Advertisement
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಕಾಡೊಳಗೆ ಇರುವ ಗ್ರಾಮ ಇಂಡಿಗನತ್ತದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲವೆಂದು ಗ್ರಾಮ ಸ್ಥರು ಮತದಾನ ಬಹಿಷ್ಕರಿಸಿದ್ದರು. ಗ್ರಾಮಸ್ಥರನ್ನು ಮನವೊಲಿಸಲು ತೆರಳಿದ್ದ ಅಧಿಕಾರಿಗಳು, ಪೊಲೀಸರ ಮೇಲೆ ರೊಚ್ಚಿಗೆದ್ದ ಗ್ರಾಮಸ್ಥರು ಮತಯಂತ್ರ, ವಿವಿ ಪ್ಯಾಟ್, ಮತಗಟ್ಟೆಯ ಬಾಗಿಲು, ಕಿಟಕಿ, ಮೇಜು, ಕುರ್ಚಿ ಇತರ ಪರಿಕರಗಳನ್ನು ಧ್ವಂಸ ಮಾಡಿದ್ದಾರೆ. ಗ್ರಾಮಸ್ಥರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲು ಮುಂದಾದ ಪೊಲೀಸರ ವರ್ತನೆಗೆ ರೊಚ್ಚಿಗೆದ್ದ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಕಲ್ಲುತೂರಾಟ ನಡೆಸಿ, ಡೀಸೆಲ್ ಪೆಟ್ರೋಲ್ ಎರಚಿ ಬೆಂಕಿ ಹಾಕಿದ್ದಾರೆ.
Related Articles
Advertisement
ರಾತ್ರಿ 7.30ರವರೆಗೂ ಮತದಾನಶ್ರೀರಂಗಪಟ್ಟಣ ತಾಲೂಕಿನ ವಡಿಯಾಂಡಳ್ಳಿ ಗ್ರಾಮದ ಬೂತ್ ನಂ.144ರಲ್ಲಿ ಮತಯಂತ್ರ ಕೆಟ್ಟು, 45 ನಿಮಿಷ ಮತದಾನ ಸ್ಥಗಿತಗೊಂಡಿತು. ಇದರಿಂದ ಮತದಾನ ರಾತ್ರಿ 7.30ರ ವರೆಗೂ ನಡೆಸಲಾಯಿತು. ನೇರಳೆಕೆರೆ ಗ್ರಾಮದಲ್ಲೂ ಮತಯಂತ್ರ ಕೆಟ್ಟು, ಸಂಜೆ 7.30ರ ವರೆಗೆ ಮತದಾನ ನಡೆಸಲಾಯಿತು. ಹಾಸನದ ಸಂತೇಪಟ್ಟಿಯಲ್ಲಿ ಎರಡು ಬಾರಿ ಇವಿಎಂ ಕೈಕೊಟ್ಟಿದ್ದರಿಂದ ಮತದಾರರು ಬೇಸತ್ತು ಮತ ಹಾಕದೇ ಮರಳಿದರು. ತುಮಕೂರು ಜಿಲ್ಲೆ ತಿಪಟೂರಿನ ಗಾಯತ್ರಿ ನಗರದಲ್ಲಿ ಮತ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಮತದಾನ ತಡವಾಯಿತು. ರಾಮನಗರದ ಬಿಡದಿ ಸಮೀಪದ ಕಲ್ಲುಗೋಪಹಳ್ಳಿಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಅರ್ಧಗಂಟೆಗೂ ಹೆಚ್ಚುಕಾಲ ಮತದಾನ ಸ್ಥಗಿತಗೊಂಡಿತ್ತು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದಲೇ ಆರಂಭ ವಾಗಿದ್ದರೂ ಕೆಲವೆಡೆ ಇವಿಎಂ, ವಿವಿಪ್ಯಾಟ್ ತಾಂತ್ರಿಕ ದೋಷದಿಂದ ಮತದಾನ ಆರಂಭವಾಗುವಲ್ಲಿ ತುಸು ವಿಳಂಬವಾಗಿದೆ. ಬಿಸಿಲಿನಿಂದ ತಡವಾಗಿ
ಬಂದ ಮತದಾರರು
ಬಹುತೇಕ ಕಡೆ ಬಿಸಿಲಿನಿಂದಾಗಿ ಸಂಜೆಯವರೆಗೆ ಮತದಾನ ಕೇಂದ್ರದತ್ತ ಮತದಾರರು ಮುಖ ಮಾಡಿರಲಿಲ್ಲ. ಹೀಗಾಗಿ ಸಂಜೆ 5 ಗಂಟೆಯ ಬಳಿಕ ಮತದಾನ ಮಾಡಲು ಮುಂದಾಗಿದ್ದರಿಂದ ಮತದಾನ ವಿಳಂಬವಾಗಿದೆ. ಕೆಲ ಮತಗಟ್ಟೆಯಲ್ಲಿ 6 ಗಂಟೆಯಾದರೂ ಮತದಾನ ಮುಗಿಯದೇ, 6 ಗಂಟೆ ನಂತರ ಬಂದ ಮತದಾರರನ್ನು ಸಾಲಿನಲ್ಲಿ ನಿಲ್ಲಿಸಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಬಹುತೇಕ ಕಡೆ ರಾತ್ರಿ 7.30ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು.