“13′ ಎಂಬ ಸಿನಿಮಾ ಬರುತ್ತಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಇತ್ತೀಚೆಗೆ ಆ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರತಂಡ ಜೊತೆಯಾಗಿ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದೆ. ಡಾ. ಉಮೇಶ್ ಎನ್ನುವವರು ಈ ಚಿತ್ರದ ನಿರ್ದೇಶಕರು. ಹಾರರ್ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಗರುಡ ಪುರಾಣಕ್ಕೆ ಸಂಬಂಧಪಟ್ಟ ಕಥೆಯನ್ನು ಹೇಳಿದ್ದಾರಂತೆ. ಅಷ್ಟಕ್ಕೂ “13′ ಎಂದರೇನು, ಅದು ಏನನ್ನು ಸಾಂಕೇತಿಸುತ್ತದೆ ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ.
“ಮನುಷ್ಯ ಸತ್ತ ನಂತರ ಆತನ ಆತ್ಮ 13 ದಿನಗಳ ಕಾಲ ಭೂಮಿ ಮೇಲೆ ಸುತ್ತುತ್ತಿರುತ್ತದೆ ಎಂಬ ನಂಬಿಕೆ ಇದೆ. ಆ ಸಂದರ್ಭದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಇಲ್ಲಿ ಗೋಚರ ಹಾಗೂ ಅಗೋಚರ ವಿಷಯಗಳ ಬಗ್ಗೆಯೂ ಹೇಳಿದ್ದೇನೆ’ ಎಂಬುದು ನಿರ್ದೇಶಕರ ಮಾತು.
ಚಿತ್ರದಲ್ಲಿ ನಿಜಾಮರ ಕಾಲದ ಕಥೆಯನ್ನು ಸೇರಿಸಲಾಗಿದ್ದು, ಬಹುತೇಕ ಚಿತ್ರೀಕರಣ ಬೀದರ್ ಕೋಟೆಯಲ್ಲಿ ಮಾಡಲಾಗಿದೆಯಂತೆ. ಚಿತ್ರದಲ್ಲಿ ಸುಮಾರು 20 ನಿಮಿಷಗಳ ಫ್ಲ್ಯಾಶ್‌ಬ್ಯಾಕ್ ಇದ್ದು, ಅಲ್ಲಿ ಬರುವ ಡೈಲಾಗ್ ಹಾಗೂ ಒಂದು ಹಾಡು ಹಿಂದಿಯಲ್ಲಿರುತ್ತದೆಯಂತೆ.
ಚಿತ್ರದಲ್ಲಿ ದೀಪು ಹಾಗೂ ಚೈತ್ರಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ರಂಗಭೂಮಿಯಿಂದ ಬಂದ ದೀಪುಗೆ ಸಿನಿಮಾ ಒಂದು ಹೊಸ ಅನುಭವ ನೀಡಿತಂತೆ. ಈ ಚಿತ್ರಕ್ಕಾಗಿ ಒಂದೂವರೆ ತಿಂಗಳ ತಯಾರಿ ನಡೆಸಿದರಂತೆ. ಅವರಿಲ್ಲಿ ಕಾರ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದು, ದೆವ್ವದ ಕಾಟ ಕೂಡಾ ಅವರಿಗೆ ಎದುರಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಆ್ಯಂಕರ್ ಆಗಿದ್ದ ಚೈತ್ರಾಗೆ “13′ ಸಿನಿಮಾದಲ್ಲಿ ಸಾಕಷ್ಟು ಹೊಸ ವಿಷಯಗಳನ್ನು ಕಲಿಯುವ ಅವಕಾಶ ಸಿಕ್ಕಿತಂತೆ. ಈ ಚಿತ್ರದಲ್ಲಿ ಅವರು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಬೀದರ್‌ನಲ್ಲಿ ಚಿತ್ರೀಕರಣ ನಡೆದ ಖುಷಿಯನ್ನು ಹಂಚಿಕೊಂಡರು.
ನಿರ್ಮಾಪಕರಲ್ಲೊಬ್ಬರಾದ ಕಾಳೇಗೌಡ ಅವರು ನಿಜಾಮನಾಗಿ ಕಾಣಿಸಿಕೊಂಡಿದ್ದಾರೆ. ಮತ್ತೂಬ್ಬ ನಿರ್ಮಾಪಕ ಅಶೋಕ್ ಕೂಡಾ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದಾರಂತೆ. ಈ ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಎ.ಎಂ. ನೀಲ್ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ, ತ್ರಿಭುವನ್ ನƒತ್ಯ ನಿರ್ದೇಶನ, ಸಾಯಿ ಸರ್ವೇಶ್, ಆನಂದ್, ಡಾ.ಎಸ್.ಎಸ್.ಉಮೇಶ್ ಸಾಹಿತ್ಯ, ಮಾಸ್ ಮಾದ ಸಾಹಸ, ಪ್ರಭು ಕಲಾನಿರ್ದೇಶನವಿದೆ. ಚಿತ್ರದಲ್ಲಿ ಅರ್ಚನಾ, ರಮೇಶ್ ಭಟ್, ಧರ್ಮ, ರಮೇಶ್ ಪಂಡಿತ್, ಸುಧಿಗೌಡ, ಮಹೇಶ್, ಶಶಿಕಲಾ, ಪವನ್, ಉದಯ್, ಶಶಿ ನಟಿಸಿದ್ದಾರೆ.
“13′ ಎಂಬ ಸಿನಿಮಾ ಬರುತ್ತಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಇತ್ತೀಚೆಗೆ ಆ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರತಂಡ ಜೊತೆಯಾಗಿ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದೆ. ಡಾ. ಉಮೇಶ್ ಎನ್ನುವವರು ಈ ಚಿತ್ರದ ನಿರ್ದೇಶಕರು. ಹಾರರ್ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಗರುಡ ಪುರಾಣಕ್ಕೆ ಸಂಬಂಧಪಟ್ಟ ಕಥೆಯನ್ನು ಹೇಳಿದ್ದಾರಂತೆ. ಅಷ್ಟಕ್ಕೂ “13′ ಎಂದರೇನು, ಅದು ಏನನ್ನು ಸಾಂಕೇತಿಸುತ್ತದೆ ಎಂಬ ಕುತೂಹಲ ಸಹಜವಾಗಿಯೇ ಇರುತ್ತದೆ. “ಮನುಷ್ಯ ಸತ್ತ ನಂತರ ಆತನ ಆತ್ಮ 13 ದಿನಗಳ ಕಾಲ ಭೂಮಿ ಮೇಲೆ ಸುತ್ತುತ್ತಿರುತ್ತದೆ ಎಂಬ ನಂಬಿಕೆ ಇದೆ. ಆ ಸಂದರ್ಭದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬ ವಿಚಾರವನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಇಲ್ಲಿ ಗೋಚರ ಹಾಗೂ ಅಗೋಚರ ವಿಷಯಗಳ ಬಗ್ಗೆಯೂ ಹೇಳಿದ್ದೇನೆ’ ಎಂಬುದು ನಿರ್ದೇಶಕರ ಮಾತು.