Advertisement
ಈ ವರ್ಷವೂ ನಗರದಲ್ಲೇ ಅತ್ಯಧಿಕ ಮಲೇರಿಯಾ ಪ್ರಕರಣಗಳು ಕಂಡು ಬಂದಿವೆ. ಜೂನ್‌ವರೆಗೆ ನಗರದ 1,389 ಮಂದಿಗೆ ಮಲೇರಿಯಾ ದೃಢಪಟ್ಟಿದ್ದರೆ, ಆಗಸ್ಟ್ ವೇಳೆಗೆ ಈ ಸಂಖ್ಯೆ 2,643 ಆಗಿದೆ. ಈ ಪೈಕಿ 2,508 ಪ್ರಕರಣ ಮಹಾನಗರ ಪಾಲಿಕೆ ವ್ಯಾಪ್ತಿಯದ್ದಾಗಿದ್ದರೆ, ಉಳಿದ 135 ಪ್ರಕರಣ ಮಂಗಳೂರು ತಾಲೂಕಿನದ್ದಾಗಿದೆ. ಮಲೇರಿಯಾ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೀಡುತ್ತಿರುವ ಎಚ್ಚರಿಕೆಯ ಹೊರತಾಗಿಯೂ ನಗರದಲ್ಲಿ ಮಲೇರಿಯಾ ಪ್ರಕರಣ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.
ಜನವರಿಯಿಂದ ಆಗಸ್ಟ್ 31ರ ವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 2,508, ಮಂ. ತಾಲೂಕಿನಲ್ಲಿ 135, ಬಂಟ್ವಾಳದಲ್ಲಿ 25, ಪುತ್ತೂರಿನಲ್ಲಿ 39, ಬೆಳ್ತಂಗಡಿಯಲ್ಲಿ 16 ಮಲೇರಿಯಾ ಪ್ರಕರಣ ಕಂಡು ಬಂದರೆ ಸುಳ್ಯದಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಸಿಬಂದಿ ಮಾಹಿತಿ ನೀಡಿದ್ದಾರೆ. ಮಂ.ಗ್ರಾಮೀಣದಲ್ಲಿ ಹೆಚ್ಚು ಡೆಂಗ್ಯೂ
ಜಿಲ್ಲೆಯಲ್ಲಿ ಜನವರಿಯಿಂದ ಸೆ. 6ರ ವರೆಗೆ 476 ಮಂದಿಗೆ ಡೆಂಗ್ಯೂ ಬಾಧಿಸಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 52, ಮಂಗಳೂರು ಗ್ರಾಮೀಣ ಭಾಗದಲ್ಲಿ 96, ಬಂಟ್ವಾಳದಲ್ಲಿ 90, ಪುತ್ತೂರಿನಲ್ಲಿ 85, ಬೆಳ್ತಂಗಡಿಯಲ್ಲಿ 95, ಸುಳ್ಯದಲ್ಲಿ 58 ಮಂದಿಗಳಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಜೂನ್ ತಿಂಗಳವರೆಗೆ 360 ಪ್ರಕರಣ ಪತ್ತೆಯಾಗಿದ್ದು, ಎರಡೂವರೆ ತಿಂಗಳುಗಳಲ್ಲಿ 116 ಪ್ರಕರಣಗಳು ಹೆಚ್ಚಾಗಿವೆ.