ಕೊರಟಗೆರೆ :- ಹಾಡುಹಗಲಲ್ಲೇ ಮನೆ ಮಾಲೀಕ ಜಮೀನಿನ ಕಡೆ ಹೋಗುವುದನ್ನೇ ಕಾದಿದ್ದ ಕಳ್ಳರು ಮನೆ ಕಳ್ಳತನ ಮಾಡಿ ಮನೆಯಲ್ಲಿದ್ದ 42 ಗ್ರಾಂ ಚಿನ್ನಾಭರಣ ಸೇರಿದಂತೆ 10ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಕೋಳಾಲ ಹೋಬಳಿ ಇರಕಸಂದ್ರ ಕಾಲೋನಿಯಲ್ಲಿ ಜರುಗಿದೆ.
ಮನೆ ಮಾಲೀಕ ಲಕ್ಷ್ಮೀಶಯ್ಯ ಮತ್ತು ಅವನ ಹೆಂಡತಿ ದನಗಳನ್ನು ಮೇಯಿಸಲು ಜಮೀನು ಹತ್ತಿರಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಕಳ್ಳರು ಬುಧವಾರ ಮಧ್ಯಾಹ್ನ ಯಾರು ಇಲ್ಲದನ್ನೂ ಗಮನಿಸಿ 42 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ನಗದನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಮನೆ ಮಾಲೀಕರು ಹೊರ ಹೋಗುವುದನ್ನೇ ಒಂಚು ಹಾಕಿರುವ ಕಳ್ಳರು ಮನೆಯ ಮಾಲೀಕ ಮನೆ ಬೀಗ ಹಾಕಿ ಬೀಗದ ಕೀಯನ್ನು ಮನೆಯ ಹತ್ತಿರ ಬಚ್ಚಿಡುವುದನ್ನು ಗಮನಿಸಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯ ಕೀ ತೆಗೆದು ಒಳಪ್ರವೇಶಿಸಿ ಕಬೋರ್ಡ್ ನಲ್ಲಿದ್ದ 34 ಗ್ರಾಂ ಚಿನ್ನದ ಚೈನ್ ಹಾಗೂ 7 ಗ್ರಾಂ ಉಂಗುರ ಮತ್ತು ಸುಮಾರು 10ಸಾವಿರ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ:- ಮುಂದಿನ ವರ್ಷದಿಂದ ಪ್ರಾಥಮಿಕ ಹಂತದಲ್ಲೂ ನೂತನ ಶಿಕ್ಷಣ ನೀತಿ ಅಳವಡಿಕೆ: ಬಿ.ಸಿ.ನಾಗೇಶ್
ಘಟನೆ ಹಾಡಹಗಲೇ ರಾಜ್ಯ ಹೆದ್ದಾರಿ ಬೆಂಗಳೂರು – ಪಾವಗಡ ಪ್ರಮುಖ ರಸ್ತೆಗೆ ಹೊಂದಿಕೊಂಡಂತಿರುವ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಮಾಲೀಕರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಜಮೀನಿನ ಕೆಲಸದ ಆಳುಗಳಿಗೆ ಹಣ ನೀಡಲು ಕಬೋರ್ಡ್ ಪರೀಕ್ಷಿಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ ಎನ್ನಲಾಗಿದೆ.
ಈ ಸಂಬಂಧ ತಾಲೂಕಿನ ಕೋಳಾಲ ಪೋಲಿಸ್ ಇನ್ಸ್‌ಪೆಕ್ಟರ್ ಮಹಾಲಕ್ಷ್ಮಮ್ಮ ಸ್ಥಳ ಪರಿಶೀಲನೆ ನಡೆಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.