Advertisement

ಮುಂದಿನ ತಿಂಗಳು ‘ಕಾರ್ನಿಕದ ಕಲ್ಲುರ್ಟಿ’ಯ ಹಾಡು ರಿಲೀಸ್‌

12:58 PM Nov 22, 2018 | Team Udayavani |

ಫಿನೀಕ್ಸ್‌ ಫಿಲಂಸ್‌ ಲಾಂಛನದ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮಹೇಂದ್ರ ಕುಮಾರ್‌ ನಿರ್ಮಾಣದ ‘ಕಾರ್ನಿಕೆದ ಕಲ್ಲುರ್ಟಿ’ ಚಾರಿತ್ರಿಕ ತುಳು ಸಿನೆಮಾ ಚಿತ್ರೀಕರಣ ಪೂರ್ಣಗೊಳಿಸಿದೆ. 70 ದಿನಗಳ ಕಾಲ ಸಿನೆಮಾದ ಚಿತ್ರೀಕರಣ ನಡೆದಿತ್ತು. ಮುಂದಿನ ತಿಂಗಳು ಈ ಸಿನೆಮಾದ ಆಡಿಯೋ ರಿಲೀಸ್‌ ಆಗುವ ಸಾಧ್ಯತೆಯಿದೆ. ಸುಮಾರು 1 ಕೋ.ರೂ. ಬಜೆಟ್‌ನಲ್ಲಿ ಈ ಸಿನೆಮಾ ಸಿದ್ದಗೊಳ್ಳುತ್ತಿದೆ. ಹೆಚ್ಚು ಕಡಿಮೆ ಫೆಬ್ರುವರಿ ವೇಳೆಗೆ ಸಿನೆಮಾ ತೆರೆಕಾಣುವ ಸಾಧ್ಯತೆ ಇದೆ.

Advertisement

ನಿರ್ಮಾಪಕ ಮಹೇಂದ್ರ ಕುಮಾರ್‌ ಹೇಳುವ ಪ್ರಕಾರ ‘ಕಾರ್ನಿಕೆದ ಕಲ್ಲುರ್ಟಿ ಸಿನೆಮಾ ತುಳು ಚಿತ್ರರಂಗದ ಇತಿಹಾಸದಲ್ಲಿ ಯಾರೂ ಇದುವರೆಗೆ ಮಾಡಿರದ ಚಾರಿತ್ರಿಕ ಚಿತ್ರವಾಗಲಿದೆ. ಕಾರ್ಕಳ ಸೇರಿದಂತೆ ವಿವಿಧ ಭಾಗಗಳಲ್ಲಿ ಸಿನೆಮಾದ ಶೂಟಿಂಗ್‌ ನಡೆದಿದೆ. ಆರು ಹಾಡುಗಳು ಈಗಾಗಲೇ ಕೋಸ್ಟಲ್‌ವುಡ್‌ ನಲ್ಲಿ ಸದ್ದುಮಾಡಿದ್ದು, ಹೊಸ ಮನ್ವಂತರ ದಾಖಲಿಸುವ ನಿರೀಕ್ಷೆ ಇದೆ’ ಎಂಬುದು ಅವರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next