Advertisement

ಜಡ್ಜ್ ಲೋಯಾ ಸಾವಿನ ಬಗ್ಗೆ ಮಾತ್ರ ವಿಚಾರಣೆ 

11:05 AM Feb 03, 2018 | Team Udayavani |

ಹೊಸದಿಲ್ಲಿ: ಸಿಬಿಐ ವಿಶೇಷ ಕೋರ್ಟ್‌ನ ಜಡ್ಜ್ ಆಗಿದ್ದ ಬಿ.ಎಚ್‌.ಲೋಯಾ ಪ್ರಕರಣದಲ್ಲಿ ಅವರ ಸಾವಿಗೆ ಕಾರಣವಾಗಿರುವ ಅಂಶ ಕಳವಳಕಾರಿಯಾಗಿದೆ ಎಂದಿರುವ ಸುಪ್ರೀಂ ಕೋರ್ಟ್‌, ವಿಚಾರಣೆ ವೇಳೆ ಈ ಅಂಶಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

Advertisement

ಸೊಹ್ರಾಬುದ್ದಿನ್‌ ಶೇಖ್‌ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾರನ್ನು ದೋಷಮುಕ್ತಗೊಳಿಸಿದ ಪ್ರಕರಣ ಸೇರಿದಂತೆ ಇನ್ನಿತರ ಯಾವುದೇ ಅಂಶಗಳನ್ನು ಪರಿಶೀಲಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಶುಕ್ರವಾರ ಸ್ಪಷ್ಟವಾಗಿ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಫೆ.5ರಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next