Advertisement

ಜೂನ್‌ನಲ್ಲಿ ನೋಕಿಯಾ ಆ್ಯಂಡ್ರಾಯ್ಡ ಫೋನ್‌

12:34 PM Apr 16, 2017 | Team Udayavani |

ಹೊಸದಿಲ್ಲಿ: ಇತ್ತೀಚೆಗಷ್ಟೇ ನೋಕಿಯಾ 3310 ಫೀಚರ್‌ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದ ಎಚ್‌ಎಂಡಿ ಗ್ಲೋಬಲ್‌ ಕಂಪೆನಿ ಪ್ರಸ್ತುತ ಆ್ಯಂಡ್ರಾಯ್ಡ ಆಧಾರಿತ 3 ಸ್ಮಾರ್ಟ್‌ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಮೂರೂ ಫೋನ್‌ಗಳು ಮಾಡಿಫೈ ಆಗಿರದ 7.1.1 ಆ್ಯಂಡ್ರಾಯ್ಡ ನಾಗಿಟ್‌ ಆಧಾರದಲ್ಲಿ ಕಾರ್ಯನಿರ್ವಹಿಸಲಿದ್ದು, ಬೆಲೆ ಸುಮಾರು 20,000 ರೂ. ಇರಲಿದೆ. ಡ್ಯುಯಲ್‌ ಸಿಮ್‌, ಎಸ್‌ಡಿ ಕಾರ್ಡ್‌ ಸ್ಲಾಟ್‌, ಅತಿ ಹೆಚ್ಚು ಸ್ಥಳಾವಕಾಶ ಹೊಂದಿರುವ ಈ ಫೋನ್‌ಗಳು, ಮಾರುಕಟ್ಟೆಯಲ್ಲಿ ಈಗಿರುವ ಎಲ್ಲ ಫೋನ್‌ಗಳಿಗಿಂತಲೂ ಭಿನ್ನವಾಗಿರಲಿವೆ ಎಂದು ಸಂಸ್ಥೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next