Advertisement

ಹರಿಯಾಣದಲ್ಲಿ ಮತ್ತೂಬ್ಬ ನಿರ್ಭಯಾಳ ರೇಪ್‌, ಕೊಲೆ

11:12 AM May 14, 2017 | Harsha Rao |

ಸೋನಿಪತ್‌: ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣ ಇನ್ನೂ ಹಸಿರಾಗಿರುವಾಗಲೇ, ಬೀಭತ್ಸ ಗ್ಯಾಂಗ್‌ರೇಪ್‌ ಪ್ರಕರಣವೊಂದು ರಾಜಧಾನಿ ದಿಲ್ಲಿ ಸಮೀಪ ವರದಿಯಾಗಿದೆ. 

Advertisement

ಕಳೆದ ಮಂಗಳವಾರ ಹರಿಯಾಣದ ಸೋನಿಪತ್‌ನ ಮನೆಯಿಂದ 23 ವರ್ಷದ ಮಹಿಳೆಯೊಬ್ಬರನ್ನು ಅಪಹರಿಸಲಾಗಿದ್ದು, ಬಳಿಕ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ದುಷ್ಕರ್ಮಿಗಳು ಬಳಿಕ ಆಕೆಯ ಮುಖವನ್ನು ಇಟ್ಟಿಗೆಯಿಂದ ಜಜ್ಜಿ ಕೊಲೆಗೈದಿದ್ದಾರೆ. ಘಟನೆ ಬಳಿಕ ಬೀದಿನಾಯಿಗಳು ಆಕೆ ಮುಖವನ್ನು ಮತ್ತು ದೇಹದ ಕೆಳಭಾಗವನ್ನು ಕಚ್ಚಿ ಎಳೆದೊಯ್ದಿವೆ.

ಮೃತದೇಹವನ್ನು ಕಂಡ ದಾರಿಹೋಕರು ಪೊಲೀಸರಿಗೆ ಸುದ್ದಿಮುಟ್ಟಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಹೆತ್ತವರು ಆಗ್ರಹಿಸಿದ್ದಾರೆ. 

ಈ ಭೀಭತ್ಸ ಅತ್ಯಾಚಾರ ಕುರಿತಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿಕ್ರಿಯಿಸಿದ್ದು, ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆ ದೇಶದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next