Advertisement
ಫಿಟ್ ಇಂಡಿಯಾ ಅಭಿಯಾನಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ‘ಫಿಟ್ ಇಂಡಿಯಾ ಡಯಲಾಗ್’ ಹೆಸರಿನಲ್ಲಿ ನಡೆದ ಈ ವೀಡಿಯೋ ಸಂವಾದದಲ್ಲಿ ದೇಶಬಾಂಧವರಿಗೆ ‘ಫಿಟ್ನೆಸ್ ಕಿ ಡೋಸ್, ಆಧಾ ಘಂಟಾ ರೋಜ್’ ಎಂಬ ಘೋಷವಾಕ್ಯವನ್ನೂ ನೀಡಿದರು.
ಫಿಟ್ ಆಗಿರಬೇಕು ಅಂದರೆ ಕ್ರಿಕೆಟ್, ಟೆನಿಸ್, ಬ್ಯಾಡ್ಮಿಂಟನ್, ಕಬಡ್ಡಿಯಂಥ ಯಾವುದಾದರೂ ಒಂದರಲ್ಲಿ ಭಾಗಿಯಾಗಿ. ಪ್ರತಿದಿನ ಅರ್ಧ ಗಂಟೆ ಆಡಿದರೂ ಸಾಕು ಫಿಟ್ನೆಸ್ ಮೈಗೂಡುತ್ತದೆ. ವಿರಾಟ್ ಕೊಹ್ಲಿ, ಕ್ರಿಕೆಟಿಗ
ನಿತ್ಯ ಕ್ರಿಕೆಟ್ ಅಭ್ಯಾಸದ ಜತೆಗೆ ನಿಯಮಿತ ವ್ಯಾಯಾಮ ಹಾಗೂ ಸಮತೋಲಿತ ಆಹಾರವೇ ನನ್ನ ಫಿಟ್ನೆಸ್‌ನ ಗುಟ್ಟು. ಫಿಟ್ನೆಸ್ ಸಾಧಿಸಬೇಕಾದರೆ ನಾಲಗೆ ಚಪಲದಿಂದ ಕೊಂಚ ದೂರ ಉಳಿಯಲೇಬೇಕು. ನನಗೆ ಕ್ರಿಕೆಟ್ ಅಭ್ಯಾಸ ಒಮ್ಮೊಮ್ಮೆ ತಪ್ಪಿದರೆ ಬೇಸರವಾಗುವುದಿಲ್ಲ. ಆದರೆ ವ್ಯಾಯಾಮ ತಪ್ಪಿಹೋದರೆ ತುಂಬಾ ಬೇಸರವಾಗುತ್ತದೆ. ಹಾಗಾಗಿ ಫಿಟ್ನೆಸ್ ಸಾಧನೆಗೆ ವ್ಯಾಯಾಮವನ್ನು ತಪ್ಪದೇ ಕೈಗೊಳ್ಳುತ್ತೇನೆ.
Related Articles
ನನ್ನಲ್ಲಿ ತುಂಬಾ ಜನ ಕೇಳುತ್ತಾರೆ. ಪ್ರತಿದಿನ 500 ಕಿ.ಮೀ.ವರೆಗೆ ನೀವು ಓಡುತ್ತೀರಿ. 55 ವರ್ಷ ವಯಸ್ಸಿನವರಿಂದ ಇದು ಸಾಧ್ಯವೇ ಎಂದು ಕೇಳುತ್ತಾರೆ. ಆಗ ನಾನು ಅವರಿಗೆ ನನ್ನ 81 ವರ್ಷದ ಅಮ್ಮ ದಿನನಿತ್ಯ ವ್ಯಾಯಾಮ ಮಾಡುವುದರ ವೀಡಿಯೋ ತೋರಿಸುತ್ತೇನೆ. ಆರೋಗ್ಯವಂತ ವ್ಯಕ್ತಿ ದಿನಕ್ಕೆ 100 ಕಿ.ಮೀ. ನಡೆಯಬಹುದು. ಅಷ್ಟೇ ಅಲ್ಲ, ಫಿಟ್ನೆಸ್‌ಗೆ ಮನೆಯಲ್ಲಿ ಜಿಮ್, ಯಾಂತ್ರಿಕ ಪರಿಕರಗಳು ಬೇಕು ಎಂದೇನಿಲ್ಲ. ಮಾನಸಿಕವಾಗಿ ಫಿಟ್ ಆಗಿ, ಸಾಮಾನ್ಯ ವ್ಯಾಯಾಮ ಮಾಡಿದರೆ ಸಾಕು.
Advertisement
ರುಜುತಾ ದಿವಾಕರ್, ಪೌಷ್ಟಿಕ ಆಹಾರ ತಜ್ಞೆಪ್ಯಾಕೇಜ್ ಆಹಾರ ತಿನ್ನುವುದಕ್ಕಿಂತ, ಸರಳವಾದ ಮತ್ತು ಸಂಪ್ರದಾಯ ಶೈಲಿಯ ಆಹಾರ ಸೇವಿಸಿದರೆ ಸಾಕು. ಫಿಟ್ನೆಸ್ ಸಾಧಿಸಬಹುದು. ಅಫ್ಯಾನ್ ಆಶಿಕ್, ಜಮ್ಮು ಕಾಶ್ಮೀರದ ಫುಟ್ಬಾಲ್ ಆಟಗಾರ್ತಿ
ಮನೆಗಳಲ್ಲಿ ಇರುವ ಮಹಿಳೆಯರಿಗೂ ಫಿಟೆ°ಸ್ ತುಂಬಾ ಮುಖ್ಯ. ಪ್ರತಿ ದಿನ ಬೆಳಗ್ಗೆ ಧ್ಯಾನ ಮಾಡುತ್ತೇನೆ. ನನಗೆ ಎಂ.ಎಸ್. ಧೋನಿ ಅವರೇ ಸ್ಫೂರ್ತಿ. ಅವರ ಶಾಂತ ಸ್ವಭಾವ ನನಗಿಷ್ಟ. ಮೋದಿ ಕೈ ಅಡುಗೆ
ಬಿಡುವಿದ್ದಾಗ ತಮ್ಮ ಸಮತೋಲಿತ ಆಹಾರವನ್ನು ತಾವೇ ತಯಾರಿಸುವುದಾಗಿ ಮೋದಿ ತಿಳಿಸಿದರು. ನನಗೆ ನುಗ್ಗೇಕಾಯಿಯಿಂದ ಪರೋಟ ಮಾಡಲು ಗೊತ್ತಿದೆ. ಸ್ವತಃ ನಾನೇ ತಯಾರಿಸಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸುತ್ತೇನೆ ಎಂದರು. ಚೆನ್ನಾ ಬತೂರ ಮತ್ತು ಕೊಹ್ಲಿ
ಕೊಹ್ಲಿ ಫಿಟ್ನೆಸ್ ಮಂತ್ರ ಕೇಳಿದ ಮೋದಿ, ಅವರ ಕಾಲೆಳೆಯಲು ಮರೆಯಲಿಲ್ಲ. ನೀವು ದಿಲ್ಲಿಯ ಖ್ಯಾತ ತಿನಿಸು ಚೆನ್ನಾ ಬತೂರದಿಂದ ತುಂಬಾ ದೂರ ಉಳಿದಿದ್ದೀರಿ ಎಂದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಕೊಹ್ಲಿ, ಫಿಟೆ°ಸ್ ಬೇಕಾದರೆ ನಾಲಗೆ ಚಪಲದಿಂದ ದೂರ ಉಳಿಯಲೇಬೇಕು ಎಂದರು. ಪಾಲ್ಗೊಂಡವರು
– ವಿರಾಟ್ ಕೊಹ್ಲಿ: ಕ್ರಿಕೆಟಿಗ – ಮಿಲಿಂದ್ ಸೊಮನ್: ರೂಪದರ್ಶಿ – ದೇವೇಂದ್ರ ಝಜಾರಿಯಾ: ಜ್ಯಾವೆಲಿನ್ ತ್ರೋ ಚಿನ್ನದ ಪದಕ ವಿಜೇತ – ಅಫ್ಯಾನ್ ಆಶಿಕ್: ಜಮ್ಮು – ಕಾಶ್ಮೀರದ ಫುಟ್ಬಾಲ್ ಆಟಗಾರ್ತಿ – ರುಜುತಾ ದಿವಾಕರ್: ಪೌಷ್ಟಿಕ ಆಹಾರ ತಜ್ಞೆ