ಷನ್‌ಗಳಲ್ಲಿ ಶಾರ್ಟ್ ಕುರ್ತಾ, ಲಾಂಗ್ ಕುರ್ತಾಗಳು ಮನ್ನಣೆ ಪಡೆದುಕೊಳ್ಳುತ್ತಿ¤ವೆ.
ಎಡ ಭುಜದಿಂದ ಇಳಿದ ಐದು ನೆರಿಗೆಗಳು ಕುರ್ತಾದ ಕೊನೆಯಿಂದ ಸೊಂಟದ ಬಲಭಾಗದತ್ತ ಹೊರಳುತ್ತವೆ. ಕುರ್ತಾಕ್ಕೆ ಅಸಾಮಾನ್ಯ ನೋಟ ನೀಡುವುದೇ ಆ ನೆರಿಗೆಗಳು. ಭುಜದ ಬಳಿ ನೆರಿಗೆಗಳಿಗೆ ಮೇಲ್ಭಾಗದಲ್ಲೇ ಹೊಲಿಗೆ ಹಾಕಿರುವ ಕ್ಲಾಸಿ ಲುಕ್ ನೀಡುತ್ತದೆ. ಮದುವೆ ಮನೆ, ಶುಭ ಸಮಾರಂಭಗಳಲ್ಲಿ ಮದುಮಗ ಮತ್ತು ಅವನ ಅಕ್ಕಪಕ್ಕ ನಿಲ್ಲುವ ಸಹೋದರರಿಗೆ, ಸ್ನೇಹಿತರಿಗೆ ಪಕ್ಕಾ ಟ್ರೆಂಡಿ ಉಡುಗೆ ಎಂಬ ಹೆಗ್ಗಳಿಕೆ ಗಳಿಸಿದೆ. ಭಿನ್ನವಾಗಿ ಕಾಣಲು ಜಾಕೆಟ್
ಭಿನ್ನವಾಗಿ ಕಾಣಲು ಕೌಲ್ ಕುರ್ತಾದ ಮೇಲೆ ಜಾಕೆಟ್‌ಗಳನ್ನು ಧರಿಸುತ್ತಿದ್ದು, ಕುರ್ತಾಕ್ಕೆ ಹೊಂದಾಣಿಕೆ ಆಗುವಂತೆ ವಾಸ್ಕೋಟ್‌ಗಳನ್ನು ವಿನ್ಯಾಸ ಮಾಡಲಾಗುತ್ತಿದೆ. ಜಾಕೆಟ್ ಆರಿಸುವಾಗಲೂ ಜಾಣತನ ಮತ್ತು ಸೌಂದರ್ಯಪ್ರಜ್ಞೆ ತೋರುವ ಯುವಕರು ಕೆನೆಬಣ್ಣದ ಕೌಲ್ ಕುರ್ತಾ ಮತ್ತು ಪೈಜಾಮದ ಮೇಲೆ ಗಂಧದ ಬಣ್ಣದ ಜಾಕೆಟ್, ತಿಳಿಗುಲಾಬಿ ಬಣ್ಣದ ಕೌಲ್ ಕುರ್ತಾ ಪೈಜಾಮಾಕ್ಕೆ ಗುಲಾಬಿ ಬಣ್ಣದ್ದೇ ಹೂಬಳ್ಳಿಯಂತಹ ವಿನ್ಯಾಸವಿರುವ ಜಾಕೆಟ್ ಮತ್ತು ಗ್ರೀಸ್ ಬಣ್ಣದ ಕುರ್ತಾಕ್ಕೆ ಅದೇ ಬಣ್ಣ ಮತ್ತು ತಿಳಿ ನೀಲಿ (ಇಂಡಿಗೊ)ವಿನ್ಯಾಸವಿರುವ ಜಾಕೆಟ್‌ಗಳನ್ನು ತೊಡುತ್ತಿದ್ದಾರೆ.
Related Articles
ಕುರ್ತಾ ಶರ್ಟ್‌ಗಳಿಗೆ ಜಿನ್ಸ್ ಪ್ಯಾಂಟ್‌ಗಳಿಗಿಂತ್ ಫಾರ್ಮಲ್ಸ್ ಮತ್ತು ಆಂಕ್ಯಲ್ ಪ್ಯಾಂಟ್‌ಗಳು ಹೊಂದಾಣಿಕೆಯಾದರೆ, ಮೊಣಕಾಲಿನವರೆಗೆ ಬರುವ ಕುರ್ತಾಗಳಿಗೆ ಪುಶ್ ಆಪ್ ಪ್ಯಾಂಟ್‌ಗಳು ಅಥವ ಪೈಜಾಮಾಗಳು ಸೂಟ್ ಆಗುತ್ತವೆ.
Advertisement
ಆಕರ್ಷಕ ವಿನ್ಯಾಸಸೈಡ್ ಬಟನ್ ಮತ್ತು ಮಿಡ್‌ಲ್ ಬಟನ್ ಹೀಗೆ ಎರಡು ಮಾದರಿಯಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದ್ದು, ರೌಂಡ್ ನೆಕ್ ಅಥವಾ ಚೈನಿಸ್ ಕಾಲರ್ ಇದರ ಅಂದವನ್ನು ಹೆಚ್ಚಿಸುತ್ತಿದೆ. ಪುಲ್ ಹ್ಯಾಂಡ್ ಮತ್ತು ತ್ರೀ ಫೋರ್ಥ್ ಕೈ ತೋಳುಗಳ ಮಾದರಿಯಲ್ಲಿ ಲಭ್ಯ. ಸಮಾರಂಭ ಮಾತ್ರವಲ್ಲ ಎಲ್ಲ ಸಂದರ್ಭಗಳಿಗೂ ಸೂಟ್ ಆಗುವ ಈ ಅಂಗಿಯನ್ನು ಕಾಲೇಜ್ ಹೈಕಳುಗಳಿಂದ ಹಿಡಿದು ಕಚೇರಿಗೆ ಹೋಗುವವರೂ, ಮಧ್ಯ ವಯಸ್ಕರೂ ತೊಡಲು ಆಸಕ್ತಿ ತೋರುತ್ತಿದ್ದಾರೆ. – ಸುಶ್ಮಿತಾ ಜೈನ್