Advertisement

ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳು ಅಗತ್ಯ: ಹೆಗ್ಗಡೆ

12:10 PM May 31, 2018 | Team Udayavani |

ಕಾರ್ಕಳ: ವಿದ್ಯಾರ್ಥಿಗಳಿಗೆ ಶ್ರೇಷ್ಠ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳು ಅಗತ್ಯ. ಹೃದಯವಂತಿಕೆ, ಬದುಕಿನ ಮೌಲ್ಯಗಳನ್ನು ಮಕ್ಕಳಲ್ಲಿ ಸೃಷ್ಟಿಸಬೇಕು. ರೋಬೋಟ್‌ಗಳಂತೆ ಆಗಬಾರದು ಎಂದು ಧರ್ಮಸ್ಥಳದ ಧರ್ಮಾದಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ನೂತನ ವಿದ್ಯಾರ್ಥಿನಿಲಯ ಜ್ಞಾನಗೋಪಾಲ್‌ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಅವರು ಮಾತ ನಾಡಿದರು.

ಕೆಲವು ವರ್ಷಗಳ ಹಿಂದೆ ನಗರ ಪ್ರದೇಶದ ವಿದ್ಯಾರ್ಥಿಗಳು ಮಾತ್ರ ಶ್ರೇಷ್ಠರು ಎನ್ನುವ ಭಾವನೆ ಗ್ರಾಮೀಣ ಭಾಗದ ಜನತೆಯಲ್ಲಿತ್ತು. ರ್‍ಯಾಂಕ್‌ಗಳೆಲ್ಲ ಬೆಂಗಳೂರು, ಮೈಸೂರು ಭಾಗದವರಿಗೆ ಸೀಮಿತ ಎನ್ನುವ ಮನೋಭಾವ ನಮ್ಮಲ್ಲಿತ್ತು. ಆದರೆ ಇಂದು ಆ ಮನೋ ಭಾವ ಬದಲಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ರ್‍ಯಾಂಕ್‌ ಪಡೆಯುತ್ತಿದ್ದಾರೆ ಎಂದರು.

ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭವಲ್ಲ. ತ್ಯಾಗ, ದೂರದೃಷ್ಟಿ ಇರ ಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳ ಮನಸ್ಸು ಚಂಚಲವಾಗದೇ ಮನಸ್ಸು ಸ್ಥಿರವಾಗಿಟ್ಟುಕೊಳ್ಳುವ ವ್ಯವಸ್ಥೆ ಗಳು ಶಿಕ್ಷಣ ಸಂಸ್ಥೆಯಲ್ಲಿರಬೇಕು ಎಂದರು.
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕನ್ನು ಒಂದು ಚೌಕಟ್ಟಿಗೆ ತಂದು ಶಿಸ್ತು, ಬದ್ಧತೆಯಿಂದ ಜೀವನ ರೂಪಿಸಿ ಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳ ಪ್ರತಿಭೆ ಆಶ್ಚರ್ಯ ಹುಟ್ಟಿಸುವಂತಿದೆ. ಇಂದಿನ ಕಾಲವನ್ನು ಅರ್ಥೈಸಿಕೊಂಡು ಹೆಜ್ಜೆ ಇಡಬೇಕಿದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಹೋರಾಟದ ಮನೋಭಾವ, ಸೌಹಾರ್ದತೆ, ಸಾಂಸ್ಕೃತಿಕ ಸೌಂದರ್ಯ ಪ್ರಜ್ಞೆಯ ಮನಸ್ಸು, ಸಂಬಂಧಿಕರೊಂದಿಗೆ ಬೆರತುಕೊಳ್ಳು ವುದು ಹೀಗೆ ಎಲ್ಲ ರೀತಿಯ ಮನಸ್ಥಿತಿ ಆವಶ್ಯಕ. ಜ್ಞಾನಸುಧಾ ಕಾಲೇಜು ಕಡಿಮೆ ಅವಧಿಯಲ್ಲಿ ಉತ್ತಮ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿದೆ ಎಂದರು.

ಟ್ರಸ್ಟಿಗಳಾದ ಕರುಣಾಕರ ಶೆಟ್ಟಿ, ವಿದ್ಯಾ ಸುಧಾಕರ ಶೆಟ್ಟಿ, ರಘುರಾಮ್‌ ಶೆಟ್ಟಿ   ಮತ್ತು ಎಂ.ಜಿ. ಗೌಡ್‌, ಕೆ. ಪಾಂಡುರಂಗ ರಾವ್‌, ಪಿಆರ್‌ಒ ಜ್ಯೋತಿ ಪದ್ಮನಾಭ್‌, ಪ್ರೌಢಶಾಲಾ ಪ್ರಾಂಶು ಪಾಲೆ ಉಷಾ ಉಪಸ್ಥಿತರಿದ್ದರು.

Advertisement

ಅಜೆಕಾರು ಪದ್ಮಗೋಪಾಲ ಎಜು ಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಶಿಕ್ಷಕಿ ಸಂಗೀತಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ದಿನೇಶ ಎಂ. ಕೊಡವೂರು ವಂದಿಸಿದರು.

ವಿದ್ಯಾರ್ಥಿ ವೇತನ
ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 30.12 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರ ನೀಡ ಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next