Advertisement
ಗೆಜ್ಜೆಗಿರಿ ಶ್ರೀಕ್ಷೇತ್ರದ ಬ್ರಹ್ಮಕಲ ಶೋತ್ಸವದ ಸಂದರ್ಭ ಪಟ್ಟೆಯಿಂದ ಗೆಜ್ಜೆಗಿರಿ ತನಕ ರಸ್ತೆ ವಿಸ್ತರಣೆ ಮತ್ತು ಕಾಂಕ್ರೀಟ್ ಕಾಮಗಾರಿ ಮಾಡಲಾಗಿತ್ತು. ಪಟ್ಟೆಯಲ್ಲಿ ಸೀರೆ ಹೊಳೆಯ ಸೇತುವೆಯ ಒಂದು ಬದಿಗೆ ಕಾಂಪೌಂಡ್ ಹಾಗೂ ಇನ್ನೊಂದು ಬದಿಗೆ ತಡೆಗೋಡೆ ನಿರ್ಮಿಸಲಾಗಿದೆ. ತಡೆಗೋಡೆ ಇದೀಗ ಕುಸಿತದ ಭೀತಿಯಲ್ಲಿದೆ. ಪಟ್ಟೆ ಸಮೀಪ ಹೊಳೆ ಪಕ್ಕದ ತಿರುವು ಭಾಗದಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಅಸಮರ್ಪಕ ಕಾಮಗಾರಿಯೇ ಕಾಂಕ್ರೀಟ್ ರಸ್ತೆ ಬಿರುಕು ಬಿಡಲು ಕಾರಣ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.
ಪಟ್ಟೆಯಿಂದ ಗೆಜ್ಜೆಗಿರಿ ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದ್ದರೂ ಮಳೆ ನೀರು ಹರಿದು ಹೋಗಲು ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಆಗಿಲ್ಲ.
Related Articles
ಪಟ್ಟೆ ಎಂಬಲ್ಲಿ ರಸ್ತೆ ಬಿರುಕು ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಹೊಳೆಗೆ ತಡೆಗೋಡೆ ನಿರ್ಮಾಣಕ್ಕೆ ಹೆಚ್ಚು ಮೊತ್ತ ಬೇಕಾದುದರಿಂದ ಈ ಬಗ್ಗೆ ತಾ.ಪಂ.ಗೆ ಬರೆಯಲಾಗಿದೆ. ರಸ್ತೆ ಕುಸಿತ ಉಂಟಾದ ಭಾಗದಲ್ಲಿ ಹೊಳೆಗೆ ಅಡಿ ಭಾಗದಿಂದಲೇ ಕಾಮಗಾರಿ ನಡೆಯಬೇಕಾದುದರಿಂದ ಡಿಸೆಂಬರ್ ಅಥವಾ ಜನವರಿ ತಿಂಗಳ ಅನಂತರ ಕಾಮಗಾರಿ ನಡೆಸಬಹುದು.
- ವಾಸಿಮ್ ಗಂಧದ, ಪಿಡಿಒ, ಬಡಗನ್ನೂರು ಗ್ರಾ.ಪಂ.
Advertisement