ನವದೆಹಲಿ: ಹಿರಿಯ ವಕೀಲರಾದ ಸೌರಭ್ ಕೃಪಾಳ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ಬಡ್ತಿ ನೀಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಸೋಮವಾರ ಶಿಫಾರಸು ಮಾಡಿದೆ.
ಅವರ ನೇಮಕವಾದರೆ, ದೇಶದಲ್ಲಿ ಇದೇ ಮೊದಲ ಬಾರಿಗೆ, ಸಲಿಂಗ ವಕೀಲರೊಬ್ಬರು ಜಡ್ಜ್ ಆಗಿ ಬಡ್ತಿ ಪಡೆದಂತಾಗಲಿದೆ.
ಹೀಗಾಗಿ, ನ್ಯಾಯಾಂಗ ಸೇವೆಯಲ್ಲಿರುವ ಅನೇಕರು ಈ ಬೆಳವಣಿಗೆಯನ್ನು “ಐತಿಹಾಸಿಕ’ ಎಂದು ಬಣ್ಣಿಸಿದ್ದಾರೆ. ನ.11ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ನಮ್ಮ ಕುಟುಂಬದ ತಂಟೆಗೆ ಬಂದರೆ ಹುಷಾರ್: ಬಿಜೆಪಿಗೆ ಎಚ್‌ಡಿಕೆ ಎಚ್ಚರಿಕೆ
2018ರಲ್ಲಿ ಮೊದಲ ಬಾರಿಗೆ ಸೌರಭ್ ಹೆಸರು ಬಡ್ತಿಗೆ ಪ್ರಸ್ತಾಪವಾಗಿತ್ತು. ಆದರೆ, ಅವರ ಸಂಗಾತಿಯು ಯುರೋಪಿಯನ್ ಆಗಿದ್ದು, ಸ್ವಿಸ್ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ, ಹಿತಾಸಕ್ತಿ ಸಂಘರ್ಷ ಉಂಟಾಗಬಹುದು ಎಂದು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ದಿ ಇಂಡಿಯನ್ ಎಕ್ಸ್‌ಪ್ರಸ್ ವರದಿ ಮಾಡಿದೆ.