Advertisement

ಇನ್… ಫೋಕಸ್ …ಡ್ಯಾನ್ಸ್‌ ಭೂಷಣ್‌ ಡ್ಯಾನ್ಸ್‌

11:30 AM Jul 28, 2017 | Team Udayavani |

ರಿಯಾಲಿಟಿ ಶೋಗಳಲ್ಲಿ ಮಿಂಚಿದವರು ಆ ನಂತರ ನೇರವಾಗಿ ಬರೋದು ಸಿನಿಮಾಕ್ಕೆ. ಅದರಲ್ಲೂ ಶೋಗಳಲ್ಲಿ ಒಳ್ಳೆಯ ಪರ್‌ಫಾರ್ಮೆನ್ಸ್‌ ಕೊಟ್ಟರಂತೂ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ಸಿಗುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಭೂಷಣ್‌. ಯಾವ ಭೂಷಣ್‌ ಎಂದರೆ ಡ್ಯಾನ್ಸರ್‌ ಎನ್ನಬೇಕು. ಕನ್ನಡ ಸೇರಿದಂತೆ ಹಲವು ಭಾಷೆಯ ಡ್ಯಾನ್ಸ್‌ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದ ಭೂಷಣ್‌ ಈಗ ಸಿನಿಮಾಕ್ಕೆ ಎಂಟ್ರಿಕೊಟ್ಟಿದ್ದಾರೆ. ಅದು “ತಿರ್ಬೋಕಿಗಳು’ ಚಿತ್ರದ ಮೂಲಕ. 

Advertisement

ಹೌದು, ನೀವು ರಿಯಾಲಿಟಿ ಶೋಗಳನ್ನು ನೋಡುವವರಾಗಿದ್ದರೆ ನಿಮಗೆ ಭೂಷಣ್‌ ಪರಿಚಯವಿರುತ್ತದೆ. ಇಂತಿಪ್ಪ ಭೂಷಣ್‌ ಈಗ “ತಿಬೋìಕಿಗಳು’ ಎಂಬ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. 

ಚಿತ್ರದಲ್ಲಿ ನಾಲ್ವರು ಹುಡುಗರು ಪ್ರಮುಖ ಪಾತ್ರ ಮಾಡುತ್ತಿದ್ದು, ಅದರಲ್ಲಿ ಭೂಷಣ್‌ ಕೂಡಾ ಒಬ್ಬರು. ಭೂಷಣ್‌ ಡ್ಯಾನ್ಸರ್‌ ಆಗಿರುವುದರಿಂದ ಚಿತ್ರದಲ್ಲಿ 
ಡ್ಯಾನ್ಸ್‌ಗೂ ಹೆಚ್ಚಿನ ಸ್ಕೋಪ್‌ ಇದೆಯಂತೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಭೂಷಣ್‌ಗೆ ಇತ್ತಂತೆ. ಅದು ಈಗ “ತಿರ್ಬೋಕಿಗಳು’ ಸಿನಿಮಾ ಮೂಲಕ ಈಡೇರಿದೆ. ಅದು ಪ್ರಮುಖ ಪಾತ್ರ ಮಾಡುವ ಮೂಲಕ. 

“ಕಥೆ ತುಂಬಾ ಚೆನ್ನಾಗಿದೆ. ಎಲ್ಲರಿಗೂ ಇಲ್ಲಿ ನಟನೆಯ ಅವಕಾಶವಿದೆ. ಹೊಸಬರ ಚಿತ್ರವಾದ್ದರಿಂದ ಕಡಿಮೆ ಬಜೆಟ್‌ನಲ್ಲಿ ಮಾಡುತ್ತಿದ್ದೇವೆ. ಇಲ್ಲಿ ಡ್ಯಾನ್ಸ್‌ಗೂ ಅವಕಾಶವಿದೆ’ ಎನ್ನುತ್ತಾರೆ ಭೂಷಣ್‌.

ರ‌ವಿ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next