Advertisement
ಎಂ.ಜಿ.ರಸ್ತೆಯಲ್ಲಿ ಡಿ.31ರಂದು ನಡೆದಿದೆ ಎನ್ನಲಾದ ಸಾಮೂಹಿಕ ಲೈಂಗಿಕ ದೌರ್ಜನ್ಯ, ನಂತರ ಕಮ್ಮನಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಪ್ರಕರಣಗಳ ಬಳಿಕ ಇದೀಗ ಬಾಣಸವಾಡಿಯಲ್ಲಿ ಯುವತಿಯೊಬ್ಬಳ ಮೇಲೆ ದೌರ್ಜನ್ಯಕ್ಕೆ ಯತ್ನ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಸಂತ್ರಸ್ತ ಯುವತಿ ಬಾಬುಸಾಪಾಳ್ಯ ಸಮೀಪ ವಾಸವಿದ್ದಾರೆ. ಪ್ರತಿದಿನ ಕೆಲಸ ಮುಗಿದ ನಂತರ ಅವರು ಜಿಮ್‌ನಲ್ಲಿ ಒಂದು ತಾಸಿಗೂ ಹೆಚ್ಚು ವಕೌìಟ್ ಮಾಡಿ ಮನೆಗೆ ತೆರಳುತ್ತಿದ್ದರು. ಅದೇ ರೀತಿ ಜ.4ರಂದು ಕೂಡ ಜಿಮ್‌ಗೆ ಬಂದಿದ್ದ ಆಕೆ ರಾತ್ರಿ 9 ಗಂಟೆ ವೇಳೆ ಮನೆಗೆ ಮರಳಲು ಕ್ಯಾಬ್ ಬುಕ್ ಮಾಡಿದ್ದರು. ವ್ಯಾಯಾಮ ಮುಗಿಸಿದ ನಂತರ ಜಿಮ್‌ನಿಂದ ಹೊರಬಂದು ರಸ್ತೆ ಬದಿ ಯುವತಿ ಕ್ಯಾಬ್‌ಗ ಕಾಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಆಕೆ ಧರಿಸಿದ್ದ ಟಿ-ಶರ್ಟ್‌ಗೆ ಕೈಹಾಕಿ ಎಳೆದಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಆತಂಕಗೊಂಡ ಆಕೆ ರಕ್ಷಣೆಗೆ ಕೂಗಿಕೊಳ್ಳುತ್ತಿದ್ದಂತೆ ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ. ಈ ಚೀರಾಟದಿಂದ ಭಯಗೊಂಂಡು ಆರೋಪಿಗಳು ಕಾಲ್ಕಿತ್ತಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಯುವತಿ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಹೆಚ್ಚಿದ ಆಕ್ರೋಶ: ಎಂ.ಜಿ.ರಸ್ತೆ, ಕಮ್ಮನಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ರಾಷ್ಟ್ರ ಮಟ್ಟದಲ್ಲಿ ತೀವ್ರ ಜನಾಕ್ರೋಶ ಎದುರಿಸುತ್ತಿರುವ ಬೆಂಗಳೂರು ಪೊಲೀಸರನ್ನು ಈಗ ಬಾಣಸವಾಡಿ ಸಮೀಪ ನಡೆದಿರುವ ಮತ್ತೂಂದು ಘಟನೆಯೂ ಟೀಕೆಗಳಿಗೆ ಗುರಿಯಾಗಿಸಿದೆ.
ರಾಜಧಾನಿಯ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ ಎಂಬ ಧ್ವನಿ ಜನರಿಂದ ಮೊಳಗಿದೆ. ಈ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖಾ ಪ್ರಗತಿಯ ಮಾಹಿತಿ ಪಡೆಯಲು ಠಾಣೆಗೆ ಖುದ್ದು ನಗರ ಪೊಲೀಸ್ ಆಯುಕ್ತರು ತೆರಳಿದ್ದಾರೆ.