Advertisement

ಮಹತ್ವದ ತೀರ್ಮಾನ, ಅಭಿವೃದ್ಧಿ ಕಾರ್ಯ ಅನುಷ್ಠಾನ ತೃಪ್ತಿ ತಂದಿದೆ

07:30 AM Mar 08, 2018 | Team Udayavani |

ಮಂಗಳೂರು: ಮಸಾಜ್‌ ಪಾರ್ಲರ್‌ ಹಾಗೂ ಸ್ಕಿಲ್‌ ಗೇಮ್‌ಗಳಿಗೆ ದಾಳಿ, ಪುರಭವನದ ಬಾಡಿಗೆ ದರ ಇಳಿಕೆ ಸೇರಿದಂತೆ ಹಲವಾರು ಮಹತ್ವಪೂರ್ಣ ತೀರ್ಮಾನ ಕೈಗೊಂಡು, 180 ಕೋ.ರೂ.ಗಳಿಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ನನ್ನ ಒಂದು ವರ್ಷ ಅವಧಿಯ ಮೇಯರ್‌ ಹುದ್ದೆ ತೃಪ್ತಿ ತಂದಿದೆ ಎಂದು ಮನಪಾ ನಿರ್ಗಮನ ಮೇಯರ್‌ ಕವಿತಾ ಸನಿಲ್‌ ಹೇಳಿದರು. 

Advertisement

ಬುಧವಾರ ನಗರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಕಾರ್ಪೊರೇಟರ್‌ಗಳು, ಅಧಿಕಾರಿಗಳು, ಮಾಧ್ಯಮದವರ ಸಹಕಾರದಿಂದ ನನ್ನ ಅಧಿಕಾರಾವಧಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ವಿಶೇಷವಾಗಿ ಮಂಗಳೂರಿನ ಜನತೆ ಉತ್ತಮ ಸಹಕಾರ ನೀಡಿರುವುದು ಒಳ್ಳೆಯ ಕೆಲಸ ಕೈಗೊಳ್ಳಲು ಸಹಕಾರಿಯಾಯಿತು ಎಂದರು. 

ನಗರದಲ್ಲಿ 5 ಕಡೆ ಇ-ಟಾಯ್ಲೆಟ್‌ ಅನುಷ್ಠಾನ, ಉದ್ಯಾನವನ ಅಭಿ ವೃದ್ಧಿ, ಸೈನ್‌ಬೋರ್ಡ್‌ಗಳ ಅನುಷ್ಠಾನ, ಶ್ರೀನಿವಾಸ ಮಲ್ಯ ಪ್ರಶಸ್ತಿ ಪ್ರದಾನ ಆರಂಭ, ನನ್ನ ಕನಸಿನ ಯೋಜನೆ ಕ್ಲಾಕ್‌ ಟವರ್‌ ಅಭಿ ವೃದ್ಧಿಗೆ ಚಾಲನೆ ಮೊದಲಾದ ಮಹತ್ತರ ಕಾರ್ಯಕ್ರಮಗಳನ್ನು ಅನು ಷ್ಠಾನಗೊಳಿಸಲಾಗಿದೆ. 

1 ವರ್ಷದ ಅವಧಿಯಲ್ಲಿ ಕ್ಲೀನ್‌ ಸಿಟಿ ಪ್ರಶಸ್ತಿ, ತ್ಯಾಜ್ಯ ನಿರ್ವಹಣೆಗೆ ಪ್ರಶಸ್ತಿ ಬಂದಿರುತ್ತವೆ.  ಉಪಮೇಯರ್‌ ರಜನೀಶ್‌, ಎಂ. ಶಶಿಧರ ಹೆಗ್ಡೆ, ಸಬಿತಾ ಮಿಸ್ಕಿತ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next