Advertisement

ಕೊಪ್ಪಳದಲ್ಲೂ ಮೂರೇ ತಿಂಗಳಲ್ಲಿ 35 ಶಿಶು ಮರಣ

08:20 AM Aug 24, 2017 | Team Udayavani |

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲೂ ಕಳೆದ ಮೂರು ತಿಂಗಳಲ್ಲಿ 35 ಶಿಶುಗಳು ನಾನಾ ಕಾರಣದಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಜೂನ್‌-ಆಗಸ್ಟ್‌ ಅವಧಿಯಲ್ಲಿ ಜಿಲ್ಲಾಸ್ಪತ್ರೆಗೆ 1136 ಗರ್ಭಿಣಿಯರು ದಾಖಲಾಗಿದ್ದರು. ಈ ಪೈಕಿ ಜೂನ್‌ನಲ್ಲಿ 13, ಜುಲೈನಲ್ಲಿ 12 ಹಾಗೂ ಆಗಸ್ಟ್‌ನಲ್ಲಿ ಈ ತನಕ 10 ಶಿಶುಗಳು ಸಾವನ್ನಪ್ಪಿವೆ. ಈ ಶಿಶುಗಳಲ್ಲಿ 17
ಗಂಡು ಹಾಗೂ 18 ಹೆಣ್ಣು ಎನ್ನಲಾಗಿದೆ.

Advertisement

ಜನಿಸುವಾಗಲೇ ತೂಕ ಕಡಿಮೆ ಹಾಗೂ ಉಸಿರಾಟದ , koppalaತೊಂದರೆಯಿಂದಲೇ ಬಹುಪಾಲು ಮಕ್ಕಳು ಸಾವನ್ನಪ್ಪುತ್ತಿವೆ. ಈ
ಹಿನ್ನೆಲೆಯಲ್ಲಿ ಪಾಲಕರಲ್ಲೂ ಆರೋಗ್ಯ ರಕ್ಷಣೆ ವಿಚಾರದಲ್ಲಿ ಹೆಚ್ಚಿನ ಕಾಳಜಿ ಬೇಕಿದೆ ಎನ್ನುತ್ತಾರೆ ತಜ್ಞ ವೈದ್ಯರು.
ಗರ್ಭಿಣಿಯರು ಒಂಬತ್ತು ತಿಂಗಳ ಅವ ಧಿಯಲ್ಲಿ ಸರಿಯಾಗಿ ಊಟ ಮಾಡದೇ ಇರುವುದು; ಹೊಲಗಳಲ್ಲಿ ನಿರಂತರ ಕೆಲಸ ಹಾಗೂ ಬಾಲ್ಯ ವಿವಾಹವೂ ಶಿಶುಗಳಲ್ಲಿ ಅಪೌಷ್ಟಿಕತೆ ಕೊರತೆಗೆ ಕಾರಣವಾಗಿ ಸಾವನ್ನಪ್ಪುತ್ತಿವೆ. ಇನ್ನು ಕನಿಷ್ಠ 3-5 ವರ್ಷಗಳ ಅಂತರ ಕಾಯ್ದುಕೊಳ್ಳದೆ ತಿಳಿವಳಿಕೆ ಕೊರತೆ ಕಾರಣ ಮಗು ಜನಿಸಿದ ವರ್ಷದಲ್ಲೇ ಮತ್ತೆ ಗರ್ಭ ಧರಿಸುವುದು ಕೂಡ ಶಿಶುಗಳ ಸಾವಿಗೆ ಕಾರಣ ಎಂದು ಹೇಳುತ್ತಾರೆ.

ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ, ಸಕ್ಸೆನಾ ಭೇಟಿ
ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿ
ಆಧರಿಸಿ ನಿಜ ಸ್ಥಿತಿ ಅರಿಯಲು ಬುಧವಾರ ಎಸ್‌ಎನ್‌ಆರ್‌ ಆಸ್ಪತ್ರೆಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ
ಆಳ್ವ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೆನಾ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸಂಜೆಯ
ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಕುಮಾರ್‌, ಮಹಿಳಾ ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ತಡೆ ತಜ್ಞರ
ಸಮಿತಿಯ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಮತ್ತವರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇದೇ ವೇಳೆ, ಆಸ್ಪತ್ರೆಯ ಜಿಲ್ಲಾ ಶಸOಉ ಚಿಕಿತ್ಸಕ ಡಾ.ಎಚ್‌. ಆರ್‌.ಶಿವಕುಮಾರ್‌ ಮಾತನಾಡಿ, 2017ರ ಜನವರಿಯಿಂದ
ಆಗಸ್ಟ್‌ 22 ರವರೆಗೆ ಎಂಟು ತಿಂಗಳ ಅವಧಿಯಲ್ಲಿ 90 ಮಕ್ಕಳು ವಿವಿಧ ಕಾರಣಗಳಿಗಾಗಿ ಸಾವನ್ನಪ್ಪಿದ್ದಾರೆ. ಆದರೆ, ಇದಾವುವೂ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಕೊರತೆ, ಚಿಕಿತ್ಸೆಯಲ್ಲಿನ ಲೋಪ ಅಥವಾ ಔಷಧೋಪಚಾರ ಕೊರತೆಯಿಂದ ಸಂಭವಿಸಿದ ಸಾವುಗಳಲ್ಲ ಎಂದು ಸ್ಪಷ್ಟಪಡಿಸಿದರು. ಈ ನಡುವೆ ಬಿಜೆಪಿ ಸತ್ಯಶೋಧನಾ ತಂಡ ಗುರುವಾರ ಕೋಲಾರದ ಎಸ್ಸೆನ್ನಾರ್‌ ಆಸ್ಪತ್ರೆಗೆ ಭೇಟಿ ನೀಡಲಿದೆ.

ಮೈಸೂರಲ್ಲಿ 3 ತಿಂಗಳಲ್ಲಿ 93 ಶಿಶುಗಳ ಸಾವು:
2017ರ ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳ ಅವಧಿಯಲ್ಲಿ ಮೈಸೂರು ಜಿಲ್ಲೆಯ ಆಸ್ಪತ್ರೆಗಳಲ್ಲಿ 9005 ಹೆರಿಗೆ ಆಗಿದ್ದು, ಈ ಪೈಕಿ ಆರು ಮಂದಿ ತಾಯಂದಿರು ಸಾವನ್ನಪ್ಪಿದ್ದಾರೆ. 93 ಶಿಶುಗಳು ಮೃತಪಟ್ಟಿವೆ. ಈ ಪೈಕಿ ಕೆಲ ಪ್ರಕರಣಗಳಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬರುತ್ತಿದೆ ಎಂದು ಜಿಲ್ಲಾಧಿಕಾರಿ ರಂದೀಪ್‌ ಡಿ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next