Advertisement

ಬಡವರ ನೋವಿಗೆ ಸ್ಪಂದಿಸಿ: ಡಾ|ಜಿ. ಶಂಕರ್‌

03:45 AM Jan 30, 2017 | Team Udayavani |

ಮಲ್ಪೆ: ಸಮಾಜದ ಕುಂದು ಕೊರತೆಗಳನ್ನು ಎತ್ತಿ ತೋರಿಸುವ, ಬಡವರ ನೋವಿಗೆ ಸ್ಪಂದಿಸುವ ಕೆಲಸಗಳು ಮಾಧ್ಯಮಗಳ ಮೂಲಕ ನಡೆಯಲಿ ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವತಕ ಡಾ| ಜಿ. ಶಂಕರ್‌ ಹೇಳಿದರು.
ಕರಾವಳಿಯ ಮಾಧ್ಯಮ ಲೋಕಕ್ಕೆ ನೂತನವಾಗಿ ಕಾಲಿಡುತ್ತಿರುವ ಮುಕ್ತ ವಾಹಿನಿಯನ್ನು ರವಿವಾರ ಮಲ್ಪೆ ಬೀಚ್‌ನಲ್ಲಿ ಲೋಕಾರ್ಪಣೆಗೊಳಿಸಿ ಅವರು ಮತನಾಡಿದರು.

Advertisement

ಉಡುಪಿ ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಪ್ರತಿ ಮಾಧ್ಯಮಗಳೂ ಇಂದು ಉತ್ತಮ ಸಾಧನೆ ಮಾಡುತ್ತಿವೆ. ಅವ್ಯವಹಾರವನ್ನು ತೋರಿಸಿ ಕೊಡುವ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುತ್ತಿವೆ ಎಂ¨ದು ಹೇಳಿದರು.

ಮಾಜಿ ಶಾಸಕ ಕೆ. ರಘುಪತಿ ಭಟ್‌, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಆದಾನಿ ಯುಪಿಸಿಎಲ್‌ನ ಉಪಾಧ್ಯಕ್ಷ ಕಿಶೋರ್‌ ಆಳ್ವ, ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ದಿವಾಕರ ಸನಿಲ್‌, ಜಯ ಆಚಾರ್ಯ, ಕಿರಣ್‌ ಕುಮಾರ್‌, ನವೀನ್‌ ಭಂಡಾರಿ, ಸಂದೀಪ್‌ ಶೆಟ್ಟಿ, ಗಣೇಶ್‌ ಕೊಳ, ಸಮಾಜ ಸೇವಕ ಲೀಲಾಧರ ಶೆಟ್ಟಿ, ಯಕ್ಷಗಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ, ಸುಧರ್ಮ ಶ್ರೀಯಾನ್‌, ನ್ಯಾಯವಾದಿ ಮಟ್ಟಾರ್‌ ರತ್ನಾಕರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಸಮ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶು ಶೆಟ್ಟಿ, ನಿತ್ಯಾನಂದ ಒಳಕಾಡು, ನೇಹಾ ರೈ, ಗುಡ್ಡ ಪಾಣರ, ಗಣೇಶ್‌, ಸಿಂಚನ ಗೌಡ, ರವಿ ಕಟಪಾಡಿ, ಹರೇಕಳ ಹಾಜಬ್ಬ, ಪದ್ಮನಾಭ್‌, ಚಂದ್ರಶೇಖರ್‌, ಸತೀಶ್‌ ಪಟ್ಲ ಅವರನ್ನು ಸಮ್ಮಾನಿಸಲಾಯಿತು.

ಮುಕ್ತ ಟಿವಿಯ ಆಡಳಿತ ವ್ಯವಸ್ಥಾಪಕ ಅಶ್ವತ್ಥ್ ಕಾಂಚನ್‌ ಸ್ವಾಗತಿಸಿದರು. ಆಡಳಿತ ಮಂಡಳಿಯ ವಿವೇಕ್‌ ಜಿ. ಸುವರ್ಣ ಪ್ರಸ್ತಾವನೆಗೈದರು. ಮುಕ್ತ ವಾಹಿನಿ ನಿರೂಪಕಿ ಅರ್ಪಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

ಮುಕ್ತ ತುಳು ಫಿಲ್ಮ್ ಅವಾರ್ಡ್‌
ಮುಕ್ತ ತುಳು ಫಿಲ್ಮ್ ಅವಾರ್ಡ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು 2016ರಲ್ಲಿ ಬಿಡುಗಡೆಯಾದ ತುಳುಚಿತ್ರಗಳ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಸಂಯೋಜನೆ, ಹಿನ್ನೆಲೆ ಸಂಗೀತ, ಸಾಹಸ ಸಂಯೋಜನೆ, ನೃತ್ಯ ಸಂಯೋಜನೆ, ಉತ್ತಮ ಗಾಯಕ-ಗಾಯಕಿ, ಪೋಷಕ ನಟ- ನಟಿ, ಖಳ ನಟ, ಹಾಸ್ಯ ನಟ- ನಟಿ, ಸಂಕಲನ, ಛಾಯಾಚಿತ್ರಗ್ರಹಣ, ಜನಮೆಚ್ಚಿದ ಹಾಸ್ಯ ನಟ, ಜನಮೆಚ್ಚಿದ ನಟ, ನಟಿ ತೀರ್ಪುಗಾರರ ಆಯ್ಕೆ, ಉತ್ತಮ ನಾಯಕ ನಟ- ನಾಯಕಿ ನಟಿ, ನಿರ್ದೇಶನ ಪ್ರಶಸ್ತಿಗಳನ್ನು ಪ್ರದಾನ ಮಾಡ‌ಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next