Advertisement

ಫಾಲೋವರ್ಸ್‌ ಬರುತ್ತೆಂದು ತಂದೆಯ ಖಾತೆಯಿಂದ 55 ಸಾ.ರೂ ಕಳುಹಿಸಿ ವಂಚನೆಗೆ ಒಳಗಾದ ವಿದ್ಯಾರ್ಥಿ

11:47 AM Mar 09, 2023 | Team Udayavani |

ಮುಂಬಯಿ: ಇದು ಇನ್ಸ್ಟಾಗ್ರಾಮ್‌, ಸ್ನ್ಯಾಪ್‌ ಚಾಟ್‌ ಯುಗ. ನಾವು ಫೋಸ್ಟ್‌, ಸ್ಟೋರಿಗಳನ್ನು ಹೆಚ್ಚು ಹೆಚ್ಚು ಜನರು ನೋಡಬೇಕೆಂದು ಬಯಸುತ್ತೇವೆ. ಹೆಚ್ಚು ಹಿಂಬಾಲಕರು ನಮ್ಮ ಖಾತೆಗೆ ಇರಬೇಕೆಂದು ಬಯಸುತ್ತೇವೆ. ಅಧಿಕ ಫಾಲೋವರ್ಸ್‌ ಗಳು ಬರುತ್ತಾರೆ ಎಂದು ನಂಬಿ ಹಣ ವ್ಯಯಿಸಿದ ಯುವತಿಗೆ ವಂಚನೆ ಆಗಿರುವ ಘಟನೆ ಮುಂಬಯಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ಮುಂಬಯಿಯ ಪೂರ್ವ ಗೋರೆಗಾಂವ್ ಮೂಲದ 16 ವರ್ಷದ ಯುವತಿಯೊಬ್ಬಳು ತನ್ನ ತಂದೆಯ ಮೊಬೈಲ್‌ ನಲ್ಲಿ ಇನ್ಸ್ಟಾಗ್ರಾಮ್‌ ಖಾತೆಯನ್ನು ತೆರೆದು ಅದರಲ್ಲಿ ಸದಾ ರೀಲ್ಸ್‌ ನೋಡುತ್ತಿದ್ದಳು. ಅದೊಂದು ದಿನ ಅವಳ ಖಾತೆಗೆ ಸೋನಲಿ ಸಿಂಗ್‌ ಎನ್ನುವ ಹೆಸರಿನ ಯುವತಿಯೊಬ್ಬಳ ಫಾಲೋ ರಿಕ್ವೆಸ್ಟ್‌ ಬರುತ್ತದೆ.

ಫಾಲೋ ರಿಕ್ವೆಸ್ಟ್‌ ಒಪ್ಪಿದ ಬಳಿ ಸೋನಲಿಯೊಂದಿಗೆ ಯುವತಿ ಚಾಟ್‌ ಮಾಡಲು ಆರಂಭಿಸುತ್ತಾಳೆ. ಒಂದು ದಿನ ಸೋನಲಿ ಯುವತಿ ಬಳಿ ನಿನಗೆ ಅಧಿಕ ಫಾಲೋವರ್ಸ್‌ ಬೇಕಾದರೆ ನಾನು ಹೇಳಿದಾಗೆ ಮಾಡು ಎಂದಿದ್ದಾಳೆ. 50 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್‌ ಬೇಕಾದರೆ ಅದಕ್ಕೆ 6000 ಸಾವಿರ ರೂ. ಖರ್ಚು ಆಗುತ್ತದೆ ಅದನ್ನು ಕೊಟ್ಟರೆ ಮಾಡಿಕೊಡುತ್ತೇನೆ ಎಂದು ಯುವತಿಗೆ ಸೋನಲಿ ಹೇಳುತ್ತಾಳೆ.

ಇದನ್ನೂ ಓದಿ: ಬಿಎಸ್‌ವೈ ಹೇಳಿಕೆಯ ಕಂಪನ; ದ.ಕ. ಜಿಲ್ಲೆ-ಯಾರ ಟೀ ಕಪ್‌ನಲ್ಲಿ ಬದಲಾವಣೆ ಬಿರುಗಾಳಿ ?

ಯುವತಿ ಬಳಿ ಇದದ್ದು 600 ರೂ. ಮಾತ್ರ ಅದನ್ನು ಗೂಗಲ್‌ ಪೇ ಸ್ಕ್ಯಾನರ್‌ ಮೂಲಕ ಕಳುಹಿಸುತ್ತಾಳೆ. 600 ರೂ.ಗೆ 10 ಸಾವಿರ ಫಾಲೋವರ್ಸ್‌ ಬರುತ್ತಾರೆ ಎಂದು ಸೋನಲಿಯ ಮಾತನ್ನು ನಂಬಿದ್ದ ಯುವತಿ, ಫಾಲೋವರ್ಸ್‌ ಬಾರದೇ ಇದದ್ದನ್ನು ನೋಡಿ ಅವರ ಹಣವನ್ನು ವಾಪಾಸ್‌ ಕೇಳುತ್ತಾರೆ.

Advertisement

ಆದರೆ ಯುವತಿಯ ಬಳಿ ತನ್ನಲ್ಲಿರುವ ಎಲ್ಲಾ ಹಣವನ್ನು ಕೊಡು ಅದನ್ನು 600 ರೂ.ಯೊಂದಿಗೆ ವಾಪಾಸ್‌ ಕೊಡುತ್ತೇನೆ ಎಂದು ಸೋನಲಿ ಕೇಳಿದಾಗ, ಯುವತಿ ಅಪ್ಪನ ಖಾತೆಯಿಂದ 8 ಹಂತವಾಗಿ 55,128 ರೂ. ಕಳುಹಿಸುತ್ತಾರೆ.

ದಿನಕಳೆದಂತೆ ಫಾಲೋವರ್ಸ್‌ ಗಳ ಸಂಖ್ಯೆ ಹೆಚ್ಚಾಗಾದ ಕಾರಣ ಹಣವನ್ನು ವಾಪಾಸ್ ಕೇಳಿದಾಗ ಸೋನಲ್‌ ತನ್ನ ಖಾತೆ ಈಗ ಸಮಸ್ಯೆಯಾಗಿದೆ.‌ ಹಣ ಕಳಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ತಂದೆ ಬ್ಯಾಂಕ್‌ ಖಾತೆಯಿಂದ ಹಣ ನೋಡಿದಾಗ ಮಗಳ ಕೃತ್ಯ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾಗಿದ್ದೇನೆ ಎನ್ನುವುದು ಮನಗಂಡು ತಂದೆಯೊಂದಿಗೆ ಸೈಬರ್‌ ಠಾಣೆಗೆ ದೂರು ಕೊಟ್ಟಿದ್ದಾರೆ.

ಯುಪಿಐ ಐಡಿ ಮೂಲಕ ಆರೋಪಿ ಸೋನಲಿಯನ್ನು ಹುಡುಕುವಲ್ಲಿ ಪೊಲೀಸರು ನಿರತರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next