ರಾಜ್ಯಶಾಸ್ತ್ರವನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಲಿಂಕ್ ಮಾಡಬೇಕು. ರಾಜ್ಯಶಾಸ್ತ್ರ ಕಲಿಕೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಸುಲಭ ಎಂಬ ಅರಿವು ಮೂಡಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರಶ್ನೆಗಳು ಹೆಚ್ಚು ಕೇಳುತ್ತಾರೆ. ಇದರ ಬಗ್ಗೆ ಜಾಗೃತಿ ಮೂಡಿಸಿದರೆ, ಅದು ಉಪಯುಕ್ತವಾಗುತ್ತದೆ.
Advertisement
ರಾಜ್ಯಶಾಸ್ತ್ರದ ಮೇಲಿನ ಆಸಕ್ತಿ ಕಡಿಮೆಯಾಗಲು ಕಾರಣವೇನು? ಇದನ್ನು ಹೇಗೆ ಹೆಚ್ಚುಗೊಳಿಸಬಹುದು?ರಾಜ್ಯಶಾಸ್ತ್ರವಲ್ಲ, ಕಲಾ ವಿಭಾಗದ ಮೇಲೆಯೇ ಆಸಕ್ತಿ ಕಡಿಮೆ ಆಗಿದೆ. ಇದರ ಎಫೆಕ್ಟ್ ರಾಜ್ಯಶಾಸ್ತ್ರಕ್ಕೂ ತಲುಪಿದೆ. ಕಲಾ ವಿಷಯವನ್ನೇ ಹೆಚ್ಚು ಜನಪ್ರಿಯ ಗೊಳಿಸಬೇಕು. ಆಗ ರಾಜ್ಯಶಾಸ್ತ್ರಕ್ಕೂ ಪ್ರಯೋಜನ. ಮಾನವಿಕ ವಿಷಯ ತಿಳಿಯುವುದರಿಂದ ಸಮಾಜದಲ್ಲಿ ಉತ್ತಮ ಪ್ರಜೆ, ವ್ಯಕ್ತಿಯಾಗಲು ಸಾಧ್ಯ. ಸಮತೋಲಿತ ಮನಸ್ಸಿಗೆ ಕಲಾ ವಿಭಾಗ ಅಗತ್ಯ. ಆದರೆ ಈಗ ವ್ಯಕ್ತಿತ್ವ, ಸಾಮಾಜಿಕ ಜೀವನಕ್ಕೆ ಒತ್ತು ಕಡಿಮೆ ಆಗಿದೆ.
ಇದು ಹೇಳಲು ಕಷ್ಟ. ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸಕ್ರಿಯರಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಕಾಲೇಜುಗಳಲ್ಲಿ ಸ್ವೀಪ್ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಿದ್ದಾರೆ. ರಾಜಕೀಯ ಆಗುಹೋಗುಗಳಲ್ಲಿ ಆಸಕ್ತಿ ಕಡಿಮೆ ಆಗಿಲ್ಲ. ಆದರೆ ಸಕ್ರಿಯ ರಾಜಕಾರಣಕ್ಕೆ ಹೋಗುತ್ತಿಲ್ಲ. ರಾಜಕೀಯವನ್ನು ಸಮಗ್ರವಾಗಿ ತಿಳಿದುಕೊಳ್ಳುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡುತ್ತಿಲ್ಲ. ಸಮಗ್ರ ಚಿಂತನೆ, ಮನಸ್ಥಿತಿ ಇಲ್ಲ. ಸಂಕುಚಿತತೆ ಜಾಸ್ತಿ. ವಿಶಾಲ ದೃಷ್ಟಿಕೋನ ಅಗತ್ಯ. ಈಗಿನ ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನ ಮೌಲ್ಯಗಳು ಕುಸಿಯುತ್ತಿದೆ ಎಂದೆನಿಸುತ್ತದೆಯೇ?
ಹಗರಣಗಳನ್ನು ಪರಿಗಣಿಸಿದರೆ ಮೌಲ್ಯಗಳ ಜತೆ ರಾಜಿ ಮಾಡಿಕೊಳ್ಳುತ್ತಿದ್ದೇವೆ ಎಂದೆನಿಸುತ್ತದೆ. ರಾಜಕೀಯ ಎಂದರೆ ಸಮಾಜದ ಒಂದು ಭಾಗ. ಸಾಮಾಜಿಕ ಮೌಲ್ಯಗಳ ವಿಷಯ ಬರುವುದು ಇಡೀಯ ಸಮಾಜಕ್ಕೆ. ಇದು ರಾಜಕೀಯದಲ್ಲೂ ಪ್ರತಿಪಾದನೆ ಆಗುತ್ತದೆ. ಸಾಮಾಜಿಕ ಮೌಲ್ಯ ಕುಸಿದಾಗ ರಾಜಕೀಯಕ್ಕೂ ಪರಿಣಾಮ ಬೀರುತ್ತದೆ.
Related Articles
ರಾಜಕೀಯ ಪಕ್ಷಗಳ ಯೂತ್ ವಿಂಗ್‌ನಲ್ಲಿ ವಿದ್ಯಾರ್ಥಿಗಳು ಸ್ವಲ್ಪ ಕಾಣಸಿಗುತ್ತಾರೆ. ಉಳಿದಂತೆ ರಾಜಕೀಯದಲ್ಲಿ ಭಾಗಿ ಆಗುವುದು ಕಡಿಮೆ. ಪಕ್ಷಗಳ ಯುವ ವಿಭಾಗಗಳ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವುದು ಹೆಚ್ಚು. ಆದರೆ ಇದು ಸರಿಯಲ್ಲ. ನಮ್ಮಲ್ಲಿ ಮತದಾನದ ವಯಸ್ಸನ್ನು 18ಕ್ಕೆ ಇಳಿಸುತ್ತಿದ್ದಂತೆ, ರಾಜಕೀಯ ಪಕ್ಷಗಳು ಯೂತ್ ವಿಂಗ್ ಮೂಲಕ ಕ್ಯಾಂಪಸ್‌ನಲ್ಲಿ ಸಕ್ರಿಯವಾದವು.
Advertisement