Advertisement
ಪ್ರಶ್ನೋತ್ತರ ವೇಳೆ ಬಿಜೆಪಿಯ ತಾರಾ ಅನುರಾಧ ಪ್ರಶ್ನೆಗೆ ಉತ್ತರಿಸಿದ ಅವರು, “ಪಾವಗಡದ ಬಳಿ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿದ್ದು, 2018ಕ್ಕೆ ಪ್ರಧಾನಿಯವರಿಂದಲೇ ಉದ್ಘಾಟಿಸಲಾಗುವುದು. ಒಂದು ಎಕರೆ ಭೂಮಿಯನ್ನೂ ಖರೀದಿಸದೆ, ಸ್ವಾಧೀನಪಡಿಸಿಕೊಳ್ಳದೆ ರೈತರಿಗೆ ಬಾಡಿಗೆ ನೀಡುವ ಮೂಲಕ ಅವರ ಜಮೀನಿನಲ್ಲಿ ಘಟಕ ಅಳವಡಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಜೂನ್ ಹೊತ್ತಿಗೆ ಸೋಲಾರ್ ಪಾರ್ಕ್‌ನಿಂದ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ ಎಂದು ತಿಳಿಸಿದರು.
ಸೌರಶಕ್ತಿ ಮೂಲದಿಂದ 55.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗು ತ್ತಿದ್ದು, ವರ್ಷಾಂತ್ಯಕ್ಕೆ 2000 ಮೆಗಾವ್ಯಾಟ್‌ಗೆ ಏರಿಕೆ
ಮಾಡಲು ಪ್ರಯತ್ನಿಸಲಾಗುವುದು. ಇದೇ ಮೊದಲ ಬಾರಿಗೆ ಪ್ರತಿ ತಾಲೂಕು ಮಟ್ಟದಲ್ಲೂ ಸೌರ ವಿದ್ಯುತ್ ಘಟಕ ಅಳವಡಿಸುವ
ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಒಂದು ಸ್ಥಳದಲ್ಲಿ ವಿದ್ಯುತ್ ಉತ್ಪಾದಿಸಿ ಅದನ್ನು ಬೇರೆಡೆ ಸಾಗಿಸುವ ಬದಲಿಗೆ ತಾಲೂಕು ಮಟ್ಟದ
ಪ್ರಸರಣ ಜಾಲವನ್ನೇ ಬಳಸಿಕೊಳ್ಳಲು 110 ತಾಲೂಕುಗಳಲ್ಲಿ ತಲಾ 20 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.