Advertisement
ಪರಿಸರದ ಭತ್ತದ ಗದ್ದೆಗಳಲ್ಲಿ ರಾಟವಾಳ ಹಕ್ಕಿಗಳ ಉಪಟಳ ಸಾಕಷ್ಟಿದ್ದು ಮೊಳಕೆಗಳನ್ನು ತಿನ್ನುತ್ತಿವೆ. ಇವುಗಳನ್ನು ಓಡಿಸುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ.
Related Articles
Advertisement
ಹಂಗಳೂರಿನ ರೋಶನ್ ಡಿ’ಸೋಜಾ ಅವರು ಭತ್ತದ ಗದ್ದೆಯಲ್ಲಿ ಕುಳಿತೇ ಹಕ್ಕಿಗಳ ಕುರಿತು ಅಧ್ಯಯನ ಮಾಡಿದ್ದಾರೆ.
ಅವರು ಹೇಳುವಂತೆ ಭತ್ತದ ಬೀಜ ಗಳನ್ನು ತಿನ್ನಲು ಬರುವ ರಾಟವಾಳ ಸಮೂಹ ನಾವು ಎಷ್ಟೇ ಸದ್ದು ಮಾಡಿ ಕೂಗಿದರೂ ಕಿಂಚಿತ್ತೂ ಅಲುಗಾಡದೆ ಸುಮ್ಮನೆ ಕುಳಿತು ತಿನ್ನುತ್ತಿರುತ್ತವೆ. ಹತ್ತಿರ ಹೋಗಿ ಅಥವಾ ಮಣ್ಣನ್ನು ಎಸೆದು ಓಡಿಸ ಬೇಕಾಗುತ್ತದೆ. ಆದ್ದರಿಂದ ಸ್ಥಳೀಯರು ಈ ಹಕ್ಕಿಗಳನ್ನು ಕೆಪ್ಪಕ್ಕಿ ಎನ್ನುತ್ತಾರೆ.
ಈ ರಾಟವಾಳ ಅಥವಾ ಮುನಿಯ ಗಳು ಕಿವುಡು ಪಕ್ಷಿಗಳಲ್ಲ. ಇವು ಮನುಷ್ಯನ ಚಲನವಲನಗಳನ್ನು ಗಮನಿಸಿಕೊಂಡು ಧೈರ್ಯ ಶಾಲಿ ಗಳಂತಿರುತ್ತವೆ ಎನ್ನುತ್ತಾರೆ.
ಸಮೂಹದಲ್ಲಿ ದಾಳಿ
ರಾಟವಾಳಗಳ ಸಮೂಹದಲ್ಲಿ ಎರಡು ಮೂರು ವರ್ಣಗಳ ಹತ್ತು ಹದಿನೈದು ಹಕ್ಕಿಗಳಿರುತ್ತವೆ. (ಬಿಳಿ ಪೃಷ್ಠದ ರಾಟವಾಳ ಇದನ್ನು ಇಂಗ್ಲಿಷ್‌ನಲ್ಲಿ ವೈಟ್ ರಂಪಡ್ ಮುನಿಯ ಎಂದು, ಗುಬ್ಬಚ್ಚಿ ಗಾತ್ರದ ಇವುಗಳ ವೈಜ್ಞಾನಿಕ ಹೆಸರು ಲೊಂಚುರ ಸ್ಟ್ರಯಟ್ ಎಂದು). ಗೀಜುಗ ಬಳಗದಿಂದ ಪ್ರತ್ಯೇಕವಾಗಿ ಕುಳಿತಿರುತ್ತವೆ.
ಅಗೇಡಿಗಳಿಗೆ ಗೀಜುಗ ಮತ್ತು ರಾಟವಾಳ ಸಮೂಹ ಬಂದು ಕುಳಿತಾಗ ನಾನು ಮತ್ತು ಚಂದು ಅಜ್ಜಿ ಚಪ್ಪಾಳೆ ತಟ್ಟಿ ಕೂಗುತ್ತಿದ್ದೆವು. ಆಗ ಗೀಜುಗಗಳು ಕೂಡಲೇ ಹಾರಿ ಹೋಗುತ್ತಿದ್ದವು. ಆದರೆ ಈ ರಾಟವಾಳಗಳು ಮಾತ್ರ ಏನೂ ಆಗದಂತೆ ಸುಮ್ಮನೆ ಕುಳಿತು ಭತ್ತದ ಬೀಜಗಳನ್ನು ತಿನ್ನುತ್ತಿದ್ದವು ಎನುತ್ತಾರೆ ರೋಶನ್.
– ಲಕ್ಷ್ಮೀಮಚ್ಚಿನ