Advertisement
ದಕ್ಷಿಣ ರಾಜಸ್ಥಾನದ ಅರವಳ್ಳಿ ಬೆಟ್ಟ ಪ್ರದೇಶದ ರನಕ್‌ಪುರ ಎಂಬಲ್ಲಿ ಗುಲಾಬಿ ಚಿರತೆ ಕಾಣಿಸಿಕೊಂಡಿದೆ. ಉದಯ್‌ಪುರ ಮೂಲದ ಹಿತೇಶ್ ಮೋಟ್ವಾನಿ ಎಂಬುವವರು ಅದರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ರನಕ್‌ಪುರ ಮತ್ತು ಕುಂಬಲ್‌ಗರ್ ಪ್ರದೇಶದ ಸ್ಥಳೀಯರು ಈ ಹಿಂದೆ ಅನೇಕ ಬಾರಿ ಈ ಗುಲಾಬಿ ಚಿರತೆಯನ್ನು ಕಂಡಿದ್ದಾಗಿ ಹೇಳಿದ್ದಾರೆ. ಆದರೆ ಇದೇ ಮೊದಲನೇ ಬಾರಿಗೆ ಚಿರತೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಸಾಮಾನ್ಯವಾಗಿ ಭಾರತದಲ್ಲಿ ಕಾಣಿಸಿಕೊಳ್ಳುವ ಚಿರತೆಗಳು ತಿಳಿ ಹಳದಿ, ಹಳದಿ ಮಿಶ್ರಿತ ಕಂದು ಅಥವಾ ಚಿನ್ನದ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಈಗ ಕಾಣಿಸಿಕೊಂಡಿರುವ ಗುಲಾಬಿ ಚಿರತೆಯ ದೇಹವು ಗುಲಾಬಿ ಮಿಶ್ರಿತ ಹಳದಿ ಬಣ್ಣದಲ್ಲಿದೆ. ಇದರ ಮೈ ಮೇಲಿನ ಕಪ್ಪು ಗುರುತು ಕೂಡ ಬೇರೆ ಚಿರತೆಗಳಿಗಿಂತ ವಿಭಿನ್ನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು 5-6 ವರ್ಷದ ಹೆಣ್ಣು ಚಿರತೆ ಎನ್ನಲಾಗಿದೆ. ಈ ಗುಲಾಬಿ ಚಿರತೆಯ ರಕ್ಷಣೆಗಾಗಿ 600 ಚದರ ಕಿ.ಮೀ ರುವ ಕುಂಬಲ್‌ಗರ್ ಕಾಡಿನ ಪ್ರದೇಶಕ್ಕೆ ಸಾರ್ವಜನಿಕರ ಭೇಟಿ ನಿರ್ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.