Advertisement
ಸರಕಾರವು ಶಾಂತಿ ಕಾಪಾಡುವಂತೆ ನೀಡಿ ರುವ ಕರೆಯನ್ನೂ ಲೆಕ್ಕಿಸದೇ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ಮಂಗಳವಾರ ಸಂಜೆ ವೇಳೆಗೆ ರಾವಲ್ಪಿಂಡಿಯಲ್ಲಿರುವ ಪಾಕ್ ಸೇನೆಯ ಪ್ರಧಾನ ಕಚೇರಿಗೆ ನುಗ್ಗಿದ್ದಾರೆ. ಸರ್ಗೋಡಾದಲ್ಲಿರುವ ವಾಯುಪಡೆಯು ಸ್ಮಾರಕವನ್ನು ಪುಡಿಗಟ್ಟಿದ್ದಾರೆ. ವ್ಯಾಪಕ ಹಿಂಸಾಚಾರದ ಮುನ್ಸೂಚನೆ ಹಿನ್ನೆಲೆಯಲ್ಲಿ ಸರಕಾರವು ಸಂಜೆಯೇ ಇಸ್ಲಾಮಾಬಾದ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದರೆ, ಇಮ್ರಾನ್ ಬೆಂಬಲಿಗರು ಸೆಕ್ಷನ್ 144 ಅನ್ನು ಉಲ್ಲಂ ಸಿ ಹೋರಾಟ ಆರಂಭಿಸಿದ್ದಾರೆ.
Related Articles
Advertisement
ಮೊದಲೇ ಸುಳಿವು ಸಿಕ್ಕಿತ್ತಾ?
ಇಸ್ಲಾಮಾಬಾದ್ ಹೈಕೋರ್ಟ್ ಆವರಣದಲ್ಲಿ ಏಕಾಏಕಿ ಇಮ್ರಾನ್ ಖಾನ್‌ರನ್ನು ಬಂಧಿಸಿದ್ದು ಅವರ ಬೆಂಬಲಿಗರನ್ನು ಆಘಾತಕ್ಕೀಡುಮಾಡಿದೆ. ಇದಾದ ಬೆನ್ನಲ್ಲೇ ಅವರ ಪಕ್ಷ ಪಿಟಿಐ, ಇಮ್ರಾನ್ ಖಾನ್ ಅವರ ರೆಕಾರ್ಡೆಡ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಇಮ್ರಾನ್ ಅವರು, “ನಿಮ್ಮನ್ನು ಉದ್ದೇಶಿಸಿ ಮಾತನಾಡಲು ನನಗೆ ಮತ್ತೂಂದು ಅವಕಾಶ ಸಿಗಲಿಕ್ಕಿಲ್ಲ’ ಎಂದು ಹೇಳಿದ್ದಾರೆ. ಇದನ್ನು ನೋಡಿದ ಅನೇಕರು, ತಾವು ಅರೆಸ್ಟ್ ಆಗುವ ಬಗ್ಗೆ ಇಮ್ರಾನ್‌ಗೆ ಮೊದಲೇ ಸುಳಿವು ಸಿಕ್ಕಿತ್ತೇ ಎಂದು ಪ್ರಶ್ನಿಸತೊಡಗಿದ್ದಾರೆ. ಮಾಜಿ ಪ್ರಧಾನಿ ವಿರುದ್ಧ 120 ಕೇಸುಗಳು!
ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರ ವಿರುದ್ಧ ಪಾಕಿಸ್ಥಾನದಲ್ಲಿ ಒಟ್ಟು 121 ಪ್ರಕರಣಗಳು ದಾಖಲಾಗಿವೆ. ದೇಶದ್ರೋಹ, ಭ್ರಷ್ಟಾಚಾರ, ಧರ್ಮನಿಂದನೆ, ಹಿಂಸಾಚಾರಕ್ಕೆ ಪ್ರೇರಣೆ, ಭಯೋತ್ಪಾದನೆ ಸೇರಿದಂತೆ ಬೇರೆ ಬೇರೆ ಆರೋಪಗಳಲ್ಲಿ ಅವರು ತನಿಖೆ ಎದುರಿಸುತ್ತಿದ್ದಾರೆ. ಈ ಪೈಕಿ 22 ಪ್ರಕರಣಗಳು ಉಗ್ರವಾದಕ್ಕೆ ಸಂಬಂಧಿಸಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣ(ಅಲ್‌ಖಾದಿರ್ ಟ್ರಸ್ಟ್ ಕೇಸು)ವೊಂದರಲ್ಲಿ ದೇಶದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟುಮಾಡಿರುವ ಕಾರಣ ಇಮ್ರಾನ್ ಖಾನ್‌ರನ್ನು ಬಂಧಿಸಲಾಗಿದೆ. ಅಲ್ಲದೇ ಅವರು ದೇಶದ ಶತ್ರುಗಳೊಂದಿಗೆ ಕೈಜೋಡಿಸಿ, ದೇಶಕ್ಕೆ ಹಾನಿ ಉಂಟು ಮಾಡಲು ಯತ್ನಿಸಿದ್ದಾರೆ.
-ರಾಣಾ ಸನಾವುಲ್ಲಾ, ಪಾಕ್ ಗೃಹ ಸಚಿವ ಇಮ್ರಾನ್ ಖಾನ್ ಅವರ ರಾಜಕೀಯವು ಹಸಿ ಸುಳ್ಳುಗಳು, ಸತ್ಯಕ್ಕೆ ದೂರವಾದ ಆರೋಪ ಗಳು, ಯೂಟರ್ನ್ಗಳಿಂದ ಕೂಡಿದೆ. ದೇಶದ ಕಾನೂನು ತನಗೆ ಅನ್ವಯವಾಗುವುದಿಲ್ಲ ಎಂಬಂತೆ ಅವರು ವರ್ತಿಸುತ್ತಿದ್ದರು.
-ಶೆಹಬಾಜ್ ಷರೀಫ್, ಪಾಕ್ ಪ್ರಧಾನಿ