Advertisement
ಹಾರು ಕಪ್ಪೆಯಂತಹ ವಿವರಣೆ: ಎರಡು ಅಥವಾ ಹೆಚ್ಚು ಭೂತಕಾಲಕ್ಕೆ ಸಂಬಂಧಿಸಿದ ಘಟನೆಗಳ ವಿವರಣೆ ಇರುತ್ತದೆ. ಆದರೆ ಘಟನೆಗಳು ಸಮಯಾನುಕ್ರಮದಲ್ಲಿ ಇರುವುದಿಲ್ಲ ಮತ್ತು/ಅಥವಾ ಅದರಲ್ಲಿ ಮುಖ್ಯ ಘಟನೆಗಳು ಬಿಟ್ಟು ಹೋಗಿರಲೂ ಬಹುದು (ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಮಾತನಾಡುವುದು). ನಾಲ್ಕು ವರ್ಷ ಪ್ರಾಯದಲ್ಲಿ ಈ ಬೆಳವಣಿಗೆ ಕಂಡುಬರುತ್ತದೆ.
Related Articles
Advertisement
ವಿಶೇಷ ಘಟ್ಟದಲ್ಲಿ ಅಂತ್ಯವಾಗುವ ಅತ್ಯುನ್ನತ ವಿವರಣೆ ತರ್ಕಬದ್ಧ ರೀತಿಯಲ್ಲಿ ಅಥವಾ ಮಾಮೂಲಿ ರೀತಿಯಲ್ಲಿ ಇರುವಂತಹ ಎರಡು ಅಥವಾ ಹೆಚ್ಚು ಭೂತಕಾಲದ ಘಟನೆಗಳು. ಈ ವಿವರಣೆಯು ಒಂದು ವಿಶೇಷಘಟ್ಟವನ್ನು (ಘಟನೆಯ ವಿಶೇಷ ಘಟ್ಟ ) ಮತ್ತು ಪರಿಸಮಾಪ್ತಿ (ಪರಿಹಾರ) ಯನ್ನು ಹೊಂದಿರುತ್ತದೆ. ಇದು ಆರು ಮತ್ತು ಅದಕ್ಕಿಂತ ಮೇಲಿನ ವಯಸ್ಸಿನಲ್ಲಿ ಕಂಡುಬರುತ್ತದೆ. ಉದಾ: ನನಗೆ ಒಂದು ಜೇನು ನೊಣ ಕಚ್ಚಿತು. ಅದು ನನ್ನ ಪಾದಕ್ಕೆ ಚುಚ್ಚಿತು. ನಾನು ಕಿರುಚಿದೆ, ಕಿರುಚಿದೆ ಮತ್ತು ಜೋರಾಗಿ ಅತ್ತುಬಿಟ್ಟೆ (ವಿಶೇಷ ಘಟ್ಟ). ನನ್ನ ಅಪ್ಪ, ಅಮ್ಮ ಹೊರಗೆ ಬಂದರು ಮತ್ತು ನನ್ನನ್ನು ಮನೆಯೊಳಗೆ ಕರೆದುಕೊಂಡು ಹೋದರು (ಪರಿಸಮಾಪ್ತಿ).ಮಕ್ಕಳಲ್ಲಿನ ವಿವರಣಾ ಕೌಶಲದ ಬೆಳವಣಿಗೆಯ ಆರಂಭಿಕ ಹಂತಗಳು (Hedburg and Stoel – Gammon,, 1986) ಹಂತ 1:
ಒಟ್ಟೊಟ್ಟಾಗಿ ಹೇಳುವುದು
(2 ವರ್ಷ)
ನಿಮ್ಮ ಮಗುವು ಒಂದಕ್ಕೊಂದು ಸಂಬಂಧವೇ ಇಲ್ಲದ ರಾಶಿ ರಾಶಿ ವಿಷಯಗಳನ್ನು ಬೆಸೆದು ಹೇಳಬಹುದು. ಕಥೆಯಲ್ಲಿ ವಿಷಯವನ್ನು ಒಂದಕ್ಕೊಂದು ಬೆಸೆಯಲು ಪೂರಕ ಶಬ್ದವನ್ನು ಬಳಸದೆ ಮಾತುಕತೆಯಲ್ಲಿ ವಿಷಯಗಳು ಆಗಾಗ ಮರುಕಳಿಸ ಬಹುದು ಮತ್ತು ಸರಳ ವರ್ತಮಾನ ಕಾಲವಾಚಕವನ್ನು ಬಳಸಬಹುದು. ಉದಾ: ಒಬ್ಬಳು ಹುಡುಗಿ ಬಿಸ್ಕಿಟ್ ತಿನ್ನುತ್ತಾ ಇದ್ದಾಳೆ, ಒಬ್ಬ ವ್ಯಕ್ತಿ ಕಾರಿನ ಕಡೆ ಹೋದ, ಮಗು ನಿದ್ದೆ ಮಾಡುತ್ತಾ ಇದೆ. ಹಂತ 2:
ಸರಣಿಗಳು (2-3 ವರ್ಷ)
ಈ ಹಂತದಲ್ಲಿ ನಿಮ್ಮ ಮಗುವು ಮಗುವಿನ ಕಥಾ ಭಾಗವನ್ನು ಇಚ್ಛಾನುಸಾರ ಜೋಡಿಸಿ ಹೇಳಲು ಆರಂಭಿಸಬಹುದು. ಈ ಸರಣಿಯಲ್ಲಿ ಒಂದು ಕೇಂದ್ರ ಪಾತ್ರ, ಒಂದು ವಿಷಯ ಅಥವಾ ಪರಿಸರ ಇರಬಹುದು. ಉದಾ: ಅವಳು ತನ್ನ ತಂದೆಯ ಜತೆಗೆ ವಾಸಿಸುತ್ತಿದ್ದಳು. ಅವಳು ತನ್ನ ತಾಯಿಯ ಜತೆಗೆ ವಾಸಿಸುತ್ತಿದ್ದಳು. ಅಜ್ಜ ಮತ್ತು ಅಜ್ಜಿ ಜತೆಗೆ ವಾಸಿಸುತ್ತಿದ್ದರು. ಈ ಮೂರು ಮಕ್ಕಳು ತಮ್ಮ ಅಜ್ಜಿಯ ಜತೆಗೆ ಇದ್ದರು ಮತ್ತು ಈ ಎರಡು ಪ್ರಾಣಿಗಳು ಅವರ ಜತೆ ಇದ್ದವು. ಹಂತ 3:
ಆರಂಭಿಕ ವಿವರಗಳು (2-4 ವರ್ಷ)
ಆರಂಭಿಕ ವಿವರಗಳು, ಒಂದು ಕೇಂದ್ರ ಪಾತ್ರ, ವಿಷಯ ಅಥವಾ ಪರಿಸರ ಇತ್ಯಾದಿ ವಿವರಗಳನ್ನು ಒಳಗೊಂಡ ಸರಣಿಯ ರೂಪದ ವಿವರಗಳು. ಮಗುವಿನ ಚರ್ಚಾ ವಿಷಯ ಮತ್ತು ಪಾತ್ರಗಳ ಮೌಖೀಕ ಚಹರೆಗಳು ಅಥವಾ ದೇಹದ ಭಂಗಿಗಳು ಸರಣಿಯಲ್ಲಿ ಬದಲಾಗುತ್ತಿರುತ್ತವೆ. ಉದಾ: ನನ್ನ ಅಪ್ಪ, ಅವರು ಕೆಲಸಕ್ಕೆ ಹೊರಟು ಹೋದರು. ನನ್ನ ಅಮ್ಮ ಉಳಿದುಕೊಂಡರು ಮತ್ತು ನಿದ್ದೆ ಹೋದರು. ನನ್ನ ಇಬ್ಬರು ಸಹೋದರರು, ಅವರು ಆಟಿಕೆಗಳ ಜತೆಗೆ ಆಡಲು ಹೋದರು. ನನ್ನ ನಾಯಿ, ಅದು ಹೊರಗೆ ಹೋಯಿತು. ನನ್ನ ಕಿಟ್ಟಿ ಬೆಕ್ಕು ಮೇಲೆ ಬಂತು ಮತ್ತು ಅದು ನನಗೆ ಕಚಗುಳಿ ಮಾಡಿತು ಮತ್ತು ಮೇಲೆ ಬಂತು ಮತ್ತು ಮಿಯಾಂ ಅನ್ನಲು ಆರಂಭಿಸಿತು. ಆಮೇಲೆ ನಾನು ಅಳಲು ಆರಂಭಿಸಿದೆ. ಯಾಕೆಂದರೆ ಅದು ನನ್ನನ್ನು ಕಚ್ಚಿತು. ನನ್ನ ಸಹೋದರರು ಓಡುತ್ತಾ ಬಂದರು ಮೈಕ್ ಏನಾಯಿತು ಎಂದು ಕೇಳಿದ. ನನ್ನ ಕಿಟ್ಟಿ ಬೆಕ್ಕು ನಂಗೆ ಕಚ್ಚಿ ಬಿಟ್ಟಿತು ಅಂತ ಹೇಳಿದೆ. ಅಮ್ಮ ಓಡುತ್ತಾ ಬಂದರು, ಮತ್ತು ಅವರು ಏನಾಯಿತು, ಓಹೋ ಕಿಟ್ಟಿ ಬೆಕ್ಕು ನಿನ್ನನ್ನು ಕಚ್ಚಿತಾ, ಸರಿ ಎಂದು ಕೇಳಿದರು. ಕೇಂದ್ರೀಕೃತವಲ್ಲದ ಸರಣಿಗಳು
(4-4 1/2 ವರ್ಷಗಳು)
ಒಂದು ಕೇಂದ್ರೀಕೃತವಲ್ಲದ ಸರಣಿಯಲ್ಲಿ ಕೇಂದ್ರ ಪಾತ್ರಗಳು ಇರುವುದಿಲ್ಲ. ಇವು ಘಟನೆಗಳ ಸರಣಿಗಳಾಗಿದ್ದು ಅವು ವ್ಯವಸ್ಥಿತವಾಗಿ ಅಥವಾ ಕಾರ್ಯ-ಕಾರಣ ಸಂಬಂಧದಿಂದ ಒಂದಕ್ಕೊಂದು ಬೆಸೆದಿರುತ್ತವೆ. ಜೋಡಿಸುವ ಶಬ್ದಗಳಾದ ಮತ್ತು, ಆದರೆ ಯಾಕೆಂದರೆ ಇತ್ಯಾದಿ ಶಬ್ದಗಳು ಇಲ್ಲಿ ಬಳಕೆ ಆಗಿರಬಹುದು.
ಉದಾ: ಈ ಮನುಷ್ಯ ನಡೆಯುತ್ತಾ ಇದ್ದಾನೆ. ಅವನು ಒಂದು ನಾಯಿ ಮತ್ತು ಒಂದು ಬೆಕ್ಕನ್ನು ನೋಡಿದ ಮತ್ತು ನಾಯಿ ಮತ್ತು ಬೆಕ್ಕಿನ ಜತೆಗೆ ಒಂದು ಹುಡುಗಿಯನ್ನೂ ಸಹ ನೋಡಿದ. ಆತ ಹಲೋ ಎಂದು ಹೇಳಿದ. ಆತ ಹಿಂದಕ್ಕೆ ಹೋಗಿ ಸಹೋದರಾ, ಇಲ್ಲಿ ಬಾ ಎಂದು ಹೇಳಿದ. ಹಾಗಾಗಿ ಆಕೆಯ ಅಜ್ಜಿ ಎದ್ದು ಆಕೆಯ ಕಡೆಗೆ ನಡೆದರು ಮತ್ತು ನಿಮ್ಗೆ ಡಾನ್ಸ್ ಮಾಡಲು ಹೋಗ್ಲಿಕ್ಕೆ ಇದೆಯಾ? ಎಂದು ಕೇಳಿದರು. ಅವರು ಡಾನ್ಸ್ ಮಾಡಲು ಹೋದರು ಮತ್ತು ಅದು ಬಹಳ ನಿಧಾನದ ಡಾನ್ಸ್ ಆಗಿತ್ತು. ಅವರು ಹಿಂದಕ್ಕೆ ಬಂದರು. ಆಮೇಲೆ ಈ ಎರಡು ಮಕ್ಕಳು ಬಂದರು. ಆಮೇಲೆ ಮೊದಲಿಗೆ ಅವನು ಹೇಳಿದ. ನಾನಲ್ಲ. ಆಮೇಲೆ ಅವನು ಹೇಳಿದ ಏನು? ನನಗೆ ಹೊರಗೆ ಊಟಕ್ಕೆ ಹೋಗ್ಲಿಕ್ಕೆ ಇದೆ. ಹಾಗಾಗಿ ಅವರು ಊಟಕ್ಕೆ ಹೊರಗೆ ಹೋದರು. ಕೇಂದ್ರೀಕೃತ ಸರಣಿಗಳು (5 ವರ್ಷ)
ಕೇಂದ್ರೀಕೃತ ಸರಣಿಗಳಲ್ಲಿ ಒಂದು ಕೇಂದ್ರ ಪಾತ್ರ ಮತ್ತು ಘಟನೆಗಳ ಒಂದು ವ್ಯವಸ್ಥಿತ ಸರಣಿ ಇರುತ್ತದೆ.
ಈ ಸರಣಿಗಳಲ್ಲಿ ವರ್ಣಿಸಲಾದ ಘಟನೆಗಳು ಸಾಹಸದ ರೂಪವನ್ನು ಪಡೆಯುತ್ತವೆ. ಉದಾ: ಒಂದಾನೊಂದು ಕಾಲದಲ್ಲಿ ಕ್ರಿಸ್ಟೀ ಎಂಬ ಹೆಸರಿನ ತಾಯಿ ಒಬ್ಬಳು ಇದ್ದಳು. ಅವಳ ಗಂಡನ ಹೆಸರು ಟಾಮ್ ಮತ್ತು ಅವರಿಗೆ ಕೆಲವು ಮಕ್ಕಳು ಇದ್ದರು. ಅವರ ಹೆಸರು ಹೀಥರ್ ಮತ್ತು ಕ್ರಿಸ್ಟೀ. ಅವರಲ್ಲಿ ಒಬ್ಬ ಹುಡುಗ ಇದ್ದ. ಅವನ ಹೆಸರು ರಾನಿ. ತಾಯಿ ಹುಡುಗನನ್ನು ಹೊರಗೆ ಹೋಗಿ ಆಡುವಂತೆ ಹೇಳಿದರು. ಅನಂತರ ಹುಡುಗ ಒಳಗೆ ಬಂದು ಹೇಳಿದ ಅಮ್ಮ, ಅಮ್ಮ ನಮ್ಮ ನಾಯಿ ಹೊರಗಡೆ ಇದೆ ಮತ್ತು ಅದು ಬೊಗಳುತ್ತಾ ಇದೆ. ನಾನು ಹೊರಗೆ ಹೋಗಿ ನೋಡುತ್ತೇನೆ ಏನು ನೀನು ಬೊಗಳುತ್ತಿರುವುದು? ಅವನು ಯಾಕೆ ಬೊಗಳ್ತಾ ಇದ್ದಾನೆ ಅಂತ ನಂಗೆ ಗೊತ್ತಿಲ್ಲ, ಟಾಮಿ, ರಾನಿ, ರಾನಿ. ಅವನು ಯಾಕೆ ಬೊಗಳ್ತಾ ಇದ್ದಾನೆ ಅಂತ ನಂಗೆ ಗೊತ್ತಿಲ್ಲಾ. ಅವನಿಗೆ ಒಳಗೆ ಬಬೇìಕಾಗಿದೆ ನಾನು ಅವನನ್ನು ಒಳಗೆ ಕರ್ಕೊಂಡು ಬತೇìನೆ ಅಲ್ಲ, ನಾನು ಅವನನ್ನು ಒಳಗೆ ತತೇìನೆ. ಮಕ್ಕಳಲ್ಲಿ ಆರಂಭಿಕ ವಿವರಣಾ ಕೌಶಲ ಬೆಳವಣಿಗೆಯಿಂದ ಆರಿಸಲಾಗಿದೆ (ಹೆಡºರ್ಗ್ ಆ್ಯಂಡ್ ಸ್ಟಾಯೆಲ್ ಗ್ಯಾಮೊನ್ 1986) .