Advertisement
“ಕದನವಿರಾಮ ಮರುಸ್ಥಾಪನೆ ಸ್ವಾಗತಾರ್ಹ. ಮುಂದಿನ ಜವಾಬ್ದಾರಿಗಳನ್ನು ಸಕ್ರಿಯವಾಗಿ ಜಾರಿಗೊಳಿಸುವ ಹೊಣೆ ಭಾರತದ ಮೇಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದಂತೆ ಕಾಶ್ಮೀರಿ ಜನರ ದೀರ್ಘಕಾಲಿಕ ಬೇಡಿಕೆ ಮತ್ತು ಹಕ್ಕುಗಳನ್ನು ಪೂರೈಸಲು ಭಾರತ ಕ್ರಮ ಕೈಗೊಳ್ಳಬೇಕು’ ಎಂದು ಟ್ವೀಟ್ ಮಾಡಿದ್ದಾರೆ. “ನಾವು ಶಾಂತಿಯ ಪರವಾಗಿ ನಿಲ್ಲುತ್ತೇವೆ. ಮಾತುಕತೆಗಳ ಮೂಲಕ ಬಿಕ್ಕಟ್ಟು ಬಗೆಹರಿಸಲು ಬದ್ಧರಾಗಿದ್ದೇವೆ’ ಎಂದಿದ್ದಾರೆ.
ಬಾಲಾಕೋಟ್ ದಾಳಿಯ ವಿಚಾರದಲ್ಲೂ ಖಾನ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. “ನಾವು ಸೆರೆಯಾದ ಭಾರತೀಯ ಪೈಲಟ್‌ನನ್ನು ಬೀಳ್ಕೊಟ್ಟು ಜಗತ್ತಿಗೆ ಪಾಕಿಸ್ಥಾನದ ಸ್ವಭಾವವನ್ನು ರುಜುವಾತು ಮಾಡಿದೆವು’ ಎಂದು ಎಂದಿದ್ದಾರೆ. ವೀಡಿಯೋ 16 ಕಟ್!
ಬಾಲಾಕೋಟ್ ಏರ್ ಸ್ಟ್ರೈಕ್ ವೇಳೆ ವೀರಾವೇಶದಿಂದ ಪಾಕ್ ಪ್ರವೇಶಿಸಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಹಸ್ತಾಂತರ ವಿಚಾರದಲ್ಲಿ ಪಾಕ್‌ನ ಮತ್ತೂಂದು ದುಷ್ಟ ಬುದ್ಧಿ ತಡವಾಗಿ ಬೆಳಕಿಗೆ ಬಂದಿದೆ. ಅಂದು ಅಭಿನಂದನ್ ಮಾತನಾಡಿದ್ದರು ಎನ್ನಲಾದ 2 ನಿಮಿ ಷಗಳ ವೀಡಿಯೋವನ್ನು ಪಾಕ್ ತನ್ನ ಅನುಕೂಲಕ್ಕೆ ತಕ್ಕಂತೆ 16 ಕಡೆ ತುಂಡರಿಸಿತ್ತು ಎಂಬುದು ಈಗ ಬಯಲಾಗಿದೆ.