Advertisement
ಅಕ್ಷಯ ತೃತೀಯಾ ದಿನದಂದು ಚಿನ್ನಾಭರಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಇದಕ್ಕನುಗುಣವಾಗಿ ತಲೆ ತಲಾಂತರದಿಂದಲೂ ಅಕ್ಷಯ ತೃತೀಯಾದಂದು ಚಿನ್ನ, ವಜ್ರಾಭರಣ ಖರೀದಿ ಮಾಡುವುದು ನಡೆಯುತ್ತಿದೆ. ಅದರಂತೆ ಬುಧವಾರ ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಜನಜಂಗುಳಿ ಹೆಚ್ಚಿತ್ತು. ಚಿನ್ನ, ವಜ್ರ, ನವರತ್ನ ಸೇರಿದಂತೆ ವಿವಿಧ ಆಭರಣಗಳನ್ನು ಖರೀದಿಸಿ ಗ್ರಾಹಕರು ಈ ದಿನವನ್ನು ಸಂಭ್ರಮಿಸಿದರು.
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯವಹಾರಕ್ಕೆ ತೊಡಕಾಗ ಬಹುದು ಎಂಬ ಆತಂಕ ಕೆಲವು ಚಿನ್ನಾಭರಣ ಮಳಿಗೆಗಳ ಸಿಬಂದಿಗಿತ್ತು. ಆದರೆ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ವ್ಯವಹಾರ ನಡೆದಿದ್ದು, ಚಿನ್ನಾಭರಣ ಖರೀದಿಸುವಿಕೆಗೆ ನೀತಿ ಸಂಹಿತೆಯಿಂದ ಯಾವುದೇ ತೊಡಕಾಗಿಲ್ಲ. ಇದರಿಂದ ಗ್ರಾಹಕರು ನಿರಾಯಾಸವಾಗಿ ಚಿನ್ನಾಭರಣಗಳನ್ನು ಖರೀದಿಸಿದರೆ, ಚಿನ್ನಾಭರಣ ಮಳಿಗೆಗಳ ಮಾಲಕರಿಗೂ ವ್ಯವಹಾರಕ್ಕೆ ಸಮಸ್ಯೆ ಉಂಟಾಗಲಿಲ್ಲ.
Related Articles
Advertisement
ಕಳೆದ ವರ್ಷಕ್ಕಿಂತ ಈ ವರ್ಷ ತುಸು ಹೆಚ್ಚೇ ವ್ಯವಹಾರ ನಡೆದಿದೆ. ಗ್ರಾಹಕರಿಂದ ಅಕ್ಷಯ ತೃತೀಯಾ ದಿನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಎಸ್.ಎಲ್. ಶೇಟ್ ಜುವೆಲರ್, ಜೋಸ್ ಆಲುಕ್ಕಾಸ್, ಜೋಯ್ ಅಲುಕ್ಕಾಸ್ ಮುಂತಾದ ಮಳಿಗೆಗಳ ಸಿಬಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.