Advertisement

ಅಂದುಕೇಂದ್ರ ಎಂದವರು ಇಂದು ರಾಜ್ಯ;ಇಂದು ರಾಜ್ಯ ಎನ್ನುವವರುಅಂದು ಕೇಂದ್ರ

11:24 AM Mar 31, 2018 | Team Udayavani |

ಬಜಪೆ: 2013ರ ವಿಧಾನಸಭಾ ಚುನಾವಣಾ ವೇಳೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಇದ್ದರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಇತ್ತು. ಈಗ ಅದೇ ಉಲ್ಟಾ ಹೊಡೆದಿದೆ. 2018ರ ಚುನಾವಣಾ ವೇಳೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇದ್ದರೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಆಡಳಿತ ನಡೆಸುತ್ತಿದೆ.

Advertisement

ಅಂದು ಜನಪರ ಯೋಜನೆಗಳೆಲ್ಲ ಕೇಂದ್ರದವು ಎಂದು ಹೇಳಿದವರು ಇಂದು ಅವೆಲ್ಲ ರಾಜ್ಯದವು ಎನ್ನುತ್ತಿದ್ದಾರೆ. ಅಂದು ರಾಜ್ಯದ ಯೋಜನೆಗಳು ಎಂದವರು ಈಗ ಅವೆಲ್ಲ ಕೇಂದ್ರದವು ಎನ್ನುತ್ತಿದ್ದಾರೆ. ಜನಪರ, ಅಭಿವೃದ್ಧಿ ಎಂಬ ಪದಗಳನ್ನು ಎತ್ತಿಕೊಂಡರೆ ಈ ಹೊಗಳಿಕೆಗಳು ಆರಂಭವಾಗುತ್ತವೆ. ಯಾವುದೇ ಕಾರ್ಯಕ್ರಮವಿರಲಿ, 2013ರಲ್ಲಿ ಕಾಂಗ್ರೆಸ್‌ ಪಕ್ಷದವರು ಅವೆಲ್ಲ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಯೋಜನೆಗಳು ಎಂದು ಹೇಳುತ್ತಿದ್ದರು. ಇದಕ್ಕೆ ಪ್ರತಿಯಾಗಿ ಆಗ ಬಿಜೆಪಿಯವರು ಅವೆಲ್ಲ ರಾಜ್ಯದಲ್ಲಿ ಮಾತ್ರ ಇವೆ, ಇವೆಲ್ಲ ರಾಜ್ಯ ಬಿಜೆಪಿ ಸರಕಾರದ ಯೋಜನೆಗಳು ಎಂದು ಹೇಳುತ್ತಿದ್ದರು.

2018ರಲ್ಲಿ ಇದು ಉಲ್ಟಾ ಆಗಿದೆ. ಈಗ ಅಭಿವೃದ್ಧಿ ಯೋಜನೆಗಳೆಲ್ಲ ಕೇಂದ್ರದವು ಎಂಬುದಾಗಿ ಬಿಜೆಪಿಯವರು ಹೇಳಿಕೊಂಡರೆ, ಇಲ್ಲ ಅವೆಲ್ಲ ರಾಜ್ಯ ಕಾಂಗ್ರೆಸ್‌ ಸರಕಾರದವು ಎಂಬುದು ಕಾಂಗ್ರೆಸಿಗರ ವಾದ.

ಕೇಂದ್ರದ ಈಗಿನ ಹೊಸ ಯೋಜನೆಗಳೆಲ್ಲ ಈ ಹಿಂದೆ ಯುಪಿಎ ಅಧಿಕಾರದಲ್ಲಿ ಇದ್ದಾಗ ಆರಂಭಿಸಿದಂಥವು, ಈಗ ಅನುಷ್ಠಾನಗೊಳ್ಳುತ್ತಿವೆ, ಹೆಸರು ಮಾತ್ರ ಬೇರೆ ಎಂಬುದು ಕಾಂಗ್ರೆಸ್‌ ವಾದ. ಇದಕ್ಕೆ ಪ್ರತಿಯಾಗಿ ಬಿಜೆಪಿ ಹೇಳುವುದೇನೆಂದರೆ, ಕೇಂದ್ರ ಸರಕಾರದ ಯೋಜನೆಗಳನ್ನೇ ರಾಜ್ಯದಲ್ಲಿ ಹೆಸರು ಬದಲಿಸಿ ಕಾಂಗ್ರೆಸ್‌ನವರು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ಅನುದಾನವೆಲ್ಲ ಕೇಂದ್ರ ಸರಕಾರದ್ದು. ಎರಡೂ ಪಕ್ಷಗಳ ಈ ಅಭಿವೃದ್ಧಿ ವಿವಾದದಿಂದ ಗಲಿಬಿಲಿಗೊಳ್ಳುವ ಸರದಿ ಜನಸಾಮಾನ್ಯರದು.

ಜನಸಾಮಾನ್ಯರಿಗೆ ಯಾವುದು ಕೇಂದ್ರದ ಯೋಜನೆ, ಯಾವುದು ರಾಜ್ಯ ಸರಕಾರದ ಯೋಜನೆ, ಯಾವುದಕ್ಕೆ ಕೇಂದ್ರದ ಅನುದಾನ ಎಷ್ಟು, ರಾಜ್ಯದ ಅನುದಾನ ಎಷ್ಟು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಠಿನ. ಅದೇನೇ ಇದ್ದರೂ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡು ಅವುಗಳ ಅನುಕೂಲ ಅರ್ಹ ಫಲಾನುಭವಿಗಳಿಗೆ ಸಿಕ್ಕಿದೆಯೇ ಎನ್ನುವುದು ಮುಖ್ಯ. ಯೋಜನೆ ಯಾರದ್ದೇ ಇರಲಿ; ಅದರಿಂದ ಎಷ್ಟು ಜನರು ಪ್ರಯೋಜನ ಪಡೆದಿದ್ದಾರೆ ಎಂಬುದೇ ಮುಖ್ಯ.

Advertisement

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next