Advertisement
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಲೈಲಾಮಾ, ಬೌದ್ಧರ ಮುಂದಿನ ಧರ್ಮಗುರು ಅಂದರೆ ದಲೈಲಾಮಾ ಭಾರತದಿಂದಲೇ ಆಯ್ಕೆಯಾಗಬಹುದು. ಟಿಬೇಟ್ ಮೇಲಿನ ಹಿಡಿತದಿಂದ ಚೀನಾ ಮುಂದಿನ ದಲೈಲಾಮಾರನ್ನು ಆಯ್ಕೆ ಮಾಡಬಹುದು. ಆದರೆ ಅದನ್ನು ಯಾರೂ ಗೌರವಿಸುವುದಿಲ್ಲ ಎಂದಿದ್ದಾರೆ.
ಮುಂದಿನ ದಲೈಲಾಮಾರನ್ನು ಆಯ್ಕೆ ಮಾಡಲು ತನಗೂ ಹಕ್ಕು ಇದೆ ಎಂದು ಚೀನಾ ವಾದಿಸುತ್ತಿದೆ. ಆದರೆ ಚೀನಾಗೆ ಯಾವುದೇ ಹಕ್ಕು ಇಲ್ಲ. ಟಿಬೇಟ್ ನ ಸಂಪ್ರದಾಯದಂತೆ ದಲೈಲಾಮಾರು ಮರಣ ಹೊಂದಿದ ನಂತರ ಅವರ ಆತ್ಮ ಮುಂದಿನ ಅವತಾರಕ್ಕಾಗಿ ಪುಟ್ಟ ಬಾಲಕನ ಆತ್ಮವನ್ನು ಸೇರುತ್ತದೆ. ಆ ಬಗ್ಗೆ ಬಾಲಕನನ್ನು ಧರ್ಮಗುರುಗಳು ಮಾತ್ರ ಗುರುತಿಸುತ್ತಾರೆ ಎಂದು 83ರ ಹರೆಯದ ನೋಬೆಲ್ ಶಾಂತಿ ಪುರಸ್ಕಾರ ವಿಜೇತ 14ನೇ ದಲೈಲಾಮಾ ಹೇಳಿದರು.