Advertisement

ನಕ್ಸಲ್‌ ನೆಲದಲ್ಲಿ ಬಾಹುಬಲಿ

08:55 AM Oct 01, 2018 | Karthik A |

ರಾಯ್ಪುರ: ನಕ್ಸಲರ ಆಡಂಬೊಲವಾಗಿರುವ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಭುಜ್ಮಾದ್‌ ಪ್ರಾಂತ್ಯದಲ್ಲಿನ ಜನರನ್ನು ನಕ್ಸಲರ ಪ್ರಭಾವದಿಂದ ತಪ್ಪಿಸಿ ಅವರನ್ನು ಬಾಹ್ಯ ಪ್ರಪಂಚದ ಜತೆಗೆ ನಂಟು ಕಲ್ಪಿಸುವ ಉದ್ದೇಶದಿಂದ ಈ ಭಾಗದಲ್ಲಿ ಮಿನಿ ಥಿಯೇಟರ್‌ಗಳನ್ನು ನಿರ್ಮಿಸುವ ಕಾರ್ಯಕ್ಕೆ ಛತ್ತೀಸ್‌ಗಢ ಪೊಲೀಸರು ಕೈಹಾಕಿದ್ದಾರೆ. ಇದರನ್ವಯ, ಈ ಪ್ರಾಂತ್ಯದ ಬಾಸಿಂಗ್‌ ಎಂಬ ಹಳ್ಳಿಯಲ್ಲಿ ಮೊದಲ ಥಿಯೇಟರ್‌ ನಿರ್ಮಾಣವಾಗಿದ್ದು, ಸದ್ಯದಲ್ಲೇ ನಕ್ಸಲ್‌ ಬಾಧಿತ ಎಲ್ಲಾ ಪ್ರಾಂತ್ಯಗಳಲ್ಲೂ ಇಂಥ ಮಿನಿ ಥಿಯೇಟರ್‌ಗಳನ್ನು ನಿರ್ಮಿಸಲಾಗುತ್ತದೆ. ಎಲ್ಲರಿಗೂ ಉಚಿತ ಪ್ರವೇಶವಿದ್ದು, ಸಿನಿಮಾ, ಕೆಲ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಹೇಳಿದೆ. 

Advertisement

ಬಾಸಿಂಗ್‌ ಹಳ್ಳಿಯಲ್ಲಿ ಗುರುವಾರ ಉದ್ಘಾಟನೆಗೊಂಡ ಮಿನಿ ಥಿಯೇಟರ್‌ಗೆ ಸ್ಥಳೀಯ ಗೊಂಡಿ ಭಾಷೆಯಲ್ಲಿ ‘ಬಾಸಿಂಗ್‌ ಸಿಲೇಮ’ (ಬಾಸಿಂಗ್‌ ಸಿನಿಮಾ) ಎಂದು ಹೆಸರಿಡಲಾಗಿದ್ದು, ಮೊದಲ ಚಿತ್ರವಾಗಿ ‘ಬಾಹುಬಲಿ’ ಪ್ರದರ್ಶನಗೊಂಡಿದೆ. ಈ ಬಗ್ಗೆ ವಿವರಣೆ ನೀಡಿರುವ ನಾರಾಯಣಪುರ ಜಿಲ್ಲೆಯ ಎಸ್‌ಪಿ ಜಿತೇಂದ್ರ ಶುಕ್ಲಾ, ‘ವಾರಕ್ಕೊಮ್ಮೆ ಸಂತೆಗಾಗಿ ಈ ಜನ ಒಂದೆಡೆ ಸೇರುವುದು ಬಿಟ್ಟರೆ ಮಿಕ್ಕ ಯಾವ ಸಂದರ್ಭಗಳಲ್ಲೂ ಸೇರುವುದಿಲ್ಲ. ಇವರನ್ನು ಆಗಾಗ ಒಂದೆಡೆ ಸೇರಿಸಿ, ಕ್ರಾಂತಿಯ ಹಾದಿ, ನಕ್ಸಲರನ್ನು ಹೊರತುಪಡಿಸಿದ ಮತ್ತೂಂದು ಜಗತ್ತು ಇದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next