Advertisement

ಜಾಗತಿಕ ಧರ್ಮಗಳ ಸಾಲಿನಲ್ಲಿ ಲಿಂಗಾಯತ ಧರ್ಮ ನಿಲ್ಲುವಂತಾಗಲಿ

11:51 AM Nov 26, 2017 | |

ಬಸವಕಲ್ಯಾಣ: ಜೈನ್‌, ಸಿಖ್‌ ಧರ್ಮಗಳ ಹಾಗೆ ಲಿಂಗಾಯತ ಧರ್ಮವು ಪ್ರತ್ಯೇಕ ಧರ್ಮವಾಗಿ ಸ್ಥಾಪನೆಯಾಗಿ ಜಾಗತಿಕ ಧರ್ಮಗಳ ಸಾಲಿನಲ್ಲಿ ನಿಲ್ಲುವಂತಾಗಬೇಕು ಎಂದು ಗದಗ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ|ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.

Advertisement

ನಗರದ ಹೊರ ವಲಯದಲಿರುವ ಅನುಭವ ಮಂಟಪ ಪರಿಸರದಲ್ಲಿ ಆಯೋಜಿಸಲಾಗಿರುವ 38ನೇ ಶರಣ ಕಮ್ಮಟ,
ಅನುಭವ ಮಂಟಪ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಲಿಂಗಾಯತ ಧರ್ಮಿಯರ ಸರ್ವೋತೊಮುಖ ಪ್ರಗತಿಗಾಗಿ ಪ್ರತ್ಯೇಕ ಧರ್ಮ ಮಾನ್ಯತೆ ಅತ್ಯವಶ್ಯವಾಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಲಿಂಗಾಯತ ಧರ್ಮಕ್ಕೆ ತಕ್ಷಣ ಮಾನ್ಯತೆ ನೀಡಬೇಕು ಎಂದು ಹೇಳಿದರು.

ಲಿಂಗಾಯತ ವೀರಶೈವ ಎರಡು ಒಂದೇ ಎನ್ನುವ ವಾದ ಸರಿಯಲ್ಲ. ಲಿಂಗಾಯತಕ್ಕೆ ತನ್ನದೆಯಾದ ಹಿನ್ನೆಲೆ ಇದೆ.
ಗುರು ಬಸವಣ್ಣರು ಧರ್ಮ ಗುರುವಾದರೆ, ವಚನ ಸಾಹಿತ್ಯ ಲಿಂಗಾಯತ ಧರ್ಮ ಗ್ರಂಥವಾಗಿದೆ. ಈ ಬಗ್ಗ ಜನರಲ್ಲಿ
ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಮಠಾ ಧೀಶರು ಹಾಗೂ ರಾಜಕಾರಣಿಗಳು ಜನರಿಗೆ ದಾರಿ ತಪ್ಪಿಸುವ ಕೆಲಸ ನಿಲ್ಲಿಸಬೇಕು ಎಂದು ಹೇಳಿದರು.

ಪ್ರತ್ಯೇಕ ಧರ್ಮಕ್ಕೆ ವಿರೋಧಿಸುವ ಪಂಚಾಚಾರ್ಯರು ಹಿಂದೆ ತಮಗೆ ಬೇಡ ಜಂಗಮ ಪಟ್ಟಿಗೆ ಸೇರಿಸಿ ಮೀಸಲಾತಿ
ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮನವಿ
ಸಲ್ಲಿಸಿದ್ದನ್ನು ಮರೆತಂತೆ ಕಾಣುತ್ತಿದೆ. ಪ್ರತ್ಯೇಕ ಧರ್ಮ ಮಾನ್ಯತೆಗೊಂಡು ಲಿಂಗಾಯತರಿಗೆ ಸೌಲಭ್ಯ ಸಿಕ್ಕಲ್ಲಿ ಇವರಿಗೇನು ತೊಂದರೆಯಾಗು¤ದೆ. ಎನ್ನುವುದು ಅರ್ಥವಾಗುತ್ತಿಲ್ಲ. ಭಕ್ತರಿಂದ ದೇಣಿಗೆ ಪಡೆದು ಮೆರೆಯುವ ಸ್ವಾಮಿಗಳ ಬಗ್ಗೆ ಜನರು ಜಾಗೃತರಾಗಬೇಕು ಎಂದು ಹೇಳಿದರು.

ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಈ ಭಾಗದಲ್ಲಿ ಪ್ರತ್ಯೇಕ ರಾಜ್ಯಧಾನಿ
ಕೇಂದ್ರ ಸ್ಥಾಪಿಸಬೇಕು. ಬೆಳಗಾವಿಯಲ್ಲಿನ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

Advertisement

ಮುಂಡರಗಿ ತೋಂಟದಾರ್ಯ ಶಾಖಾ ಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ, ಕೂಡಲ
ಸಂಗಮದ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ, ಅನುಭವ ಮಂಟಪದ ಅಧ್ಯಕ್ಷ
ಡಾ| ಬಸವಲಿಂಗ ಪಟ್ಟದ್ದೇವರು, ಶ್ರೀಶೈಲದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಬಸವ ಬೆಳವಿಯ ಶ್ರೀ ಶರಣಬಸವ ಸ್ವಾಮೀಜಿ, ಕವಲಗಾದ ಶ್ರೀ ಶಣ್ಮುಖ ಶಿವಯೋಗಿಗಳು, ಗದಗನ ಶ್ರೀ ಚಂದ್ರಶೇಖರ ದೇವರು ಸಾನ್ನಿಧ್ಯ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಶರಣಪ್ಪ ಮೀಠಾರೆ, ಡಾ| ಅಮರನಾಥ ಸೋಲಪುರೆ, ಗುರುನಾಥ ಗಡ್ಡೆ ಸೇರಿದಂತೆ ಪ್ರಮುಖರು ಇದ್ದರು. ಇದೇ ವೇಳೆ ಐಎಎಸ್‌ ಪಾಸಾದ ಭಾಲ್ಕಿಯ ಅಮರೇಶ್ವರ ಎನ್‌. ಪಾಟೀಲ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next