ಗುವಾಹಟಿ: ಜಿಹಾದಿ ಕೃತ್ಯಗಳಿಗೆ ಆವರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಆಕ್ರೋಶಿತ ಸ್ಥಳೀಯರು ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಬೊಂಗೈಗಾವ್‌ನ ಮದರಸಾ ಮತ್ತು ಅದರ ಸಮೀಪ ಇರುವ ಮನೆಯನ್ನು ಧ್ವಂಸಗೊಳಿಸಿದ್ದಾರೆ.
ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದ ಮೌಲಿ ಜಲಾಲುದ್ದೀನ್ ಶೇಖ್‌ನ ಬಂಧನದ ನಂತರ ಮದರಸಾವನ್ನು ಜಿಹಾದಿ ಕೃತ್ಯಗಳಿಗೆ ಬಳಸುತ್ತಿದ್ದ ವಿಷಯ ಬೆಳಕಿಗೆ ಬಂದಿತು.
ಅದರಲ್ಲಿ ವಾಸ್ತವ್ಯ ಹೂಡಿದ್ದ ಬಾಂಗ್ಲಾದೇಶಿ ಮೂಲದ ಇಬ್ಬರು ಉಗ್ರರು ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರನ್ನು ಅನ್ಸಾರುಲ್ ಬಾಂಗ್ಲಾ ಟೀಮ್(ಎಬಿಟಿ)ಗೆ ಸೇರಿರುವ ಅಮಿನುಲ್ ಇಸ್ಲಾಂ ಅಲಿಯಾಸ್ ಉಸ್ಮಾನ್ ಅಲಿಯಾಸ್ ಮೆಹದಿ ಹಸನ್ ಹಾಗೂ ಜಹಂಗೀರ್ ಅಲೊಂ ಎಂದು ಗುರುತಿಸಲಾಗಿದೆ.
ಕಾಂಗ್ರೆಸ್ ಒತ್ತಾಯ:
ಬೊಂಗೈಗಾವ್‌ನಲ್ಲಿನ ಮದರಸಾ ಧ್ವಂಸ ಪ್ರಕರಣದ ತನಿಖೆಗೆ ಒತ್ತಾಯಿಸಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ಅಸ್ಸಾಂ ಕಾಂಗ್ರೆಸ್ ಪತ್ರ ಬರೆದಿದೆ.