Advertisement
ಆದಾಗ್ಯೂ, ಅಸ್ಸಾಂ ನಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ. ಈಶಾನ್ಯ ಭಾಗದಲ್ಲಿ ದೊಡ್ಡ ಪಾತ್ರವವಹಿಸಿದ ಹಿಮಂತ್ ಬಿಸ್ವಾ ಶರ್ಮಾ ಹಾಗೂ ಸರಬಾನಂದ ಸೋನೊವಾಲ ಅವರ ನಡುವೆ ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಸಂದಿಗ್ಧತೆಯಲ್ಲಿ ಪಕ್ಷ ಇದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ.
Related Articles
Advertisement
ಇನ್ನು, ಅಸ್ಸಾಂ ನ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದು ಮತ್ತು ರಕ್ಷಿಸುವುದು ನಮ್ಮ ಮತ ಪ್ರಚಾರ ಸಭೆಗಳ ಮುಖ್ಯ ಉದ್ದೇಶ ಎಂದು ಅವರು ರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ ಎನ್ನುವುದು ವರದಿಯಾಗಿದೆ.
ಅಸ್ಸಾಂ ನ ಅಕ್ರಮ ವಲಸೆಗಾರರ ವಿರುದ್ಧ ಹೋರಾಡಿದ್ದಕ್ಕಾಗಿ, ಧ್ವನಿ ಎತ್ತಿದ್ದಕ್ಕಾಗಿ ‘ಜತಿಯಾ ನಾಯಕ್’ ಎಂದು ಕರೆಸಿಕೊಳ್ಳುವ ಸರಬಾನಂದ ಅವರಿಗೆ ಈ ಭಾರಿ ಚುನಾವಣೆಯಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ ಎಂಬ ಮಾತು ಅಸ್ಸಾಂ ನ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಗುರುವಾರ ನಡೆದ ಮತ ಪ್ರಚಾರ ಸಭೆಯಲ್ಲಿ ಸರಬಾನಂದ ಪರ ಅಲ್ಲಿನ ಬೆಂಬಲಿಗರು ಹರ್ಷ ವ್ಯಕ್ತ ಪಡಿಸಿದ್ದಾರೆ. ಸರಬಾನಂದ ನಮ್ಮ ಶಾಸಕರಾದ ಮೇಲೆ ಸಾಕಷ್ಟು ಅಭಿವೃದ್ಧಿಯಾಗಿದೆ ಹಾಗೂ ಇನ್ನಷ್ಟು ಅಭಿವೃದ್ಧಿಯಾಗಲಿದೆ ಮುಂದೆಯೂ ಕೂಡ ನಮ್ಮ ಶಾಸಕರು ಇವರೇ ಆಗಬೇಕೆಂದು ನಾವು ಬಯಸುತ್ತೇವೆ ಎಂದು ಅಲ್ಲಿನ ಜನರು ಸರಬಾನಂದ ಪರ ಅಭಿಪ್ರಾಯ ಪಟ್ಟಿರುವುದು ರಾಷ್ಟ್ರಿಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಸರಬಾನಂದ ನಮ್ಮ ಪ್ರದೇಶದ ರಕ್ಷಣೆ ಮಾಡುವಲ್ಲಿ ದೊಡ್ಡ ಪಾತ್ರವಹಿಸಿದ್ದಾರೆ. ಮತ್ತಷ್ಟು ಅಭಿವೃದ್ಧಿಯ ಬಗ್ಗೆ ಭರವಸೆ ನಿಡಿದ್ದಾರೆ, ಹಾಗಾಗಿ ನಾವು ನಮ್ಮ ನಾಯಕನನ್ನಾಗಿ ಮತ್ತೆ ಈ ಭಾರಿಯೂ ಅವರನ್ನೇ ಬಯಸುತ್ತೇವೆ ಎಂದು ಪಕ್ಷದ ಬೆಂಬಲಿಗೊಬ್ಬರು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಇನ್ನು, ಸರಬಾನಂದ ಅವರ ಪ್ರತಿಸ್ಪರ್ಧಿ ಅಸ್ಸಾಂ ನ ಮಾಜಿ ಸಚಿವ, ಕಾಂಗ್ರೆಸ್ ನ ರಜೀಬ್ ಲೋಚನ್ ಪೆಗು, ಕಾಂಗ್ರೆಸ್ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಈಗ ತಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಓದಿ : “ಕೆಲಸ ಕೊಡಿಸುವುದಾಗಿ ಎರಡು ಬಾರಿ ಮನೆಗೆ ಕರೆದು ಅನ್ಯಾಯ ಮಾಡಿದ್ದಾರೆ”: ದೂರು ನೀಡಿದ ಯುವತಿ