Advertisement

ದೇವಿಕೇರಾದಲ್ಲಿ ನ್ಯಾಯ ನಿಮ್ಮದು, ನೆರವು ನಮ್ಮದು

05:55 PM Oct 18, 2021 | Team Udayavani |

ಸುರಪುರ: ಪ್ರತಿಯೊಬ್ಬರಿಗೂ ಕಾನೂನು ಜ್ಞಾನ ಅಗತ್ಯವಾಗಿದೆ. ಕಾನೂನು ಅರಿವಿನಿಂದ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಪೆನಲ್‌ನ ವಕೀಲ ಆದಪ್ಪ ಹೊಸ್ಮನಿ ತಿಳಿಸಿದರು.

Advertisement

ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಜರುಗಿದ ಡಿಸಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಕಾನೂನು ನೆರವು ಮತ್ತು ಸಲಹೆ ಕರಪತ್ರ ವಿತರಿಸಿ ಅವರು ಮಾತನಾಡಿ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶೆ ತಯ್ಯಬಾ ಸುಲ್ತಾನ್‌ ಮತ್ತು ಸಿವಿಲ್‌ ನ್ಯಾಯಾಧೀಶ ಚಿದಾನಂದ ಬಡಿಗೇರ ಮಾರ್ಗದರ್ಶನದಲ್ಲಿ ನ್ಯಾಯ ನಿಮ್ಮದು ನೆರವು ನಮ್ಮದು ಕಾರ್ಯಕ್ರಮ ನಡೆಯಲಿದೆ ಎಂದರು.

ದಿನನಿತ್ಯದ ಜೀವನದಲ್ಲಿ ಮತ್ತು ಸಣ್ಣಪುಟ್ಟ ವ್ಯವಹಾರಗಳಲ್ಲಿ ಕಾನೂನಿನ ಅರಿವು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ. ಕಾನೂನಿಗೆ ಬಡವ, ಶ್ರೀಮಂತ, ಮೇಲು-ಕೀಳು ಎಂಬ ಭೇದಭಾವ ಇಲ್ಲ. ಕಾನೂನಿನ ಕನಿಷ್ಟ ಜ್ಞಾನ ಹೊಂದಿದಾಗ ಅಪರಾಧಿಕ ಕೃತ್ಯ ನಡೆಯುವುದಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನಿನ ತಿಳಿವಳಿಕೆ ಹೊಂದಬೇಕಿದೆ. ಇದರಿಂದ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಪ.ಜಾ-ಪ.ಪಂಗಡಕ್ಕೆ ಸೇರಿದವರು ಮಾನಸಿಕ ಅಥವಾ ನ್ಯೂನತೆ ಇರುವವರು, ಮಹಿಳೆ ಮತ್ತು ಮಕ್ಕಳು, ಕಾರ್ಖಾನೆ ಕಾರ್ಮಿಕರು, ಗುಂಪು ಘರ್ಷಣೆ, ಗಲಭೆ, ಪ್ರವಾಹ, ಭೂಕಂಪ, ಕೈಗಾರಿಕಾ ವಿನಾಶಕ್ಕೆ ತುತ್ತಾದವರು, ಮನೋರೋಗಿಗಳು ಮತೀಯ ದೌರ್ಜನಕ್ಕೆ ಬಲಿಯಾದವರು, 3 ಲಕ್ಷ ಒಳಗೆ ಆದಾಯವಿರುವ ಎಲ್ಲಾ ವರ್ಗದವರು ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಜನನ-ಮರಣ, ಬಾಲ್ಯ ವಿವಾಹ, ಗ್ರಾಹಕರ ಹಕ್ಕು, ಆಸ್ತಿ ಹಕ್ಕು, ಸೇರಿದಂತೆ ಇತರೆ ಕಾನೂನು ತಿಳಿವಳಿಕೆ ನೀಡಲಾಯಿತು. ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಅಪರ ಸರಕಾರಿ ವಕೀಲರಾದ ನಂದಣ್ಣಗೌಡ ಪಾಟೀಲ್‌, ಪಿಡಿಒ ಸಂಗೀತಾ ಸಜ್ಜನ್‌, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸತ್ಯನಾರಾಯಣ ದರಬಾರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರೆಡ್ಡಿ ಇತರರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next