Advertisement

ಕ್ರಿಪ್ಟೋ: ಅಮೆರಿಕವನ್ನೂ ಹಿಂದಿಕ್ಕಿರುವ ಭಾರತ

07:02 PM Aug 11, 2022 | Team Udayavani |

ವಿಶ್ವಸಂಸ್ಥೆ: ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. 7.3ರಷ್ಟು ಜನರು ಕ್ರಿಪ್ಟೋ ಕರೆನ್ಸಿಯನ್ನು ಹೊಂದಿದ್ದು, ಈ ಪ್ರಮಾಣ ಅಮೆರಿಕವನ್ನೂ ಹಿಂದಿಕ್ಕಿದೆ ಎಂದು ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಮಿತಿ (ಯುಎನ್‌ಸಿಟಿಎಡಿ) ತಿಳಿಸಿದೆ.

Advertisement

2021ರ ಅಂಕಿ-ಅಂಶಗಳ ಆಧಾರದಲ್ಲಿ ಯುಎನ್‌ಸಿಟಿಎಡಿ ಸಿದ್ಧಪಡಿಸಿರುವ ವರದಿಯಲ್ಲಿ ಈ ವಿಚಾರ ತಿಳಿಸಲಾಗಿದೆ.

ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳೆನಿಸಿದ 20 ದೇಶಗಳನ್ನು ಆಯ್ದುಕೊಂಡರೆ 15 ದೇಶಗಳಲ್ಲಿ ಕ್ರಿಪ್ಟೋ ಕರೆನ್ಸಿಯ ವ್ಯವಹಾರಗಳು ನಡೆದಿವೆ. ಇವುಗಳಲ್ಲಿ ಭಾರತವೂ ಒಂದು. ಅತಿ ಹೆಚ್ಚು ಜನರು ಕ್ರಿಪ್ಟೋ ಕರೆನ್ಸಿಯನ್ನು ಹೊಂದಿರುವ ದೇಶವಾಗಿ ಉಕ್ರೇನ್‌ ಹೊರಹೊಮ್ಮಿದೆ. ಅಲ್ಲಿ ಶೇ. 12.7ರಷ್ಟು ಜನರು ಕ್ರಿಪ್ಟೋ ಕರೆನ್ಸಿಯನ್ನು ಅಳವಡಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ರಷ್ಯಾ (ಶೇ. 11.9) ದ್ವಿತೀಯ ಸ್ಥಾನದಲ್ಲಿದ್ದರೆ, ವೆನೆಜುವೆಲಾ (ಶೇ. 10.3) ತೃತೀಯ ಸ್ಥಾನದಲ್ಲಿ, ಸಿಂಗಾಪುರ (ಶೇ. 9.4) ತೃತೀಯ ಸ್ಥಾನದಲ್ಲಿವೆ. ಆನಂತರ, ಸ್ಥಾನಗಳಲ್ಲಿ ಕೀನ್ಯಾ (ಶೇ. 8.5) ಹಾಗೂ ಸಿಂಗಾಪುರ (ಶೇ. 9.4) ಇವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next